Holiday: ನಾಳೆ ಈ ಜಿಲ್ಲೆಗಳಲ್ಲಿ ರಜೆ ಘೋಷಣೆ

ಅರ್ಹ ಮತದಾರರಿಗೆ ಫೆಬ್ರವರಿ 16ರಂದು ಸಾಂದರ್ಭಿಕ ರಜೆಯನ್ನು ಆದೇಶ ಮಾಡಲಾಗಿದೆ. ಈ ಜಿಲ್ಲೆಗಳ ಅರ್ಹ ಮತದಾರರಿಗೆ ಮಾತ್ರ ಫೆಬ್ರವರಿ 16ರಂದು ರಜೆ ಇಲಿದೆ.

ಫೆಬ್ರವರಿ 16 ರಂದು ರಾಜ್ಯದ ಕೆಲ ಜಿಲ್ಲೆಗಳ ಅರ್ಹ ಮತದಾರರಿಗೆ ರಜೆ ನೀಡಲಾಗಿದೆ. ಯಾವ ಜಿಲ್ಲೆಯ ಯಾರಿಗೆಲ್ಲ ಈ ರಜೆ ಇದೆ ಎಂಬುದನ್ನು ನೋಡೋಣ

ಫೆ. 16 ರಂದು ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ವಿಧಾನ ಪರಿಷತ್ತಿನ ಉಪಚುನಾವಣೆಗೆ ಡೇಟ್ ಫಿಕ್ಸ್ ಆಗಿದೆ. ಈ ಹಿನ್ನೆಲೆಯಲ್ಲಿ ಅರ್ಹ ಮತದಾರರಿಗೆ ರಜೆಯನ್ನು ಘೋಷಣೆ ಮಾಡಲು ಆದೇಶ ನೀಡಲಾಗಿದೆ.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬಿಬಿಎಂಪಿ ರಾಮನಗರ ಜಿಲ್ಲೆಯ ಅರ್ಹ ಶಿಕ್ಷಕರಿಗೆ ಫೆಬ್ರವರಿ 16ರಂದು ರಜೆಯನ್ನು ನೀಡಲಾಗಿದೆ.

ಈ ಜಿಲ್ಲೆಗಳಿಗೆ ಸೆರಿದ ಸರ್ಕಾರಿ ಶಾಲೆ ಕಾಲೇಜು, ಖಾಸಗಿ ಶಾಲೆ ಕಾಲೇಜುಗಳು, ಅನುದಾನಿತ ಮತ್ತು ಅನುದಾನರಹಿತ ಶಾಲಾ ಕಾಲೇಜುಗಳ ಮತದಾರರಿಗೆ ರಜೆ ಇರಲಿದೆ.

ಅರ್ಹ ಮತದಾರರಿಗೆ ಫೆ.16ರಂದು ಸಾಂದರ್ಭಿಕ ರಜೆಯನ್ನು ಮಂಜೂರು ಮಾಡುವಂತೆ ಆದೇಶಿಸಲಾಗಿದೆ. ಈ ಜಿಲ್ಲೆಗಳ ಅರ್ಹ ಮತದಾರರಿಗೆ ಮಾತ್ರ ಫೆ. 16ರಂದು ರಜೆಯನ್ನು ನೀಡಲಾಗಿದೆ.

ಈ ಹಿನ್ನೆಲೆಯಲ್ಲಿ 4 ದಿನಗಳ ಕಾಲ ಬೆಂಗಳೂರಿನಲ್ಲಿ ಮದ್ಯ ಮಾರಾಟ ನಿಷೇಧ ಮಾಡಲಾಗಿತ್ತು. ಆದರೆ ಮತದಾನದ ದಿನ ಮತ್ತು ಮತ ಎಣಿಕೆಯ ದಿನ ಮಾತ್ರ ಮದ್ಯ ಮಾರಾಟ ನಿಷೇಧ ಮಾಡಿದರೆ ಸಾಕು ಎಂದು ಕೋಹೈರ್ಟ್ ಆದೇಶ ನೀಡಿದೆ.

ಈ ಅವಧಿಯಲ್ಲಿ ಬೆಂಗಳೂರಿನಲ್ಲಿ ಮದ್ಯ ಮಾರಾಟ ಮಾಡುವಂತಿಲ್ಲ. ಕಾನೂನು ಉಲ್ಲಂಘನೆ ಮಾಡುವುದು ಕಂಡುಬಂದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಲಾಗಿದೆ.

1 Comment
  1. […] ಇದನ್ನೂ ಓದಿ: Holiday: ನಾಳೆ ಈ ಜಿಲ್ಲೆಗಳಲ್ಲಿ ರಜೆ ಘೋಷಣೆ […]

Leave A Reply

Your email address will not be published.