Section 80TTB: ಉಳಿತಾಯದಿಂದ ದೊರೆಯುವ ಬಡ್ಡಿ ಮೇಲೆ ಹಿರಿಯ ನಾಗರಿಕರಿಗೆ ತೆರಿಗೆ ವಿನಾಯಿತಿ!!
Personal Finance: ಸೆಕ್ಷನ್ 80 ಟಿಟಿಬಿ ಅಡಿಯಲ್ಲಿ ಹಿರಿಯ ನಾಗರಿಕರು ತಮ್ಮ ಠೇವಣಿಗಳಿಂದ ಬರುವ ಬಡ್ಡಿಯನ್ನು ಆದಾಯದಲ್ಲಿ ತೆರಿಗೆ ವಿನಾಯಿತಿಯನ್ನು ಪಡೆಯಬಹುದು. ಅಂಚೆ ಕಚೇರಿ, ಬ್ಯಾಂಕ್ ಮತ್ತು ಸಹಕಾರಿ ಬ್ಯಾಂಕ್‌ಗಳಲ್ಲಿ ಇಟ್ಟ ಠೇವಣಿಗಳ ಮೇಲೆ 50,000 ಕನಿಷ್ಠ ರೂಪಾಯಿವರೆಗೆ ಉಳಿಕೆ ಮಾಡಬಹುದು.
ಪ್ರಮುಖ ಅಂಶಗಳು
ಹಿರಿಯ ನಾಗರಿಕ ಎಂದರೆ 60 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವ
ಬ್ಯಾಂಕ್ ಠೇವಣಿಗಳ ಮೇಲಿನ ಬಡ್ಡಿ ನೀಡಲಾಗುತ್ತದೆ.
ಸಹಕಾರಿ ಸೊಸೈಟಿಯಲ್ಲಿನ ಠೇವಣಿಗಳ ಬಡ್ಡಿ
ಅಂಚೆ ಕಚೇರಿ ಠೇವಣಿಗಳ ಮೇಲಿನ ಬಡ್ಡಿ
ಹಿರಿಯ ನಾಗರಿಕರ ಠೇವಣಿಗಳ ಮೇಲಿನ ಬಡ್ಡಿ ಪಾವತಿಯಿಂದ 50,000 ರೂಪಾಯಿವರೆಗೆ ಬ್ಯಾಂಕುಗಳು ಯಾವುದೇ ತೆರಿಗೆ ಅಥವಾ ಟಿಡಿಎಸ್ ಕಡಿತಗೊಳಿಸಲು ಸಾಧ್ಯವಿಲ್ಲ.
50,000 ರೂಪಾಯಿಗಿಂತ ಹೆಚ್ಚಿನ ಬಡ್ಡಿಯ ಮೊತ್ತವು ತೆರಿಗೆಗೆ ಅರ್ಹವಾಗಿರುವುದರಿಂದ, ಹಿರಿಯ ನಾಗರಿಕರಿಗೆ ಅನ್ವಯವಾಗುವ ಸ್ಲ್ಯಾಬ್ ದರದ ಪ್ರಕಾರ ತೆರಿಗೆಯನ್ನು ನೀಡಲಾಗುತ್ತದೆ.
ಉಳಿತಾಯದಿಂದ ಬರುವ ಬಡ್ಡಿ ಆದಾಯದ ಮೇಲೆ ಹಿರಿಯ ನಾಗರಿಕರಿಗೆ ತೆರಿಗೆ ವಿನಾಯಿತಿ
ತೆರಿಗೆಗೆ ಸಂಬಂಧ ಪಟ್ಟಂತೆ ಭಾರತೀಯ ಹಿರಿಯ ನಾಗರಿಕರಿಗೆ ಹೆಚ್ಚುವರಿ ವಿನಾಯಿತಿ ನೀಡಲಾಗಿದೆ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80TTB ಯು ಭಾರತದ ಹಿರಿಯ ನಾಗರಿಕರು ತಮ್ಮ ಠೇವಣಿ ಇಂದ ಪಡೆದುಕೊಳ್ಳುವ ಬಡ್ಡಿ ಆದಾಯಕ್ಕೆ ಸಂಬಂಧಿಸಿದಂತೆ ತೆರಿಗೆ ವಿನಾಯಿಗಳ ಬಗ್ಗೆ ವಿವರಿಸುತ್ತದೆ. 2018ರ ಹಣಕಾಸು ಬಜೆಟ್‌ನಲ್ಲಿ ಮುಖ್ಯವಾಗಿ ಹಿರಿಯ ನಾಗರಿಕರಿಗೆ ಹಲವಾರು ಪ್ರಯೋಜನಗಳನ್ನು ಪರಿಚಯಿಸಲಾಯಿತು. ಅವುಗಳಲ್ಲಿ ಸೆಕ್ಷನ್ 80 ಟಿಟಿಬಿ ಕೂಡಾ ಒಂದಾಗಿದೆ.
ಮುಂಬೈನ ತೆರಿಗೆ ಮತ್ತು ಹೂಡಿಕೆ ತಜ್ಞರಾಗಿರುವ ಬಲ್ವಂತ್ ಜೈನ್ ಅವರು ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಸೆಕ್ಷನ್ 80 ಟಿಟಿಬಿ ಅಡಿಯಲ್ಲಿ, 60 ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟ ಭಾರತೀಯರು ಈ ವಿನಾಯಿತಿ ಪಡೆಯಬಹುದು. ಭಾರತೀಯ ಹಿರಿಯ ನಾಗರಿಕರು, ಅಂಚೆ ಕಚೇರಿ, ಬ್ಯಾಂಕ್ ಮತ್ತು ಸಹಕಾರಿ ಸೊಸೈಟಿಗಳಲ್ಲಿ ಇಟ್ಟ ಠೇವಣಿಗಳಿಂದ ಪಡೆಯುವ ಬಡ್ಡಿಗೆ 1 ವರ್ಷಕ್ಕೆ 50,000 ರೂಪಾಯಿ ತೆರಿಗೆ ವಿನಾಯಿತಿ ಪಡೆಯಬಹುದು.
ವಿನಾಯಿತಿಯು ಉಳಿತಾಯ ಖಾತೆಯ ಬಡ್ಡಿ, ನಿರಖು ಠೇವಣಿ ಬಡ್ಡಿ ಮತ್ತು ಆವರ್ತಿತ ಠೇವಣಿಗಳಿಂದ ಬರುವ ಎಲ್ಲ ಬಡ್ಡಿಗಳು ಇದರಲ್ಲಿ ಸೇರಿಕೊಂಡಿರುತ್ತವೆ. ಜೊತೆಗೆ ಹಿರಿಯ ನಾಗರಿಕರ ಉಳಿತಾಯ ಯೋಜನೆಯಡಿ ಮಾಡುವ ಠೇವಣಿಗಳಿಂದ ಗಳಿಸಿದ ಬಡ್ಡಿಗೆ ಒಟ್ಟಾರೆಯಾಗಿ 50,000 ರೂಪಾಯಿಗಳ ಪರಿಧಿ ಯಲ್ಲಿ ವಿನಾಯಿತಿ ಪಡೆಯಬಹುದು.
ಸೆಕ್ಷನ್ 80 ಟಿಟಿಎ ಮತ್ತು ಸೆಕ್ಷನ್ 80 ಟಿಟಿಬಿ ಸೆಕ್ಷನ್ ನಡುವಿನ ವ್ಯತ್ಯಾಸಗಳೇನು?
ಇವು ಎರಡೂ ಸೆಕ್ಷನ್‌ಗಳು ಬಡ್ಡಿ ಆದಾಯದ ಮೇಲಿನ ಕಡಿತಕ್ಕೆ ಸಂಬಂಧ ಪಟ್ಟಿವೆ .ಆದರೆ, ಸೆಕ್ಷನ್ 80 ಟಿಟಿಎ, 60 ವರ್ಷಕ್ಕಿಂತ ಕಡಿಮೆ ವಯಸ್ಸಿನ ವ್ಯಕ್ತಿಗಳು ಮತ್ತು ಹಿಂದೂ ಅವಿಭಜಿತ ಕುಟುಂಬದ ವ್ಯಕ್ತಿಗಳು ತಮ್ಮ ಬ್ಯಾಂಕ್, ಸಹಕಾರಿ ಬ್ಯಾಂಕ್ ಅಥವಾ ಅಂಚೆ ಕಚೇರಿಗಳಲ್ಲಿ ಹೊಂದಿರುವ ಉಳಿತಾಯ ಖಾತೆಗಳಿಗೆ ಮಾತ್ರ 10,000 ರೂಪಾಯಿವರೆಗೆ ಬಡ್ಡಿ ಕಡಿತಕ್ಕೆ ಅರ್ಹರಾಗಿರುತ್ತಾರೆ ಎಂದು ಹೇಳಲಾಗುತ್ತದೆ.ಈ ಸೆಕ್ಷನ್ ಅಡಿಯಲ್ಲಿ ಬರುವ ಪ್ರಯೋಜನಗಳು ಹಿರಿಯ ನಾಗರಿಕರಿಗೆ ದೊರೆಯುವುದಿಲ್ಲ.