Parliment election: ಬಿಜೆಪಿಯಿಂದ ನಾಡಿನ ಈ ಪ್ರಬಲ ಸ್ವಾಮಿಜಿ ಕಣಕ್ಕೆ?!

Parliment electionನಲ್ಲಿ ರಾಜ್ಯದ ಸಂಪೂರ್ಣ ಕ್ಷೇತ್ರಗಳಲ್ಲೂ ತಮ್ಮ ಮೈತ್ರಿ ಕೂಟದ ಅಭ್ಯರ್ಥಿಗಳನ್ನು ಗೆಲ್ಲಿಸಲು ರಾಜ್ಯ ಬಿಜೆಪಿ ನಾಯಕರು ಹರಸಾಸ ಪಡುತ್ತಿದ್ದು, ಮಾಸ್ಟರ್ ಪ್ಲಾನ್ ಹೆಣೆಯುತ್ತಿದ್ದಾರೆ. ಹೀಗಾಗಿ ಮಠಾಧಿಪತಿಗಳನ್ನು ಕೂಡ ಈ ಸಲ ಲೋಕಸಭಾ ಚುನಾವಣೆಲ್ಲಿ ಸ್ಪರ್ಧೆಗಿಳಿಸಲು ಚಿಂತನೆ ನಡೆಸಿದ್ದು, ಚಿತ್ರದುರ್ಗದ ಈ ಪ್ರಬಲ ಸ್ವಾಮಿಜಿಯನ್ನು ಕಣಕ್ಕಿಳಿಸಲು ಸಿದ್ದತೆ ನಡೆದಿದೆಯಂತೆ !!

ಇದನ್ನೂ ಓದಿ: Relationship Tips: ನಿಮ್ಮ ಲೈಂಗಿಕ ಶಕ್ತಿಯನ್ನು ಹೆಚ್ಚಿಸಲು ಇಲ್ಲಿದೆ ಕೆಲವೊಂದು ಉಪಯೋಗಕಾರಿ ಮಾಹಿತಿ

Parliament Election
Parliment election: ಬಿಜೆಪಿಯಿಂದ ನಾಡಿನ ಈ ಪ್ರಬಲ ಸ್ವಾಮಿಜಿ ಕಣಕ್ಕೆ?!

ಹೌದು, ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ(Madara channayya swamiji) ಅವರನ್ನು ಈ ಸಲದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಮಾಡಿ ಚುನಾವಣಾ ಅಖಾಡಕ್ಕೆ ಕರೆತರುವ ಪ್ರಯತ್ನ ಮತ್ತೆ ಮುನ್ನೆಲೆಗೆ ಬಂದಿದೆ. ಅಂದಹಾಗೆ ಕಳೆದ 2019ರ ಚುನಾವಣೆಯಲ್ಲಿ ಚಿತ್ರದುರ್ಗ ಮೀಸಲು ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸುವ ಪ್ರಯತ್ನವನ್ನು ಸಂಘ ಪರಿವಾರ ಮತ್ತು ಬಿಜೆಪಿ ನಡೆಸಿತ್ತು. ಇದೀಗ ಈ ಪ್ರಯತ್ನ ಈ ವರ್ಷವೂ ಮುಂದುವರೆಯಲಿದೆ ಎಂದು ಮೂಲಗಳು ತಿಳಿಸಿವೆ.

ಸದ್ಯ ಚಿತ್ರದುರ್ಗದ(Chitradurga) ಹಾಲಿ ಸಂಸದ ಹಾಗೂ ಕೇಂದ್ರ ಸಚಿವ ನಾರಾಯಣ ಸ್ವಾಮಿ(Narayana Swamy) ಅವರ ಸ್ಪರ್ಧೆಗೆ ಪಕ್ಷದಲ್ಲೇ ವಿರೋಧ ಇದೆ. ಹೀಗಾಗಿ ಪಕ್ಷ ಗೆಲುವಿನ ನಗೆ ಬೀರಲು ಈ ನಿರ್ಧಾರ ಮಾಡಿದೆಯಂತೆ. ಆದರೆ ಈವರೆಗೆ ಸ್ವಾಮೀಜಿಗಳು ಈ ಬಗ್ಗೆ ಯಾವುದೇ ನಿರ್ಧಾರ ಅಥವಾ ನಿರ್ಣಯ ಕೈಗೊಂಡಿಲ್ಲ. ಆದರೆ, ಚುನಾವಣಾ ರಾಜಕಾರಣಕ್ಕೆ ಪ್ರವೇ‍ಶಿಸುವ ಬಗ್ಗೆ ವಿರೋಧವನ್ನೂ ತೋರಿಲ್ಲ. ನಿರ್ಲಿಪ್ತ ಮನೋಭಾವ ಹೊಂದಿದ್ದು ಚಿಂತನೆ ನಡೆಸಿದ್ದಾರೆ.

Leave A Reply

Your email address will not be published.