Naked festival: ಈ ವರ್ಷದಿಂದ ಬಂದ್ ಆಗಲಿದೆ ‘ಬೆತ್ತಲೆ ಹಬ್ಬ’ – ನಿಜಕ್ಕೂ ಅಚ್ಚರಿ ಮೂಡಿಸುತ್ತೆ ಕಾರಣ !!

Naked festival: ಜಗತ್ತಲ್ಲಿ ಎಂತೆಲ್ಲಾ ವಿಚಿತ್ರ ಆಚರಣೆಗಳಿವೆ ಅಂದ್ರೆ ಕೆಲವೊಂದನ್ನು ಕೇಳಿದ್ರೆ ದಂಗಾಗಿ ಹೋಗ್ತೀವಿ. ಜಗತ್ತು ಇಷ್ಟು ಮುಂದುವರೆದರೂ ಈ ಆಚರಣೆಗಳಿರುವುದು ಅಚ್ಚರಿ ಎನಿಸುತ್ತದೆ. ಜಪಾನ್‌ನ(Japan) ಕೊನೊಮಿಯಾ ಧಾರ್ಮಿಕ ಕೇಂದ್ರದಲ್ಲಿ ಪ್ರತಿ ವರ್ಷ ಪುರುಷರ ಬೆತ್ತಲೆ ಹಬ್ಬ(Naked festival)ನಡೆಯುತ್ತಿತ್ತು. ಇದನ್ನು ದೊಡ್ಡ ಜಾತ್ರೆಯಂತೆ ಜನ ಸಂಭ್ರಮಿಸುತ್ತಿದ್ದರು. ಕಳೆದ ವರ್ಷವಷ್ಟೇ ಇಲ್ಲಿ ಮಹಿಳೆಯರಿಗೂ ಅವಕಾಶ ಕಲ್ಪಿಸಿಕೊಡಲಾಗುತ್ತಿತ್ತು. ಆದರೀಗ ಈ ಹಬ್ಬ ಕೊನೆಗೊಳ್ಳುವ ಆತಂಕ ಎದುರಾಗಿದೆ.

ಇದನ್ನೂ ಓದಿ: Megan Skye Blankeda: ಅಪ್ರಾಪ್ತ ಬಾಲಕನೊಂದಿಗೆ ಖ್ಯಾತ ನಟಿಯ ಲೈಂಗಿಕ ಕ್ರಿಯೆ – ಖ್ಯಾತ ನಟಿ ಅರೆಸ್ಟ್

ಹೌದು, ಜಪಾನ್‌ನ ಐಚಿ ಪ್ರಿಫೆಕ್ಟರ್‌ನ ಇನಾಜಾವಾ ಪಟ್ಟಣದಲ್ಲಿರುವ ಕೊನೊಮಿಯಾ ಧಾರ್ಮಿಕ ಕೇಂದ್ರದಲ್ಲಿ ಈ ಉತ್ಸವವನ್ನು ಆಯೋಜಿಸಲಾಗುತ್ತದೆ. ಈ ವರ್ಷ ಫೆಬ್ರವರಿ 22 ರಂದು ನಡೆಯುವ ಉತ್ಸವದಲ್ಲಿ ಸುಮಾರು 10,000 ಸ್ಥಳೀಯ ಪುರುಷರು ಭಾಗವಹಿಸುವ ನಿರೀಕ್ಷೆಯಿದೆ. ಮೊದಲ ಬಾರಿಗೆ ಕೇವಲ 40 ಮಹಿಳೆಯರಿಗೆ ಮಾತ್ರ ಅವಕಾಶ ನೀಡಲಾಗಿದೆ. ಆದರೆ ವಿಚಿತ್ರ ಎಂಬಂತೆ ಯುವಕರ ಸಂಖ್ಯೆ ಕಡಿಮೆ ಆಗ್ತಿರುವ ಕಾರಣ ವಿದೇಶದಲ್ಲಿ ಕೆಲ ಹಬ್ಬಕ್ಕೆ ಅಂತ್ಯ ಹಾಡ್ತಿದ್ದಾರೆ.

ಅಂದಹಾಗೆ ಹಬ್ಬವನ್ನು ಪ್ರತಿವರ್ಷ ಫೆಬ್ರುವರಿ ತಿಂಗಳಿನಲ್ಲಿ ಆಚರಿಸಲಾಗುತ್ತದೆ. ದೇಶದಲ್ಲಿ ಯುವಜನರ ಸಂಖ್ಯೆ ಕಡಿಮೆಯಾಗಿರುವುದರಿಂದ ಹಡಕಾ ಮತ್ಸೂರಿ ಹಬ್ಬದ ಎಲ್ಲ ಜವಾಬ್ದಾರಿ ವಯಸ್ಕರ ಮೇಲೆ ಬಿದ್ದಿದೆ. ಎಲ್ಲ ಕೆಲಸ ನಿರ್ವಹಿಸುವುದು ಕಷ್ಟ. ಹಾಗಾಗಿ ಈ ವರ್ಷ ಕೊನೆಯದಾಗಿ ಈ ಹಬ್ಬವನ್ನು ಆಚರಿಸುತ್ತಿದ್ದೇವೆ ಎಂದು ಜಪಾನಿನ ನಾಗರಿಕರು ಹೇಳಿದ್ದಾರೆ.

ಏನಿದು ಬೆತ್ತಲೆ ಹಬ್ಬ?

ಜಪಾನ್‌ನ ಆ್ಯಚಿ ಫ್ರೆಕ್ಷರ್ ಸಮೀಪದ ಇನಝವಾ ಪಟ್ಟಣದಲ್ಲಿ ಈ ಹಬ್ಬ ಅದ್ಧೂರಿಯಾಗಿ ನಡೆಯುತ್ತದೆ.

1650ರಿಂದ ಈ ಪುರುಷರ ಬೆತ್ತಲೆ ಹಬ್ಬ ನಡೆದುಕೊಂಡು ಬರುತ್ತಿದೆ. ಈ ಹಬ್ಬವನ್ನು ಜಾಪನ್ ಸಾಂಪ್ರಾದಾಯಿಕ ಭಾಷೆಯಲ್ಲಿ ಹಡಕ ಮಟ್ಟುರಿ ಎಂದು ಕರೆಯುತ್ತಾರೆ. ಈ ಧಾರ್ಮಿಕ ಹಬ್ಬ ಕೇವಲ ಪುರುಷರಿಗೆ ಮಾತ್ರ ಆಯೋಜಿಸಲಾಗುತ್ತಿತ್ತು. ಈ ಹಬ್ಬದಲ್ಲಿ ಪಾಲ್ಗೊಳ್ಳುವ ಎಲ್ಲರೂ ಕೇವಲ ಲಂಗೋಟಿಯನ್ನು ಮಾತ್ರ ಧರಿಸಬೇಕಾಗುತ್ತದೆ. ಆದ್ದರಿಂದ ಈ ಹಬ್ಬವನ್ನು ನೆಕೆಡ್ ಫೆಸ್ಟಿವಲ್ ಎಂದು ಕೂಡ ಕರೆಯುತ್ತಾರೆ.

ಈ ಹಬ್ಬ ಮಹಿಳೆಯರ ನೃತ್ಯದೊಂದಿಗೆ ಪ್ರಾರಂಭವಾಗುತ್ತದೆ. ಸಂಜೆ ಜನರು ದೇವಸ್ಥಾನದ ಸುತ್ತಲೂ ಪ್ರದಕ್ಷಿಣೆ ಹಾಕುತ್ತಾರೆ. ರಾತ್ರಿ ಅರ್ಚಕರು ದೇವಾಲಯದ ಎತ್ತರದ ಕಿಟಕಿಯಿಂದ ಜನರ ಮೇಲೆ ಕೊಂಬೆಗಳ ಮತ್ತು ಕೋಲುಗಳ ಕಟ್ಟುಗಳನ್ನು ಎಸೆಯುತ್ತಾನೆ. ಅದು ಯಾರ ಕೈಗೆ ಸಿಗುತ್ತದೆಯೋ ಅವರಿಗೆ ಈ ವರ್ಷ ಶುಭವಾಗಲಿದೆ ಎಂಬ ನಂಬಿಕೆಯಿದೆ.

Leave A Reply

Your email address will not be published.