Sahil khan: 21ರ ಸುಂದರಿಯನ್ನು ಮದುವೆಯಾದ 50 ವಯಸ್ಸಿನ ನಟ !!

Sahil khan: ಖ್ಯಾತ ನಟ ಮತ್ತು ಫಿಟ್‌ನೆಸ್ ಟ್ರೈನರ್‌ ಸಾಹಿಲ್ ಖಾನ್ ಪತ್ನಿಯನ್ನು ತಮ್ಮ ಅಭಿಮಾನಿಗಳಿಗೆ ಪರಿಚಯಿಸಲು ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದು, ಅದು ಭಾರೀ ಸುದ್ದಿಯಾಗುತ್ತಿದೆ. ಯಾಕೆಂದರೆ 50ರ ಸಾಹಿಲ್ ವರಿಸಿದ್ದು 21ರ ಹುಡುಗಿಯನ್ನು.

https://www.instagram.com/reel/C3cJmnosK5q/?igsh=MWlvMWFxYmltNWhudA==

ಹೌದು, ಸಾಹಿಲ್ ಖಾನ್(Sahil khan) ಅವರು 21ನೇ ವಯಸ್ಸಿನ ಯುವತಿ ಜತೆ 2ನೇ ಮದುವೆಯಾಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. 50ರ ಅಂಚಿನಲ್ಲಿರುವ ಸಾಹಿಲ್ ಇದೀಗ ಸಾಮಾಜಿಕ ಜಾಲತಾಣದಲ್ಲಿ 2ನೇ ಪತ್ನಿಯ ಪರಿಚಯ ಮಾಡಿಸಿದ್ದಾರೆ.

ಅಂದಹಾಗೆ ʻಸುಂದರ ಯುವತಿಯ ಜೊತೆ ಫೋಟೋ ಶೇರ್ ಮಾಡಿಕೊಂಡಿರುವ ನಟ, ಈಕೆ ನನ್ನ ಗೊಂಬೆʼ ಸಾಹಿಲ್‌ ಖಾನ್ ಎಂದಿದ್ದಾರೆ. ಮಾಲ್ಡೀವ್ಸ್‌ನಲ್ಲಿ ಇಬ್ಬರೂ ಜೊತೆಯಾಗಿ ಇರುವ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಈ ಮೂಲಕ 2ನೇ ಮದುವೆ ಬಗ್ಗೆ ನಟ ಮಾಹಿತಿ ನೀಡಿದ್ದಾರೆ.

ಸಾಹಿಲ್ ವಿಡಿಯೋ ಹರಿಬಿಡುತ್ತಿದ್ದಂತೆ ಅದು ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗ್ತಿದೆ.

ಮದುವೆ ವಯಸ್ಸಿಗೆ ಬಂದಿರುವ ಹುಡುಗರು ತಮಗೆ ಹುಡುಗಿ ಸಿಗುತ್ತಿಲ್ಲ ಎಂದು ಗೋಳಾಡುತ್ತಿದ್ದಾರೆ. ಇದರ ನಡುವೆ 50 ವರ್ಷ ಸಮೀಪದಲ್ಲಿರುವ ನಟ ಸಾಹಿಲ್ ಖಾನ್, 21ರ ಹುಡುಗಿಯನ್ನು ಪ್ರೀತಿಸಿ ಮದುವೆಯಾಗಿದ್ದಾರೆ ಎಂಬ ವಿಚಾರ ಇದೀಗ ಚರ್ಚಿತ ವಿಷಯವಾಗಿದೆ.

ಇನ್ನು ಸಾಹಿಲ್ ಖಾನ್ 2003 ರಲ್ಲಿ ನಿಗರ್ ಖಾನ್ ಅವರನ್ನು ವಿವಾಹವಾದರು ಮತ್ತು ಅವರ ಸಂಬಂಧವು ಹೆಚ್ಚು ಕಾಲ ಉಳಿಯಲಿಲ್ಲ. ಸಾಹಿಲ್ ಖಾನ್ ಮತ್ತು ನಿಗರ್ ಖಾನ್ 2005 ರಲ್ಲಿ ವಿಚ್ಛೇದನ ಪಡೆದರು. ಸಾಹಿಲ್ ಖಾನ್ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ ಮತ್ತು ಆಗಾಗ್ಗೆ ಅಪ್ಡೇಟ್ಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ.

Leave A Reply

Your email address will not be published.