Benefits of caviar eggs: ಪ್ರಪಂಚದ ದುಬಾರಿ ಆಹಾರ ಇದು! ಶ್ರೀಮಂತರು ಸಹ ತಿನ್ನಲು ಯೋಚಿಸುತ್ತಾರೆ.!!

World’s most expensive food: ಪ್ರಪಂಚದಲ್ಲಿ ಆಹಾರವನ್ನು ಇಷ್ಟಪಡುವ ತುಂಬ ಮಂದಿ ಇದ್ದಾರೆ. ಅವರು ಒಂದಕ್ಕಿಂತ ಹೆಚ್ಚು ಖಾದ್ಯಗಳನ್ನು ಆನಂದಿಸಲು ಬಯಸುತ್ತಾರೆ. ಅದಕ್ಕಾಗಿ ಸಾಕಷ್ಟು ಹಣವನ್ನು ಖರ್ಚು ಮಾಡುತ್ತಾರೆ, ಆದರೆ ಪ್ರಪಂಚದ ಅತ್ಯಂತ ದುಬಾರಿ ಆಹಾರ ವಸ್ತು (World’s most expensive food)ಯಾವುದು ಮತ್ತು ಅದರ ಬೆಲೆ ಏನು ಎಂದು ನಿಮಗೆ ತಿಳಿದಿದೆಯೇ?

ಪ್ರಪಂಚದಾದ್ಯಂತ ಆಹಾರದ ಹುಚ್ಚು ಹೊಂದಿರುವ ಅನೇಕ ಜನರಿದ್ದಾರೆ ಮತ್ತು ಇದಕ್ಕಾಗಿ ಅವರು ವಿವಿಧ ಸ್ಥಳಗಳಿಗೆ ಹೋಗಿ ಅಲ್ಲಿ ರುಚಿಕರವಾದ ಆಹಾರಗಳನ್ನು ಸವಿಯಲು ಸಿದ್ಧರಾಗಿರುತ್ತಾರೆ. ಸಾಕಷ್ಟು ಹಣವನ್ನು ಖರ್ಚು ಮಾಡುತ್ತಾರೆ. ಆದರೆ ಪ್ರಪಂಚದ ಅತ್ಯಂತ ದುಬಾರಿ ಆಹಾರ ವಸ್ತು ಯಾವುದು ಮತ್ತು ಅದರ ಬೆಲೆ ಏನು ಎಂದು ನಿಮಗೆ ತಿಳಿದಿದೆಯೇ? ಇದು ವಜ್ರದಷ್ಟೇ ದುಬಾರಿ. ನೀವು ಅದನ್ನು ಸವಿಯಲು ಬಯಸುವಿರಾ? ಇದು ಒಂದು ವಿಶೇಷ ಮೀನಿನ ಮೊಟ್ಟೆ. ಇದನ್ನು ವಿಶ್ವದ ಅತ್ಯಂತ ದುಬಾರಿ ಆಹಾರವೆಂದು ಪರಿಗಣಿಸಲಾಗುತ್ತದೆ. ಅದರ ಬೆಲೆಯಿಂದಾಗಿ ಇದನ್ನು ‘ಶ್ರೀಮಂತರ ಭಕ್ಷ್ಯ’ ಎಂಬ ನಾಮಕ್ಕೆ ಪಾತ್ರವಾಗಿದೆ.

ರೇಷ್ಮ ರೀತಿಯ ವಿನ್ಯಾಸವನ್ನು ಕಿರುಧಾನ್ಯಗಳನ್ನು ಕಂಡರೆ ಸವಿಯಲು ಎಲ್ಲರಿಗೂ ಇಷ್ಟವಾಗುತ್ತದೆ. ಆದರೆ ಬೆಲೆ ಕೇಳಿದರೇ ಶ್ರೀಮಂತರೂ ಒಂದು ಕ್ಷಣ ಯೋಚಿಸುತ್ತಾರೆ. ಈ ಮೀನಿನ ಮೊಟ್ಟೆಗಳನ್ನು ಕ್ಯಾವಿಯರ್ ಎಂದು ಕರೆಯಲಾಗುತ್ತದೆ

ಕ್ಯಾವಿಯರ್ ಮೊಟ್ಟೆಗಳು ಸಮುದ್ರದಲ್ಲಿ ಕಂಡುಬರುವ ಸ್ಟರ್ಜನ್ ಜಾತಿಯ ಮೀನುಗಳು ಇಡುತ್ತವೆ. ಈ ಮೀನಿನಲ್ಲಿ ಸುಮಾರು 26 ಜಾತಿಗಳಿವೆ. ಈ ಮೊಟ್ಟೆಗಳನ್ನು ಬೇರೆ ಬೇರೆ ಬ್ರಾಂಡ್‌ಗಳಲ್ಲಿ ಮಾರಾಟ ಮಾಡಲಾಗುತ್ತದೆ. ಸ್ಟರ್ಜನ್ ಹೆಣ್ಣು ಮೀನುಗಳನ್ನು ಮೊಟ್ಟೆಗಳನ್ನು ಪಡೆಯುವುದಕ್ಕಾಗಿಯೇ ವಿಶೇಷವಾಗಿ ಸಾಕಲಾಗುತ್ತದೆ.

ಕ್ಯಾವಿಯರ್ ಮೊಟ್ಟೆಗಳು ಕಪ್ಪು, ಕಿತ್ತಳೆ, ಆಲಿವ್ ಮುಂತಾದ ಬಣ್ಣಗಳಲ್ಲಿ ಸಿಗುತ್ತವೆ. ಅವುಗಳ ವಿನ್ಯಾಸವು ಸಾಕಷ್ಟು ಸಿಲ್ಕಿ ಸ್ಮೂತ್‌, ಮತ್ತು ಆಕರ್ಷಕವಾಗಿರುತ್ತದೆ. ರೋಮನ್ ಮತ್ತು ಗ್ರೀಕ್ ರಾಜರ ಕಾಲದಲ್ಲಿಯೂ ಈ ಮೊಟ್ಟೆಗಳಿಂದ ಆಹಾರ ಭಕ್ಷ್ಯಗಳನ್ನು ತಯಾರಿಸಲಾಗುತ್ತಿತ್ತು. ಆದ್ದರಿಂದ ಇದನ್ನು ರಾಜಮನೆತನದ ಖಾದ್ಯ ಎಂದೇ ಕರೆಯುತ್ತಾರೆ. ಇದರ ಬೆಲೆ ಯಾವಾಗಲೂ ಹೆಚ್ಚಿರುತ್ತದೆ.

ಮಾಹಿತಿ ಪ್ರಕಾರ, ಕ್ಯಾವಿಯರ್ ಮೊಟ್ಟೆಯ ಬೆಲೆ 1 ಔನ್ಸ್ ಅಂದರೆ 30 ಗ್ರಾಂ ಗೆ ಸುಮಾರು 5000 ದಿಂದ 8000 ರೂ ಅಥವಾ ಅದಕ್ಕಿಂತ ಹೆಚ್ಚು ಇರಬಹುದು.

ಸ್ಟರ್ಜನ್ ಮೀನುಗಳು ಹೆಚ್ಚಿನ ಸಂಖ್ಯೆಯ ಮೊಟ್ಟೆಗಳನ್ನು ಇಡುತ್ತವೆ. ಆದರೆ ಇವುಗಳು ಮೊಟ್ಟೆಗಳನ್ನು ಇಡಲು ಬರೋಬ್ಬರಿ 7 ರಿಂದ 15 ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಹಿಂದೆ, ಮೀನುಗಳಿಂದ ಮೊಟ್ಟೆಗಳನ್ನು ಪಡೆಯಲು ಬೇಟೆಯಾಡಲಾಗುತ್ತಿತ್ತು. ನಂತರ ಈ ಜಾತಿಯನ್ನು ಅಳಿವಿನಿಂದ ರಕ್ಷಿಸಲು ಬೇಟೆಯನ್ನು ನಿಷೇಧಿಸಲಾಯಿತು. ಈ ಕಾರಣದಿಂದಾಗಿ ಈ ಮೊಟ್ಟೆಗಳ ಬೆಲೆ ಇನ್ನಷ್ಟು ಹೆಚ್ಚಾಗಿದೆ.

ಸ್ಟರ್ಜನ್ ಮೀನುಗಳಿಂದ ಪಡೆದ ಕ್ಯಾವಿಯರ್ ಮೊಟ್ಟೆಗಳನ್ನು ಫ್ರೀಜರ್‌ನಲ್ಲಿ ಮಾತ್ರ ಸಂಗ್ರಹಿಸಲಾಗುತ್ತದೆ. ಅವುಗಳನ್ನು ಸಾಮಾನ್ಯ ತಾಪಮಾನದಲ್ಲಿ ಇಡಬಾರದು.ಈ ಮೂಲಕ ಮೊಟ್ಟೆಗಳನ್ನು ಹೆಚ್ಚು ಸಮಯ ಸಂಗ್ರಹಿಸಲಾಗುತ್ತದೆ. ಇದರಿಂದ ಅದರ ಗುಣಮಟ್ಟ ಮತ್ತು ರುಚಿ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ. ಕ್ಯಾವಿಯರ್ ಮೊಟ್ಟೆಗಳು ಪೋಷಕಾಂಶಗಳ ವಿಷಯದಲ್ಲಿ ಕಡಿಮೆಯಿಲ್ಲ. ಒಮೆಗಾ 3 ಕೊಬ್ಬಿನಾಮ್ಲಗಳು, ವಿಟಮಿನ್ ಬಿ 12, ವಿಟಮಿನ್ ಸಿ, ಎ, ಇ, ಸತು, ಮೆಗ್ನೀಸಿಯಮ್, ಕಬ್ಬಿಣ ಮತ್ತು ಕ್ಯಾಲ್ಸಿಯಂ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ.

ಇದನ್ನೂ ಓದಿ :ಈ ಹಣ್ಣುಗಳನ್ನು ತಿನ್ನುವಾಗ ಹುಷಾರಾಗಿರಿ,ವಿಷವಾಗುವ ಅಪಾಯವಿರುತ್ತದೆ!

Leave A Reply

Your email address will not be published.