Puttur: ಜಾಗದ ವಿಚಾರವಾಗಿ ಹಲ್ಲೆ ಪ್ರಕರಣ; ಇತ್ತಂಡಗಳಿಂದ ದೂರು ದಾಖಲು

Puttur: ಜಾಗದ ವಿಚಾರವಾಗಿ ಹಲ್ಲೆ ನಡೆದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇತ್ತಂಡಗಳು ದೂರು ನೀಡಿದ್ದು, (puttur)ಪ್ರಕರಣ ದಾಖಲಾಗಿದೆ.

ಕೆದಿಲ ನಿವಾಸಿ ಸವಿತಾ ಭಟ್‌ ಅವರು ನೀಡಿರುವ ದೂರಿನ ಮೇಲೆ ಹೈದರಾಲಿ, ಹಬೀಬ್‌ ಮೊಹ್ಸಿನ್‌ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.

 

ಹಲ್ಲೆಗೊಂಡ ಮಹಿಳೆ ಸವಿತಾ ಭಟ್‌ ಅವರ ಪತಿಯ ಒಡೆತನದಲ್ಲಿರುವ ಜಮೀನಿನ ಪಕ್ಕದಲ್ಲಿ ಹೈದರಾಲಿ ಎಂಬಾತನಿಗೆ ಸೇರಿದ ಜಾವಿದೆ. ಸದ್ರಿ ಜಮೀನುಗಳ ಗಡಿಗೆ ಸಂಬಂಧಿಸಿದ ತಕರಾರು ಇದೆ.

 

ಫೆ.11 ರ ಸಂಜೆ ಸಮಯ ಸದ್ರಿ ಗಡಿ ತಕರಾರು ಇರುವ ಜಾಗದಲ್ಲಿ ಹೈದರಾಲಿ, ಹಬೀಬ್‌ ಮೊಹ್ಸಿನ್‌ ಹಾಗೂ ಇತರ ಹದಿನೈದು ಮಂದಿ ಬೇಲಿ ಹಾಕಲು ಬಂದಾಗ ಮಹಿಳೆಯ ಪತಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ವೇಳೆ ಹಬೀಬ್‌ ಮೊಹ್ಸಿನ್‌ ಅವಾಚ್ಯ ಶಬ್ದಗಳ ನಿಂದನೆ ಮಾಡುತ್ತ, ಕಬ್ಬಿಣದ ಸುತ್ತಿಗೆಯಿಂದ ಹಲ್ಲೆ ಮಾಡಿದ್ದು, ನಂತರ ಜೀವ ಬೆದರಿಕೆ ಹಾಕಿ ತೆರಳಿರುತ್ತಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

 

ಮಹಿಳೆ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

 

ಇನ್ನೊಂದು ತಂಡ ನೀಡಿದ ದೂರು ಈ ರೀತಿ ಇದೆ;

ಹೈದರಾಲಿ ಅವರ ಪತ್ನಿ ದೂರು ನೀಡಿದ್ದು, ಸವಿತಾ ಭಟನ ಹಾಗೂ ಶಿವರಾಮ್‌ ಭಟ್‌ ವಿರುದ್ಧ ಪ್ರಕರಣ ದಾಖಲಾಗಿದೆ. ಮಹಿಳೆಯ ಪತಿ ಜಮೀನಿಗೆ ಬೇಲಿ ಹಾಕುವಾಗ ಸವಿತಾಭಟ್‌ ಹಾಗೂ ಶಿವರಾಮ ಭಟ್‌ ಅವರು ತಕರಾರು ತೆಗೆದು ಬೇಲಿಯನ್ನು ಕಿತ್ತು ಬಿಸಾಕಿರುತ್ತಾರೆ. ಈ ಸಂದರ್ಭ ಬೇಲಿಯ ಕಂಬ ಅಲ್ಲಿ ಕೆಲಸ ಮಾಡುತ್ತಿದ್ದ ಆಲಿ ಎಂಬುವರಿಗೆ ತಾಗಿ ಗಾಯವಾಗಿರುತ್ತದೆ. ಅನಂತರ ಅವಾಚ್ಯ ನಿಂದನೆ ನಡೆದಿದ್ದು, ಜೀವ ಬೆದರಿಕೆ ಹಾಕಿರುವ ಕುರಿತು ವರದಿಯಾಗಿದೆ.

 

ಎರಡೂ ಪ್ರಕರಣಗಳು ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ವರದಿಯಾಗಿದೆ.

Leave A Reply

Your email address will not be published.