Physical Abuse: ಕೊಡಗಿನಲ್ಲೊಂದು ಹೇಯ ಕೃತ್ಯ; 2 ವರ್ಷದ ಕಂದನ ಮೇಲೆ 45ರ ವ್ಯಕ್ತಿಯಿಂದ ಅತ್ಯಾಚಾರ

Madikeri: ಕೊಡಗಿನಲ್ಲೊಂದು ಪೈಶಾಚಿಕ ಕೃತ್ಯವೊಂದು ನಡೆದಿದೆ. ಇನ್ನೂ ಜಗತ್ತನ್ನೇ ಕಣ್ಣು ಬಿಟ್ಟು ಸರಿಯಾಗಿ ನೋಡದ ಕಂದವೊಂದರ ಮೇಲೆ ಕಾಮುಕನೋರ್ವ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ನಡೆದಿದೆ.

ಇದನ್ನೂ ಓದಿ: Karnataka News: ರಾಜ್ಯ ವಿಭಜನೆ!! ಎರಡು ಹೊಸ ಜಿಲ್ಲೆಗಳು ಉದಯ? ಆ ಜಿಲ್ಲೆಗಳು ಯಾವುವು?

ಕೇವಲ ಎರಡು ವರ್ಷದ ಈ ಮಗುವಿನ ಮೇಲೆ 45 ವರ್ಷದ ಕಾಮುಕನೋರ್ವ ಅತ್ಯಾಚಾರ ಮಾಡಿದ ಘಟನೆ ನಡೆದಿದೆ. ಕಾಮುಕನ ಈ ಪೈಶಾಚಿಕ ಕೃತ್ಯಕ್ಕೆ ನಲುಗಿದ ಮಗು ಗಂಭೀರವಾಗಿ ಗಾಯಗೊಂಡಿದ್ದು, ಸರಕಾರಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.

ಸಿದ್ಧಾಪುರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಿನ್ನೆ ಸಂಜೆ ನಡೆದಿದೆ. ಮಣಿ ಎಂಬ ಕಾರ್ಮಿಕ ಕುಡಿದ ಮತ್ತಿನಲ್ಲಿ ಈ ಕೃತ್ಯ ಎಸಗಿದ್ದಾನೆ. ಮಗುವಿನ ಜನನಾಂಗದಲ್ಲಿ ತೀವ್ರ ರಕ್ತವಾಗುತ್ತಿದ್ದು, ಮಗುವನ್ನು ಪರಚಿ, ಕಚ್ಚಿದ್ದ ಎಂದು ಹೇಳಲಾಗಿದೆ. ಮಹಿಳಾ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಆರೋಪಿ ಮಣಿಯನ್ನು ಬಂಧನ ಮಾಡಲಾಗಿದೆ.

Leave A Reply

Your email address will not be published.