D K Suresh: ರಾಜ್ಯದ ಮಹಿಳೆಯರ ಕೈ ಸೇರಲಿದೆ 4,000 – ಕಾಂಗ್ರೆಸ್ ಸಂಸದರಿಂದ ಹೊಸ ಘೋಷಣೆ!!

D K Suresh: ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯದ ಗೃಹಲಕ್ಷ್ಮಿ ಯೋಜನೆಯಡಿ ಈಗಾಗಲೇ ರಾಜ್ಯದ ಪ್ರತಿಯೊಂದು ಮನೆ ಯಜಮಾನಿಗೆ ಎರಡು ಸಾವಿರ ರೂಪಾಯಿಗಳು ಪ್ರತಿ ತಿಂಗಳು ದೊರೆಯುತ್ತಿದೆ. ಆದರೆ ಈ ಬೆನ್ನಲ್ಲೇ ರಾಜ್ಯದ ಮಹಿಳೆಯರಿಗೆ 4000 ಕೈ ಸೇರಲಿದೆ ಎಂದು ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ಅವರು ಹೊಸ ಘೋಷಣೆಯನ್ನು ಮಾಡಿದ್ದಾರೆ.
ಇದನ್ನೂ ಓದಿ: Naked festival: ಈ ವರ್ಷದಿಂದ ಬಂದ್ ಆಗಲಿದೆ ‘ಬೆತ್ತಲೆ ಹಬ್ಬ’ – ನಿಜಕ್ಕೂ ಅಚ್ಚರಿ ಮೂಡಿಸುತ್ತೆ ಕಾರಣ !!
ಹೌದು, ಬೆಂಗಳೂರು ಗ್ರಾಮಾಂತರ ಕಾಂಗ್ರೆಸ್ ಸಂಸದ ಡಿಶಕೆ ಸುರೇಶ್(DK Suresh) ಅವರು ಮಹಿಳೆಯರಿಗೆ ಹೊಸ ಗ್ಯಾರಂಟಿಯ ಭರವಸೆ ನೀಡಿದ್ದಾರೆ. ರಾಜ್ಯದಲ್ಲಿ ಸದ್ಯ ತೆರಿಗೆ ಹಂಚಿಕೆ ತಾರತಮ್ಯದ ವಿಚಾರ ತಾರಕಕ್ಕೇರಿದೆ. ಈ ಕುರಿತು ಮಾತನಾಡುವಾಗ ಡಿ ಕೆ ಸುರೇಶ್ ಅವರು ಮಹಿಳೆಯರಿಗೆ ಹೊಸ ಭರವಸೆ ನೀಡಿದ್ದಾರೆ.
ಅದೇನೆಂದರೆ ಸುರೇಶ್ ಅವರು ಕೇಂದ್ರದವರು ನಮ್ಮ ತೆರಿಗೆ ಹಣವನ್ನು ವಾಪಸ್ ನೀಡಲಿ. ನಮ್ಮ ತೆರಿಗೆ ಹಣವನ್ನು ನಮಗೆ ಕೊಡಿ ಎಂದು ನಾನು ಕೇಳಿದರೆ ನನ್ನನ್ನು ವಿಲನ್ ರೀತಿ ನೋಡ್ತೀರಾ? ನೀವುಗಳು ತೆರಿಗೆ ಹಣ ವಾಪಸ್ ಕೊಟ್ಟಿದ್ದೇ ಆದರೆ ಮಹಿಳೆಯರಿಗೆ ಈಗಿರುವ ಮಾಸಿಕ ಎರಡು ಸಾವಿರದ ಜೊತೆಗೆ ಮತ್ತೆರೆಡು ಸಾವಿರ ರೂಪಾಯಿ ಸೇರಿಸಿ ಕೊಡುತ್ತೇವೆ ಎಂದು ಹೇಳಿದ್ದಾರೆ.