Ayodhya rama darshan: ಇನ್ನಷ್ಟು ಸುಲಭವಾಗಿದೆ ಅಯೋಧ್ಯೆ ರಾಮನ ದರ್ಶನ – ಹೀಗೆ ಮಾಡಿ ಬೇಗ ಪಾಸ್ ಪಡೆಯಿರಿ
Ayodhya rama darshan: ಅಯೋಧ್ಯಾ ಪುರಿಯಲ್ಲಿ ಶ್ರೀರಾಮ ಪ್ರಭು ವಿರಾಜಮಾನವಾಗಿದ್ದು, ಸ್ವಾಮಿಯ ದರ್ಶನಕ್ಕೆ ಭಕ್ತಾದಿಗಳು ಹಾತೊರೆಯುತ್ತಿದ್ದಾರೆ. ದಿನನಿತ್ಯವೂ ಲಕ್ಷಾಂತರ ಸಂಖ್ಯೆಲ್ಲಿ ಶ್ರೀರಾಮನ ದರ್ಶನ(Ayodhya rama darsha) ಪಡೆದು ಪುನೀತರಾಗುತ್ತಿದ್ದಾರೆ. ಈ ಬೆನ್ನಲ್ಲೇ ಭಕ್ತಾದಿಗಳಿಗಿನ್ನು ರಾಮನ ದರ್ಶನ ಇನ್ನಷ್ಟು ಸುಲಭವಾಗಲಿದೆ. ಇದಕ್ಕೆ ಈ ಕೂಡಲೇ ನೀವು ಪಾಸ್ ಪಡೆಯಿರಿ.
ಹೌದು, ಭಕ್ತಾದಿಗಳಿಗೆ ರಾಮಲಲ್ಲಾನ ದರ್ಶನವನ್ನು ಮತ್ತಷ್ಟು ಸುಗಮಗೊಳಿಸಲೈ ಮುಂದಾಗಿರುವ ರಾಮ ಮಂದಿರ ಟ್ರಸ್ಟ್ ಕಳೆದ ಶನಿವಾರದಿಂದ ‘ಸುಗಮ ದರ್ಶನ'(Sugam darshan) ಸೌಲಭ್ಯವನ್ನು ಪ್ರಾರಂಭಿಸಿದೆ. ಅಂದರೆ ಸುಗಮ ದರ್ಶನ’ ಪಾಸ್ ಹೊಂದಿರುವವರಿಗೆ ಪ್ರತ್ಯೇಕ ಸರತಿ ಸಾಲು ವ್ಯವಸ್ಥೆ ಮೂಲಕ ಅನುಕೂಲ ಮಾಡಿಕೊಡಲಾಗುತ್ತಿದೆ. ‘ಸುಗಮ ದರ್ಶನ’ಕ್ಕೆ ತಲಾ ಎರಡು ಗಂಟೆಗಳ ಕಾಲ ಆರು ಸ್ಲಾಟ್‌ಗಳನ್ನು ರಚಿಸಲಾಗಿದೆ.
ಅಂದಹಾಗೆ ದೇವರ ಆರತಿ ದರ್ಶನವನ್ನು ದಿನಕ್ಕೆ ಮೂರು ಬಾರಿ ನೀಡಲಾಗುತ್ತಿದೆ (ಬೆಳಿಗ್ಗೆ 4 ಗಂಟೆಗೆ ಮಂಗಳ ಆರತಿ, 6.15 ಕ್ಕೆ ಶೃಂಗಾರ ಆರತಿ ಮತ್ತು ರಾತ್ರಿ 10 ಗಂಟೆಗೆ ಶಯನ ಆರತಿ) ಸಮಯದಲ್ಲಿ. ಇದರಲ್ಲಿ ಪ್ರತಿ ಸ್ಲಾಟ್‌ಗೆ 100 ಪಾಸ್‌ಗಳನ್ನು ನೀಡಲಾಗುತ್ತಿದೆ. ಈಗಾಗಲೇ ಸ್ಲಾಟ್ ಗಳನ್ನು ಭಕ್ತರು ಮುಂದಿನ 15 ದಿನಗಳವರೆಗೆ ಕಾಯ್ದಿರಿಸಿದ್ದಾರೆ.
ಹೇಗೆ ಬುಕ್ ಮಾಡುವುದು?
ವಯಸ್ಸಾದವರು ಮತ್ತು ತಾಂತ್ರಿಕ ಪರಿಣತರಲ್ಲದ ವ್ಯಕ್ತಿಗಳು ದೇವಾಲಯದ ಸಂಕೀರ್ಣದ ಬಳಿ ಇರುವ ಟ್ರಸ್ಟ್ ಕಚೇರಿಯಲ್ಲಿ ಪಾಸ್‌ಗಳನ್ನು ಪಡೆಯಬಹುದು. ಟ್ರಸ್ಟ್ ಆನ್‌ಲೈನ್ ಮತ್ತು ಆಫ್‌ಲೈನ್ ಬುಕಿಂಗ್‌ಗಾಗಿ ಕೋಟಾವನ್ನು ರಚಿಸಿದೆ. ಇದರ ಮೂಲಕ ಭಕ್ತಾದಿಗಳು ಸ್ಲಾಟ್ ಬುಕ್ ಮಾಡಬುಹುದು. ಜೊತೆಗೆ ಬುಕ್ ಮಾಡುವಾಗ ಯಾವುದಾದರು ಗುರುತಿನ ಚೀಟಿ ನೀಡಿ, ಕೊನೆಗೆ ಬುಕಿಂಗ್ ಐಡಿ ಕೊಂಡೊಯ್ಯಬೇಕಾಗುತ್ತದೆ.