S T Somshekhar: ಕೊನೆಗೂ ಬಿಜೆಪಿಗೆ ಶಾಕ್ ಕೊಟ್ಟ ಎಸ್ ಟಿ ಸೋಮಶೇಖರ್!!

S T Somshekhar : ಬಿಜೆಪಿ(BJP) ಶಾಸಕರಾಗಿದ್ದರೂ ಬಿಜೆಪಿಯಿಂದ ಅಂತರ ಕಾಯ್ದುಕೊಂಡಿರುವ ಶಾಸಕ ಎಸ್ ಟಿ ಸೋಮಶೇಖರ್(ST Somshekhar) ಅವರು ವಿಧಾನಪರಿಷತ್ತಿನ ಶಿಕ್ಷಕರ ಕ್ಷೇತ್ರದ ಉಪ ಚುನಾವಣೆಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕಾಂಗ್ರೆಸ್(Congress)ಅಭ್ಯರ್ಥಿ ಪುಟ್ಟಣ್ಣ(Puttanna) ಪರ ಕ್ಯಾಂಪೇನ್ ಮಾಡಿ ಭಾರೀ ಚರ್ಚೆಗೆ ಒಳಗಾಗಿದ್ದರುಹ ಕೆಲ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಬೆನ್ನಲ್ಲೇ ಸೋಮಶೇಖರ್ ಅವರು ಬಿಜೆಪಿಗೆ ಶಾಕ್ ನೀಡಿದ್ದಾರೆ.

 

ಹೌದು, ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ ಅಭ್ಯರ್ಥಿ ಪರ ಕ್ಯಾಂಪೇನ್ ಮಾಡಿದ್ದರಲ್ಲಿ ತಪ್ಪೇನಿದೆ? ಕಾಂಗ್ರೆಸ್ ಅಭ್ಯರ್ಥಿ ನನ್ನ ಕಚೇರಿಗೆ ಬಂದು ಮನವಿ ಮಾಡಿದ್ದರು. ಹೀಗಾಗಿ ಪ್ರಚಾರ ಮಾಡಿದೆ. ಅವರ ಪರ ಮತಯಾಚಿಸಿದ್ದಕ್ಕೆ ಬಿಜೆಪಿಗರು ನನ್ನನ್ನು ಪಕ್ಷ ವಿರೋಧಿ ಅಂತಾ ಪರಿಗಣಿಸಿದ್ರೆ ಪರಿಗಣಿಸಲಿ, ಜೆಡಿಎಸ್ ಅಭ್ಯರ್ಥಿಯ ಪರ ನಾನು ಯಾವ ಕಾರಣಕ್ಕೂ ಮತ ಕೇಳಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ. ನಾನು ಯಾವುದಕ್ಕೂ ಡೋಂಟ್ ಕೇರ್ ಎಂದು ನೇರವಾಗಿ ಹೇಳಿದ್ದಾರೆ. ಒಟ್ಟಿನಲ್ಲಿ ಬಿಜೆಪಿಯಲ್ಲಿ ಇರಲು ಸ್ವಲ್ಪವೂ ಇಷ್ಟ ಇಲ್ಲ, ಕಾಂಗ್ರೆಸ್ ಅಂದ್ರೆ ಇಷ್ಟ ಅನ್ನೋದನ್ನು ಪರೋಕ್ಷವಾಗಿ ಹೇಳಿದ್ದಾರೆ.

ಇದನ್ನೂ ಓದಿ : Bubonic plague: ಮನೆಯಲ್ಲಿ ಬೆಕ್ಕು ಸಾಕ್ತೀರಾ?! ಹಾಗಿದ್ರೆ ಹುಷಾರ್, ನಿಮಗೂ ಬರಬಹುದು ಮಾರಣಾಂತಿಕವಾದ ಈ ರೋಗ

Leave A Reply

Your email address will not be published.