UT Khader Car: ಸ್ಪೀಕರ್‌ ಖಾದರ್‌ ಅವರ ಹೊಸ ಐಷರಾಮಿ ಫಾರ್ಚುನರ್‌ ಕಾರು! ಈ ಕಾರಿನ ವೈಶಿಷ್ಟ್ಯವೇನು?

UT Khader: ಸ್ಪೀಕರ್‌ ಯು.ಟಿ.ಖಾದರ್‌ ಅವರ ಪ್ರಯಾಣಕ್ಕೆಂದು ಐಶಾರಾಮಿ ಕಾರೊಂದು ಸಚಿವಾಲಯದಿಂದ ಕಲ್ಪಿಸಲಾಗಿದೆ. ಈ ಕಾರು ಅಂತಿಂಥ ಕಾರಲ್ಲ ವಿಶೇಷ ಹಲವು ಸೌಲಭ್ಯಗಳನ್ನು ಹೊಂದಿರುವ ಕಾರು. ಕಪ್ಪು ಬಣ್ಣದ ಕಾರಿನ ಬೆಲೆ ಭರ್ಜರಿ (ಪೆಟ್ರೋಲ್‌) 33.43 ಲಕ್ಷ ರೂ. ಡೀಸೆಲ್‌ ಕಾರಿನ ದರ 35.93 ರಿಂದ 51.44 ಲಕ್ಷ ರೂ. ಆಗಿರುತ್ತದೆ.

ಇದನ್ನೂ ಓದಿ: 7th Pay Commission: ಈ ರಾಜ್ಯಗಳಲ್ಲಿ DA ಏರಿಕೆ ಮಾಡಿದ ಸರಕಾರ; ಕರ್ನಾಟಕದಲ್ಲಿ ಯಾವಾಗ?

ಫಾರ್ಚೂನರ್‌ (ಇ) ಕಾರಿನ ವಿಶೇಷ ವಿನ್ಯಾಸ ಮಾಡಿರುವ ಕಾರಣ ಇದರ ಬೆಲೆ ಇದೀಗ ಒಟ್ಟು 41 ಲಕ್ಷ ಆಗಿದೆ. ಸ್ಪೀಕರ್‌ ಖಾದರ್‌ ಅವರ ಮುಖಕ್ಕೆ ಬೆಳಕು ನೀಡುವ ವಿಶೇಷ ಎಲ್‌ಇಡಿ ಲೈಟ್‌ ಸೌಲಭ್ಯವನ್ನು ಇದು ಹೊಂದಿದೆ. ಜಿಆರ್‌ ಕಿಟ್‌ ಅಳವಡಿಸುವ ಮೂಲಕ ವಿಶೇಷವಾಗಿ ವಿನ್ಯಾಸ ಮಾಡಲಾಗಿದೆ.

ಖಾದರ್‌ ಅವರ ಕಾರಿನ ನಂಬರ್‌ 01 ಆಗಿದೆ. ಹಾಗೆನೇ ಈ ಕಾರಿಗೂ ಸೇಮ್‌ ನಂಬರ್‌ ಹಾಕಲಾಗಿದೆ. 360 ಡಿಗ್ರಿಯ ಕ್ಯಾಮರ ವ್ಯವಸ್ಥೆ ಈ ಕಾರಿನಲ್ಲಿ ಇದೆ. ಹಾಗೆನೇ ಕಾರಿನ ಮುಂಭಾಗದಲ್ಲಿ ಹಾಗೂ ಹಿಂಭಾಗದಲ್ಲಿ ಗಂಡಭೇರುಂಡ ಲಾಂಛನ ಇದೆ. ಇದು ರಾಜ್ಯಪಾಲ್ಯರ ಹೊರತು ಸ್ಪೀಕರ್‌ಗೆ ಮಾತ್ರ ಹಾಕಬಹುದು.

ಹೋದ ವರ್ಷ ರಾಜ್ಯ ಸರಕಾರ 9.9 ಕೋಟಿ ರೂಪಾಯಿ ವೆಚ್ಚದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದ ಎಲ್ಲಾ 33 ಸಚಿವರಿಗೆ ಟೊಯೊಟಾ ಇನ್ನೋವಾ ಹೈಬ್ರಿಡ್‌ ಹೈಕ್ರಾಸ್‌ ಮಾಡೆಲ್‌ನ 33 ಕಾರುಗಳನ್ನು ಖರೀದಿಸಿತ್ತು. ಎಲ್ಲಾ ಸಚಿವರಿಗೆ ತಲಾ 30 ಲಕ್ಷ ರೂ. ಬೆಲೆಯ ಹೊಸ ಇನ್ನೋವಾ ಹೈಕ್ರಾಸ್-ಹೈಬ್ರಿಡ್‌ ಕಾರುಗಳ ಖರೀದಿ ಮಾಡಿತ್ತು. ಇದಕ್ಕೆ 4ಜಿ ವಿನಾಯಿತಿ ನೀಡಿ 9.90 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿತ್ತು.

Leave A Reply

Your email address will not be published.