Congress guarantee: ಲೋಕಸಭಾ ಚುನಾವಣೆ- ಕಾಂಗ್ರೆಸ್ ನಿಂದ ಮೊದಲ ಗ್ಯಾರಂಟಿ ಘೋಷಣೆ !!

Congress guarantee: ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದು, ಗೆಲುವಿನ ಕನಸು ಕಾಣುತ್ತಿರೋ ಕಾಂಗ್ರೆಸ್ ಪಾರ್ಟಿ ಇದೀಗ ಚುನಾವಣೆ ನಿಮಿತ್ತ ತನ್ನ ಮೊದಲ ಗ್ಯಾರಂಟಿಯನ್ನು(Congress Guarantee) ಘೋಷಣೆ ಮಾಡಿದೆ.

ಹೌದು, ಲೋಕಸಭಾ ಚುನಾವಣೆ(Parliament election)ನಿಮಿತ್ತ ಕಾಂಗ್ರೆಸ್ ನ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಈ ಬಾರಿ ಚುನಾವಣೆಯ ನಂತರ ಕಾಂಗ್ರೆಸ್‌ (Congress) ಪಕ್ಷವು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ರೈತರ ಬೇಡಿಕೆಗಳಲ್ಲಿ ಒಂದಾದ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (MSP-Minimum Support Price) ಖಾತರಿಪಡಿಸುವ ಕಾನೂನು ಜಾರಿಗೆ ತರುವುದಾಗಿ ಘೋಷಣೆ ಮಾಡಿದರು. ಅಲ್ಲದೆ ಇದು ನಮ್ಮ ಮೊದಲ ಗ್ಯಾರಂಟಿ ಎಂದು ಅವರು ತಿಳಿಸಿದ್ದಾರೆ.

ಅಂದಹಾಗೆ ಛತ್ತೀಸ್‌ಗಢದ ಅಂಬಿಕಾಪುರ ಜಿಲ್ಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರ `ಭಾರತ್ ಜೋಡೋ ನ್ಯಾಯ್ ಯಾತ್ರೆ’ ವೇಳೆ ಮಾತನಾಡಿದ ಖರ್ಗೆ ಅವರು ತಮ್ಮ ಪಕ್ಷದ ಈ ಮೊದಲ ಗ್ಯಾರಂಟಿಯನ್ನು ಘೋಷಣೆ ಮಾಡಿದ್ದಾರೆ.

Leave A Reply

Your email address will not be published.