Dr G parameshwar: ಮುಸ್ಲಿಂಮರಿಗೆ ಹೆಚ್ಚು ಅವಕಾಶ ನೀಡುವುದೇ ನಮ್ಮ ಕಾಂಗ್ರೆಸ್ ನೀತಿ – ಗೃಹ ಸಚಿವ ಡಾ ಪರಮೇಶ್ವರ್!!

Dr G parameshwar: ದೇಶದಲ್ಲಿ ಅನೇಕರು ಅಲ್ಪಸಂಖ್ಯಾತರಿದ್ದಾರೆ. ಅವರಿಗೆ ಹೆಚ್ಚು ಅವಕಾಶಗಳು ಸಿಗಬೇಉ. ಅಂತೆಯೇ ಮುಸ್ಲಿಂಮರು ಕೂಡ. ಹೀಗಾಗಿ ಅವರಿಗೂ ಎಲ್ಲಾ ಕ್ಷೇತ್ರಗಳಲ್ಲಿ ಹೆಚ್ಚಿನ ಅವಕಾಶ ನೀಡಬೇಕೆಂಬುದು ನಮ್ಮ ಆಸೆ, ಕಾಂಗ್ರೆಸ್ ನೀತಿ ಕೂಡ ಅದೇ ಎಂದು ಗೃಹ ಸಚಿವ ಡಾ ಪರಮೇಶ್ವರ್(Dr G Parameshwar)ಅವರು ಹೇಳಿದ್ದಾರೆ.

ಹೌದು, ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ದಲಿತರು, ಹಿಂದುಳಿದವರು, ಮೂಲನಿವಾಸಿಗಳು ಅಂತಾ ವ್ಯಾಖ್ಯಾನ ಮಾಡಿದ್ದಾರೆ. ಯಾವ ಸಮುದಾಯಗಳು ಹಿಂದೆ ಉಳಿದಿವೆ. ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದೆ ಇರುವವರನ್ನು ಹಿಂದುಳಿದವರು ಎಂದು ಕರೆಯುತ್ತೇವೆ. ಈ ದೇಶದಲ್ಲಿ 16% ರಿಂದ 18% ಅಲ್ಪಸಂಖ್ಯಾತರಿದ್ದಾರೆ. ಅವರಿಗೆ ಹಿಂದುಳಿದವರು ಅಂತೀವಿ. ಸಂವಿಧಾನದ ಆಶಯಗಳಂತೆ ಅವರಿಗೆ ಅವಕಾಶಗಳು ಸಿಗಬೇಕು. ಅದೇ ಕಾಂಗ್ರೆಸ್ ಪಕ್ಷದ ನೀತಿ. 1885 ರಲ್ಲಿ ಮಾಡಿದ ನಮ್ಮ ನೀತಿಗಳು ಇನ್ನೂ ಬದಲಾಗಿಲ್ಲ. ಅಲ್ಪ ಸಂಖ್ಯಾತರಿಗೆ ನಾವು ಕಾಂಗ್ರೆಸ್ ಪಕ್ಷದವರು ಹೆಚ್ಚಿನ ಪ್ರೋತ್ಸಾಹ ಕೊಡ್ತೀವಿ ಎಂದು ಹೇಳಿದ್ದಾರೆ.

1 Comment
  1. […] ಇದನ್ನೂ ಓದಿ: Dr G parameshwar: ಮುಸ್ಲಿಂಮರಿಗೆ ಹೆಚ್ಚು ಅವಕಾಶ ನೀಡ… […]

Leave A Reply

Your email address will not be published.