Lord Shiva: ಶಿವನನ್ನು ಪೂಜಿಸುವಾಗ ಈ ತಪ್ಪು ಮಾಡಬೇಡಿ
Lord Shiva: ಪೂಜೆ ನಡೆಸುವ ಸಮಯದಲ್ಲಿ ಈ ತಪ್ಪುಗಳು ನಡೆಯದಂತೆ ಎಚ್ಚರಿಕೆ ವಹಿಸುವುದು ತುಂಬ ಮುಖ್ಯ. ಈ ಕೆಳಗೆ ಶಿವನಿಗೆ ಅರ್ಪಿಸಬಾರದ ಕೆಲ ವಸ್ತುಗಳ ಬಗ್ಗೆ ವಿವರ ನೀಡಲಾಗಿದೆ. ನೀವು ಏನಾದ್ರೂ ಈ ವಸ್ತಗಳನ್ನು ಶಿವನಿಗೆ ಅರ್ಪಿಸಿದರೆ ಅದು ನಕಾರಾತ್ಮಕ ಪರಿಣಾಮಗಳನ್ನು, ಅಶುಭ ಫಲಗಳನ್ನು ನೀಡಬಹುದು ಎಂದು ಹೇಳಲಾಗುತ್ತದೆ. ನಮ್ಮಲ್ಲಿ ನೂರಾರು ದೇವರುಗಳಿದ್ದಾರೆ. ಇಲ್ಲ ದೇವರುಗಳ ಪೂಜಾ ವಿಧಾನ ಒಂದೇ ಆಗಿರುವುದಿಲ್ಲ. ದೇವರಿಗೆ ಪ್ರಿಯವಾದ ಹೂವು, ಹಣ್ಣು ಅಥವಾ ನೈವೇದ್ಯವನ್ನು ಅರ್ಪಿಸಿ, ಭಕ್ತಿಯಿಂದ ಬೇಡಿಕೊಂಡರೆ ದೇವರು ಪ್ರಸನ್ನನಾಗಿ ನಮ್ಮ ಎಲ್ಲ ಕಷ್ಟಗಳನ್ನು ದೂರ ಮಾಡುತ್ತಾನೆ ಎಂದು ನಂಬುತ್ತಾನೆ. ಶಿವನಿಗೂ ಕೂಡ ಸರಿಯಾದ ಕ್ರಮದಲ್ಲಿ ಪೂಜೆಯನ್ನು ಸಲ್ಲಿಸಬೇಕು.
ಶಿವನಿಗೆ ಎಂದಿಗೂ ಅರ್ಪಿಸಬಾರದ ಏಳು ವಸ್ತುಗಳು
ತುಳಸಿ
ಬಹುತೇಕ ದೇವರಿಗೆ ಪ್ರಿಯವಾದ ತುಳಸಿಯನ್ನು ಶಿವನಿಗೆ ಅರ್ಪಣೆ ಮಾಡಬಾರದು. ಕಾರಣ ತುಳಸಿಯು ಒಬ್ಬ ರಾಕ್ಷಸ ಕುಲದವಳು. ವಿಷ್ಣುವಿನ ಪರಮ ಭಕ್ತೆಯಾಗಿದ್ದ ಅವಳ ಹೆಸರು ವೃಂದಾ. ವೃಂದಾ ರಾಕ್ಷಸ ರಾಜ ಜಲಂಧರನನ್ನು ಮದುವೆಯಾಗಿದ್ದಳು. ಇದರಿಂದಾಗಿ ಅವನಿಗೆ ಮರಣವಿಲ್ಲದ ಹೊರ ಸಿಕ್ತು. ನಂತರ ಅವನ ಸಂಹಾರಕ್ಕೆ ಶಿವನೇ ಬರಬೇಕಾಯಿತು ಎಂದು ಪುರಾಣ ಹೇಳುತ್ತದೆ. ಅದ್ದರಿಂದ ತುಳಸಿ ಶಿವನಿಗೆ ಇಡಬಾರದು.
ತೆಂಗಿನ ನೀರು
ತೆಂಗಿನ ಕಾಯಿಯ ನೀರನ್ನು ದೇವರಿಗೆ ಅರ್ಪಿಸುವುದು ಮಾಮೂಲಿ. ಹಾಗೆಯೇ ದೇವರಿಗೆ ಅರ್ಪಿಸಿದ ನಂತರ ಪ್ರಸಾದವಾಗಿ ಕುಡಿಯುವುದು ವಾಡಿಕೆಯಾಗಿದೆ. ಆದರೆ ಶಿವಲಿಂಗಕ್ಕೆ ತೆಂಗಿನ ನೀರನ್ನು ಎಂದಿಗೂ ಅರ್ಪಿಸಬಾರದು. ಹಾಗೆಯೇ ಶಿವನಿಗೆ ಪ್ರಸಾದವಾಗಿ ಅರ್ಪಿಸಿದ ತೆಂಗಿನಕಾಯಿಯನ್ನು ತಿನ್ನಬಾರದು ಎಂದು ಹೇಳಲಾಗುತ್ತದೆ.
ಚಂಪಾ ಮತ್ತು ಕೇದಿಗೆ ಹೂವುಗಳು
ಹೂವುಗಳು ಶಿವನಿಗೆ ಪ್ರಿಯವಲ್ಲ ಎಂದು ಹೇಳಲಾಗುತ್ತದೆ. ಅದರಲ್ಲೂ ಕೇದಿಗೆ ಹಾಗೂ ಚಂಪಾ ಹೂವುಗಳು ಶಿವನಿಗೆ ಇಡುವುದಿಲ್ಲ. ಹಾಗೇನಾದರೂ ನೀವು ಅರ್ಪಿಸಿದರೆ ಅಶುಭ ಫಲ ಪ್ರಾಪ್ತವಾಗುತ್ತದೆ ಎನ್ನಲಾಗಿದೆ. ನಾಗದೇವರಿಗೆ ಪ್ರಿಯವಾದ ಕೇದಿಗೆ ಹೂ ವನ್ನು ಶಿವನಿಗೆ ಅರ್ಪಿಸಬಾರದು ಎನ್ನಲಾಗುತ್ತದೆ.
ಕತ್ತರಿಸಲ್ಪಟ್ಟ ಬಿಲ್ವತ್ರೆ
ಬಿಲ್ಪತ್ರೆಯು ಶಿವನಿಗೆ ಪ್ರಿಯವಾದ ಪತ್ರೆಯಾಗಿದೆ. ಬಿಲ್ಪತ್ರೆ ಅರ್ಪಿಸಿ ಭಕ್ತಿಯಿಂದ ಪೂಜಿಸಿದರೆ ಕಷ್ಟಗಳು ದೂರವಾಗುತ್ತವೆ ಎಂಬ ನಂಬಿಕೆಯಿದೆ. ಶಿವನಿಗೆ ಬಿಲ್ಪತ್ರೆ ಅರ್ಪಿಸುವಾಗ ಅದು ತುಂಡಾಗಿರಬಾರದು. ಅಲ್ಲದೇ ಎಲೆಯನ್ನು ಕೀಟಗಳು ತಿಂದಿರಬಾರದು.
ಅರಿಶಿನ
ಶಿವನಿಗೆ ಅರಿಶಿನವನ್ನು ಎಂದಿಗೂ ಅರ್ಪಿಸಬಾರದು. ಶಾಸ್ತ್ರಗಳು ಹೇಳುವಂತೆ ಶಿವಲಿಂಗವು ಪೌರುಷವನ್ನು ಸೂಚಿಸುತ್ತದೆ. ಆದರೆ ಅರಿಶಿನವು ಸೌಂದರ್ಯ ವರ್ಧಕವಾಗಿ ಕೆಲಸ ಮಾಡುತ್ತದೆ. ಆದ್ದರಿಂದ ಶಿವನಿಗೆ ಅರಿಶಿನವನ್ನು ಅರ್ಪಿಸಲಾಗುವುದಿಲ್ಲ.
ಕುಂಕುಮ
ಶಿವನಿಗೆ ಲಯಕರ್ತ ಎಂಬ ಹೆಸರಿದೆ. ಶಿವಲಿಂಗದ ಮೇಲೆ ಕುಂಕುಮವನ್ನು ಎಂದಿಗೂ ಹಚ್ಚ್ಬೇಡಿ . ಕಾರಣ ಶಿವನು ಹಣೆಯ ಮೇಲೆ ಬೂದಿಯನ್ನು ಹಚ್ಚಿಕೊಳ್ಳುತ್ತಾನೆ. ಶಿವನು ಕುಂಕುಮಕ್ಕಿಂತ ಬೂದಿಯನ್ನು ಯಾವಾಗಲೂ ಅನ್ವಯಿಸುತ್ತಾನೆ ಎಂಬುದು ಸಾರ್ವತ್ರಿಕ ಸತ್ಯ.
ಕಂಚಿನ ಪಾತ್ರೆಯಲ್ಲಿ ಹಾಲು ಅಥವಾ ನೀರಿನ ಅಭಿಷೇಕ
ಶಿವನಿಗೆ ಹಾಲು ಅಥವಾ ಮೊಸರನ್ನು ಅರ್ಪಿಸುವಾಗ ಕಂಚಿನ ಪಾತ್ರೆ ಬಳಸಬಾರದು. ಹಾಗೆಯೇ ಶಿವಲಿಂಗಕ್ಕೆ ಅಭಿಷೇಕ ಮಾಡುವಾಗ ನಿಮ್ಮ ಬೆರಳುಗಳನ್ನು ನೀರು, ಹಾಲು ಅಥವಾ ಮೊಸರಿನೊಳಕ್ಕೆ ತಗುಲಬಾರದು. ಕಂಚಿನ ಪಾತ್ರೆಯಲ್ಲಿ ಶಿವನಿಗೆ ಹಾಲನ್ನು ಅರ್ಪಿಸುವುದರಿಂದ ಶುಭ ಫಲ ಸಿಗುವುದಿಲ್ಲ ಎಂದು ಹೇಳಲಾಗುತ್ತದೆ.