Vartur santosh: ‘ಯಾವನೋ ಕಿತ್ತೋದ್ ನನ್ಮಗ’ ಎಂದ ಜಗ್ಗೇಶ್ ಹೇಳಿಕೆಗೆ ಕೊನೆಗೂ ರಿಪ್ಲೇ ಕೊಟ್ಟ ವರ್ತೂರ್ ಸಂತೋಷ್ !!

Share the Article

Vartur santosh: ನವರಸನಾಯಕ’ ಜಗ್ಗೇಶ್(Jaggesh) ಅವರು ‘ರಂಗನಾಯಕ’ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಹುಲಿ ಉಗುರಿನ ವಿಚಾರವನ್ನು ಮಾತನಾಡಿದ್ದು, ‘ಯಾವನೋ, ಕಿತ್ತೋದ್ ನನ್ ಮಗ ಟಿವಿಯಲ್ಲಿ ಸಿಕ್ಕಿಹಾಕಿಕೊಂಡ’ ಎಂದು ವರ್ತೂರು ಸಂತೋಷ್ (Vartur santosh)ಬಗ್ಗೆ ಹಗುರವಾಗಿ ಮಾತನಾಡಿದ್ದರು. ಈ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಸದ್ಯ ಈ ಜಗ್ಗೇಶ್ ಅವರ ಹೇಳಿಕೆ ಕುರಿತು ವರ್ತೂರು ಸಂತೋಷ್ ಪ್ರತಿಕ್ರಿಯಿಸಿದ್ದಾರೆ.

 

ಅಂದಹಾಗೆ ಈ ಬಗ್ಗೆ ಮಾತನಾಡಿದ ವರ್ತೂರು ಸಂತೋಷ್(Vartur santosh), ‘ಬಿಡಿ ಅವರು ದೊಡ್ಡವರು. ನಾನು ಹೇಳಲಿಚ್ಛಿಸುವುದು ಇಷ್ಟೆ, ‘ಕಾಲೈ ತನ್ನೈ ನಮಃ’ ಅಷ್ಟೆ. ಎಲ್ಲಾದಕ್ಕೂ ಉತ್ತರ ಕೊಡಲೇ ಬೇಕು ಅಂತೇನೂ ಇಲ್ಲ. ಕೆಲವೊಂದಕ್ಕೆ ಉತ್ತರ ಕೊಡಬೇಕು. ಕೆಲವೊಂದಕ್ಕೆ ಮೌನವಾಗಿದ್ದರೆ ಸಾಕು. ಸುದೀಪಣ್ಣನ ಬಳಿ ನಾನು ಕೆಲವೊಂದು ವಿಚಾರಗಳನ್ನು ಕಲಿತಿದ್ದೀನಿ. ಕೆಲವೊಮ್ಮೆ ಮಾತನಾಡದೇ ಸುಮ್ಮನಿದ್ದರೆ ಆ ಸೈಲೆಂಟ್ ಉತ್ತರ ಕೊಡುತ್ತೆ ಅಂತ. ತೂಕದ ಜೊತೆ ತೂಕವನ್ನು ಅಳೆಯಬೇಕಾದರೆ ತೂಕಕ್ಕೆ ತೂಕ ಸರಿ ಇರಬೇಕು’ ಎಂದಿದ್ದಾರೆ.

ಇದನ್ನೂ ಓದಿ : ನಿಮ್ಮಲ್ಲಿ 2 ಇಪಿಎಫ್, ಯುಎಎನ್ ಖಾತೆ ಇದೆಯಾ?ಅದಷ್ಟು ಬೇಗ ವಿಲೀನಗೊಳಿಸಿ!!

Leave A Reply