PM Surya Ghar : ಉಚಿತ ವಿದ್ಯುತ್ ಗಾಗಿ ಕೇಂದ್ರದ ಮಹತ್ವದ ಯೋಜನೆ! ಇಂದೇ ಅರ್ಜಿ ಸಲ್ಲಿಸಿ.

PM Surya Ghar: Muft Bijli Yojana : ಕೇಂದ್ರ ಸರ್ಕಾರವು ಜನರಿಗೆ ಹೊಸ ಯೋಜನೆಯೊಂದನ್ನು ಘೋಷಿಸಿದೆ. ನಮ್ಮ ಮನೆಯ ಮೇಲೆಯೇ ಕಡಿಮೆ ಖರ್ಚಿನಲ್ಲಿ ಸೋಲಾರ್‌ ಘಟಕಗಳನ್ನು ಅಳವಡಿಸಿಕೊಳ್ಳುವುದರೊಂದಿಗೆ ವಿದ್ಯುತ್‌ ಅನ್ನು ಉಚಿತವಾಗಿ ಪಡೆಯಬಹುದಾಗಿದೆ. ಇದಕ್ಕಾಗಿ ಪಿಎಂ ಸೂರ್ಯ ಘರ್‌(PM Surya Ghar) : ಮುಫ್ತ ಬಿಜ್ಲಿ ಯೋಜನೆ(Muft Bijli Yojana)ಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದ್ದು, ಈ ಯೋಜನೆಯಡಿಯಲ್ಲಿ 30 ಸಾವಿರದಿಂದ 78 ಸಾವಿರ ರೂಪಾಯಿವರೆಗೆ ಸಬ್ಸಿಡಿಯನ್ನು ನೀಡಲಾಗುತ್ತಿದೆ. ಅದಕ್ಕೆ ಅರ್ಜಿ ಸಲ್ಲಿಸುವುದು ಹೇಗೆ ಎಂಬುದರ ವಿವರ ಇಲ್ಲಿದೆ.

 

ಹೈಲೈಟ್ಸ್‌:

ದೇಶದ ಜನರಿಗೆ ಉಚಿತ ವಿದ್ಯುತ್‌ ನೀಡಲು ಕೇಂದ್ರದಿಂದ ನೂತನ ಯೋಜನೆ ಜಾರಿ

ಕೇಂದ್ರದಿಂದ ಪಿಎಂ ಸೂರ್ಯ ಘರ್‌ : ಮುಫ್ತ್‌ ಬಿಜ್ಲಿ ಯೋಜನೆ ಜಾರಿ

ಸೋಲಾರ್‌ ರೂಫ್‌ಟಾಪ್‌ ಅಳವಡಿಕೆಗೆ ಕೇಂದ್ರದಿಂದ ಭಾರೀ ರಿಯಾಯಿತಿ

 

ಹೊಸದಿಲ್ಲಿ : ಕೇಂದ್ರ ಸರ್ಕಾರ ಪಿಎಂ ಸೂರ್ಯ ಘರ್‌ : ಮುಫ್ತ್‌ ಬಿಜ್ಲಿ ಯೋಜನೆ ಎಂಬ ಹೊಸ ಯೋಜನೇಯನ್ನು ಘೋಷಣೆ ಮಾಡಿದೆ. ಕೆಲ ದಿನಗಳ ಹಿಂದಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ್ದ ಸೂರ್ಯೋದಯ ಯೋಜನೆಯೇ ಇದು. ಮನೆಯ ಮೇಲ್ಛಾವಣಿಯಲ್ಲಿ ಸೌರಶಕ್ತಿಯನ್ನು ಉತ್ಪಾದಿಸುವ ಯೋಜನೆ ಇದಾಗಿದ್ದು, ಈ ಯೋಜನೆಯಿಂದ ಸುಮಾರು ಒಂದು ಕೋಟಿ ಮನೆಗಳಿಗೆ ಉಚಿತ ವಿದ್ಯುತ್‌ ದೊರೆಯಲಿದೆ.

 

ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಎಕ್ಸ್‌ ಖಾತೆಯಲ್ಲಿ ಮಾಹಿತಿ ನೀಡಿದ್ದಾರೆ. ಸುಸ್ಥಿರ ಅಭಿವೃದ್ಧಿಯನ್ನು ಹೆಚ್ಚಿಸಲು ಹಾಗೂ ಜನರ ಕಲ್ಯಾಣ ಹೆಚ್ಚಿಸಲು ಪಿಎಂ ಸೂರ್ಯ ಘರ್‌ : ಮುಫ್ತ್‌ ಬಿಜ್ಲಿ ಯೋಜನೆಯನ್ನು ಜಾರಿ ತರಲಾಗಿದೆ ಎಂದಿದ್ದಾರೆ.

 

ಈ ಯೋಜನೆಯ ಲಾಭ ಒಂದು ಕೋಟಿ ಕುಟುಂಬಗಳು ಪಡೆಯಲಿವೆ.

 

ಈ ಯೋಜನೆ 75 ಸಾವಿರ ಕೋಟಿ ರೂ.ಗಳಿಗೂ ಹೆಚ್ಚಿನ ಹೂಡಿಕೆ ಹೊಂದಿದ್ದು, ಸುಮಾರು 1 ಕೋಟಿ ಕುಟುಂಬಗಳು ಈ ಯೋಜನೆಯ ಲಾಭ ಪಡೆಯಲಿದ್ದು ಮಾಸಿಕ 300 ಯೂನಿಟ್‌ ಉಚಿತ ವಿದ್ಯುತ್‌ ಅನ್ನು ಈ ಯೋಜನೆಯ ಫಲಾನುಭವಿ ಕುಟುಂಬಗಳು ಪಡೆಯಲಿವೆ.

 

ಫಲಾನುಭವಿಗಳಿಗೆ ಯಾವುದೇ ಆರ್ಥಿಕ ಹೊರೆಯಾಗದಂತೆ ಕೇಂದ್ರವು ಈ ಯೋಜನೆಯನ್ನು ವಿನ್ಯಾಸಗೊಳಿಸಿದೆ. ನೇರವಾಗಿ ಜನರ ಬ್ಯಾಂಕ್‌ ಖಾತೆಗೆ ಸಬ್ಸಿಡಿ ಹಣವನ್ನು ನೀಡಲು ಮುಂದಾಗಿದೆ. ಜೊತೆಗೆ ಹೆಚ್ಚಿನ ರಿಯಾಯಿತಿಯಲ್ಲಿ ಏಕೀಕೃತ ಬ್ಯಾಂಕ್‌ ಸಾಲವನ್ನು ನೀಡಲು ಮುಂದಾಗಿದೆ. ಎಲ್ಲ ಸ್ಟೇಕ್‌ ಹೋಲ್ಡರ್‌ಗಳನ್ನು ಏಕೀಕೃತ ರಾಷ್ಟ್ರೀಯ ಆನ್‌ಲೈನ್‌ ಪೋರ್ಟಲ್‌ನಲ್ಲಿ ಕೇಂದ್ರಿಕರಿಸಿದ್ದು, ಜನರಿಗೆ ಇದರಿಂದ ತುಂಬ ಅನುಕೂಲವಾಗಲಿದೆ.

 

ಈ ಯೋಜನೆಯನ್ನು ವ್ಯಾಪಕವಾಗಿ ಪ್ರಚಾರ ಮಾಡಲು, ಪಂಚಾಯಿತಿಗಳಿಗೆ ತಮ್ಮ ಪ್ರದೇಶದಲ್ಲಿ ಮನೆಯ ಛಾವಣಿಯ ಮೇಲೆ ಸೌರ ವಿದ್ಯುತ್‌ ಘಟಕಗಳನ್ನು ಸ್ಥಾಪಿಸಲು ಉತ್ತೇಜನ ನೀಡಲಾಗುವುದು. ಜೊತೆಗೆ ಉದ್ಯೋಗಾಕಾವಕಾಶಗಳನ್ನು ಸೃಷ್ಟಿಸುವ ಉದ್ದೇಶ ಹೊಂದಿದೆ.

 

ಎಷ್ಟು ಸಬ್ಸಿಡಿ ಸಿಗಲಿದೆ?

 

ಕೇಂದ್ರ ಸರ್ಕಾರ ಮೂರು ರೀತಿಯ ಸಬ್ಸಿಡಿಯನ್ನು ಈ ಯೋಜನೆಯಲ್ಲಿ ನೀಡುತ್ತಿದೆ.

1. 150 ಯೂನಿಟ್‌ವರೆಗೂ ವಿದ್ಯುತ್‌ ಬಳಸುವ ಮನೆಗಳಿಗೆ 1 ರಿಂದ 2 ಕಿಲೋ ವ್ಯಾಟ್‌ ಘಟಕ ಅಗತ್ಯ ಇದೆ. ಅದಕ್ಕಾಗಿ 30 ಸಾವಿರ ರೂ.ನಿಂದ 60 ಸಾವಿರ ರೂ.ವರೆಗೂ ಸಬ್ಸಿಡಿ ಸಿಗಲಿದೆ.

2. 150 ರಿಂದ 300 ಯೂನಿಟ್‌ವರೆಗೂ ವಿದ್ಯುತ್‌ ಬಳಸುವ ಮನೆಗಳಿಗೆ 2 ರಿಂದ 3 ಕಿಲೋ ವ್ಯಾಟ್‌ ಘಟಕ ಅಗತ್ಯ ಇದೆ. ಅದಕ್ಕಾಗಿ 60 ಸಾವಿರ ರೂ.ನಿಂದ 78 ಸಾವಿರ ರೂ.ವರೆಗೂ ಸಬ್ಸಿಡಿ ಸಿಗಲಿದೆ.

3. 300 ಯೂನಿಟ್‌ಗೂ ಹೆಚ್ಚು ವಿದ್ಯುತ್‌ ಬಳಸುವ ಮನೆಗಳಿಗೆ 3ಕ್ಕಿಂತ ಹೆಚ್ಚು ಕಿಲೋ ವ್ಯಾಟ್‌ ಘಟಕ ಅಗತ್ಯ ಇದೆ. ಅದಕ್ಕಾಗಿ 78 ಸಾವಿರ ರೂ. ಸಬ್ಸಿಡಿ ಸಿಗಲಿದೆ.

ಇದನ್ನೂ ಓದಿ : Suchna Seth: ತಾನೇ ಹೆತ್ತ ಮಗನನ್ನು ಹತ್ಯೆಗೈದ ಸೂಚನಾ ಸೇಠ್‌ ಕುರಿತಿ ಪೊಲೀಸ್‌ರಿಂದ ಮಹತ್ವದ ಮಾಹಿತಿ

Leave A Reply

Your email address will not be published.