Naga Monk: ಪುರುಷ ಅಘೋರಿಗಳ ಹಾಗೆ ಸ್ತ್ರೀಯರು ಯಾಕೆ ಬೆತ್ತಲಾಗೋದಿಲ್ಲ?

ಮಹಿಳೆಯರು ನಾಗ ಸನ್ಯಾಸಿಯಾಗುವ ಮೊದಲು ಸತತ 6 ರಿಂದ 12 ವರ್ಷಗಳ ಕಾಲ ಬ್ರಹ್ಮಚರ್ಯವನ್ನು ಪಾಲನೆ ಮಾಡಿರಬೇಕು. ಮಹಿಳೆಯರು ಈ ಕಾರ್ಯದಲ್ಲಿ ಯಶಸ್ವಿಯಾದಾಗ ಮಾತ್ರ ಗುರುಗಳು ಸನ್ಯಾಸಿಯಾಗಲು ಅವಕಾಶ ಒದಗಿಸುತ್ತಾರೆ.

ಕುಂಭಮೇಳ ಮತ್ತು ಮಹಾಕುಂಭ ಮೇಳಗಳ ಸಂದರ್ಭದಲ್ಲಿ ಜನರು ಅಘೋರರು ಮತ್ತು ನಾಗಾ ಸಾಧುಗಳನ್ನು ನೋಡಲು ಬರುತ್ತಾರೆ. ಅಘೋರಿಗಳು ಹೋದಲ್ಲೆಲ್ಲಾ ಬೆತ್ತಲೆಯಾಗಿ ಹೋಗುವುದು ಸಹಜ. ಮಹಿಳಾ ನಾಗಾ ಸನ್ಯಾಸಿಗಳು ಸಾರ್ವಜನಿಕವಾಗಿ ಯಾವತ್ತಿಗೂ ಬೆತ್ತಲೆಯಾಗಿರುವುದಿಲ್ಲ. ಮಹಿಳಾ ಸಾಧುಗಳು ಹೊಲಿಗೆ ಹಾಕದ ಬಟ್ಟೆಯನ್ನು ತೊಟ್ಟಿರುತ್ತಾರೆ.

ಯಾಕೆ ಹೆಣ್ಣು ನಾಗಾ ಸಾಧುಗಳ ಬೆತ್ತಲಾಗಲ್ಲ ಎಂದರೇ, ಇದರ ಹಿಂದೆ ವಿಶೇಷ ಕಾರಣವಿದೆ. ಅಖಾರದಲ್ಲಿರುವ ಸ್ತ್ರೀ ನಾಗಾ ಸಾಧುಗಳು ಸ್ವಚ್ಛತೆಯ ಕಾರಣಕ್ಕಾಗಿ ಒಂದೇ ಉಡುಪನ್ನು ಧರಿಸುತ್ತಾರೆ ಎಂಬುದು ಅಖಾರಾದಲ್ಲಿ ಮಾಡಿದ ನಿಯಮವಾಗಿದೆ.

ಕೆಲವು ಸ್ತ್ರೀ ಸಾಧುಗಳಿಗೆ ಅಖಾರಾದ ನಿಯಮಗಳಿಂದ ವಿನಾಯಿತಿ ನೀಡಲಾಗುತ್ತದೆ. ಆದರೆ ಮಹಿಳಾ ಸಾಧುಗಳು ತನ್ನ ಜೀವನ ಪೂರ್ತಿ ಹೊಲಿದ ಬಟ್ಟೆಗಳನ್ನು ಹಾಕಿಕೊಳ್ಳುವುದಿಲ್ಲ.

ಇನ್ನೂ ಸ್ತ್ರೀ ನಾಗಾ ಭಿಕ್ಷುಗಳ ಬಟ್ಟೆ ಗಳಲ್ಲಿ ಗಂಟು ಕಟ್ಟುವಿಕೆಗೆ ವಿಶೇಷ ಕ್ರಮವಿದೆ. ಹೆಣ್ಣು ತಪಸ್ವಿಯು ತನ್ನ ಪೂರ್ತಿ ದೇಹವನ್ನು ಒಂದೇ ಗಂಟಿನ ಸಹಾಯದಿಂದ ಮುಚ್ಚುವ ಬಟ್ಟೆಗಳನ್ನು ಹಾಕಿಕೊಳ್ಳಬೇಕು.

ಸನ್ಯಾಸಿಗಳಾಗಲು ಮಹಿಳೆಯರು ತುಂಬಾ ಕಷ್ಟಕರ ಸವಾಲುಗಳನ್ನು ಮೆಟ್ಟಿ ನಿಲ್ಲಬೇಕು. ಸದ್ಯ ಬಹುತೇಕ ಅಖಾರಗಳಲ್ಲಿ ಮಹಿಳೆಯರು ನಾಗಾ ಸಾಧುಗಳಾಗಿ ದೀಕ್ಷೆ ಪಡೆದುಕೊಳ್ಳುತ್ತಿದ್ದಾರೆ. ಇದರಲ್ಲಿ ವಿದೇಶಿ ಮಹಿಳೆಯರೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂಬುದು ಗಮನಿಸಬೇಕಾದ ವಿಷಯ. ಜುನಾ ಸನ್ಯಾಸಿನ್ ಅಖಾರಾದಲ್ಲಿ ಮುಕ್ಕಾಲು ಭಾಗದಷ್ಟು ಮಹಿಳೆಯರು ನೇಪಾಳದವರು. ನೇಪಾಳದಲ್ಲಿ ಮೇಲ್ಜಾತಿಯ ವಿಧವೆಯರ ಮರುವಿವಾಹವನ್ನು ಸಮಾಜ ಒಪ್ಪುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಈ ವಿಧವೆಯರು ತಮ್ಮ ಮನೆಗಳಿಗೆ ಹಿಂತಿರುಗದೆ ಸಂತರಾಗುತ್ತಾರೆ.

ಮಹಿಳೆ ನಾಗಾ ಸಾಧು ಆದಾಗ ಎಲ್ಲರೂ ಅವಳನ್ನು ಅಮ್ಮಾ ಎಂದು ಕರೆಯಲು ಕರೆಯುತ್ತಾರೆ. ಸ್ತ್ರೀ ನಾಗಾ ಯತಿಗಳು ತಮ್ಮ ಹಣೆಯ ಮೇಲೆ ತಿಲಕವನ್ನು ಹಚ್ಚಿಕೊಳ್ಳುವುದು ಪದ್ಧತಿ.

ನಾಗಾ ಸಂತನಾಗಲು ಇಚ್ಛಿಸುವ ಮಹಿಳೆ ತನ್ನನ್ನು ತಾನು ದೇವರಿಗೆ ಸಮರ್ಪಿತ ವಾಬೇಕು. ಅವಳಿಗೆ ಪ್ರಾಪಂಚಿಕ ಸುಖಗಳಲ್ಲಿ ಆಸಕ್ತಿ ಇರಬಾರದು. ನಾಗ ಸನ್ಯಾಸಿಯಾಗುವ ಮೊದಲು ಹೆಣ್ಣು ಸನ್ಯಾಸಿಯು ತನ್ನ ಪಿಂಡವನ್ನು ದಾನ ಮಾಡಿ, ಹಿಂದಿನ ಜನ್ಮವನ್ನು ತ್ಯಜಿಸಬೇಕು.

ಮಹಿಳೆಯರು ತಮ್ಮ ಕೂದಲನ್ನು ಸಂಪೂರ್ಣವಾಗಿ ತೆಗೆದುಹಾಕಬೇಕು. ಆಮೇಲೆ ನದಿಯಲ್ಲಿ ಪವಿತ್ರ ಸ್ನಾನ ಮಾಡುವ ಮೂಲಕ ಸಾಮಾನ್ಯ ಮಹಿಳೆಯಿಂದ ನಾಗಾ ಸನ್ಯಾಸಿಯಾಗಿ ರೂಪಾಂತರಗೊಳ್ಳುವ ಕ್ರಿಯೆ ಇದಾಗಿದೆ.

ಸ್ತ್ರೀ ನಾಗಾ ತಪಸ್ವಿಗಳು ಅಖಾರಗಳಲ್ಲಿ ವಾಸ ಮಾಡುತ್ತಾರೆ . ಅವರು ಕುಂಭ ವೇಳೆಯಲ್ಲಿ ಮಾತ್ರ ಕಾಣುತ್ತಾರೆ. ಮುಂಜಾನೆ ಬೇಗ ಎದ್ದು ಬೆಳಗ್ಗೆ ಮತ್ತು ಸಂಜೆ ದೇವರಿಗೆ ಪೂಜೆ ಸಲ್ಲಿಸುತ್ತಾರೆ.

Leave A Reply

Your email address will not be published.