ಮಹಿಳೆಯರಿಗೆ ಮಾಸಿಕ ರೂ.35000- ಕೇಂದ್ರ ಸರಕಾರದ ಯೋಜನೆ
Savitribai Jyoti Rao Phule Fellowship Scheme: ಕೇಂದ್ರ ಸರ್ಕಾರವು ಮಹಿಳೆಯರಿಗಾಗಿ ವಿಶೇಷ ಯೋಜನೆಯನ್ನು ನೀಡಿದೆ. ಸಾವಿತ್ರಿಬಾಯಿ ಜ್ಯೋತಿರಾವ್ ಫುಲೆ ಫೆಲೋಶಿಪ್ ಯೋಜನೆಯ( Savitribai Jyoti Rao Phule Fellowship Scheme) ಬಗ್ಗೆ ನಿಮಗೆ ತಿಳಿದಿದೆಯೇ? ಈ ಯೋಜನೆಯು ತಿಂಗಳಿಗೆ 35000 ರೂಪಾಯಿ ಒದಗಿಸುವ ಯೋಜನೆಯಾಗಿದೆ.
ಮಹಿಳಾ ಪಿಎಚ್ಡಿ ವಿದ್ಯಾರ್ಥಿನಿಯರಿಗೆ ಅವರ ಸಂಶೋಧನೆಗೆ ಅನುಕೂಲವಾಗಲಿ ಎಂದು ವಿಶ್ವವಿದ್ಯಾಲಯ ಧನಸಹಾಯ ಆಯೋಗ (UGC) ಉನ್ನತ ಶಿಕ್ಷಣ ಇಲಾಖೆ ಸಾವಿತ್ರಿಬಾಯಿ ಜ್ಯೋತಿರಾವ್ ಫುಲೆ ಫೆಲೋಶಿಪ್ ಯೋಜನೆಯನ್ನು ನೀಡುತ್ತಿದೆ.
ಒಂದು ಕುಟುಂಬದಲ್ಲಿ ಸಹೋದರರನ್ನು ಹೊಂದದೇ ಇರುವ ಒಬ್ಬ ಹೆಣ್ಣು ಮಗಳಿಗೆ ಒಂಟಿ ಹೆಣ್ಣು ಮಗು ಎಂಬ ಯೊಜನೆ ಇದೆ. ಗಂಡು ಮಕ್ಕಳಿಲ್ಲದ ಮನೆಯಲ್ಲಿ ಒಂದಕ್ಕಿಂತ ಹೆಚ್ಚು ಹೆಣ್ಣು ಮಕ್ಕಳಿದ್ದರೆ,ಈ ಸ್ಟೈಫಂಡ್ ಅನ್ನು ಮನೆಯ ಒಬ್ಬ ಹೆಣ್ಣುಮಗಳಿಗೆ ಮಾತ್ರ ನೀಡಲಾಗುತ್ತದೆ. ಈ ಯೋಜನೆಯಡಿಯಲ್ಲಿ, ಪ್ರತಿ ವರ್ಷ ಆನ್ಲೈನ್ನಲ್ಲಿ ಸ್ವೀಕರಿಸುವ ಅರ್ಹ ಅರ್ಜಿಗಳ ಆಧಾರದ ಮೇಲೆ ವಿದ್ಯಾರ್ಥಿವೇತನ ನೀಡಬೇಕಾದ ವಿದ್ಯಾರ್ಥಿಗಳ ಸಂಖ್ಯೆಯನ್ನು ನಿರ್ಧರಿಸಲಾಗುತ್ತದೆ.
ಪದವಿ ಮುಗಿಸಿದ ನಂತರ ಸಂಶೋಧನೆಯನ್ನು ಕೈಕೊಳ್ಳುವ ಸಂದರ್ಭದಲ್ಲಿ ಈ ಯೋಜನೆಯನ್ನು ಪಡೆಯಲು ಅರ್ಜಿಯನ್ನು ಸಲ್ಲಿಸಬೇಕು. ಇದಕ್ಕೆ ಅಗತ್ಯವಾದ ಷರತ್ತುಗಳನ್ನು ಅನುಸರಿಸಬೇಕು. ಮುಖ್ಯವಾಗಿ ವಿದ್ಯಾರ್ಥಿನಿಯರ ಪೋಷಕರು ಒಪ್ಪಿಗೆ ನೀಡಬೇಕು. ಈ ಯೋಜನೆಗೆ ಸೇರಲು 100 ರೂಪಾಯಿ ಮೌಲ್ಯದ ಸ್ಟ್ಯಾಂಪ್ನಲ್ಲಿ ಅಫಿಡವಿಟ್ ಮಾಡಿಸಿ ಸಲ್ಲಿಸಬೇಕು. ಅಫಿಡವಿಟ್ ಅನ್ನು ಮ್ಯಾಜಿಸ್ಟ್ರೇಟ್ ಅಥವಾ ತಹಶೀಲ್ದಾರ್ ದರ್ಜೆಯ ಸರ್ಕಾರಿ ಅಧಿಕಾರಿ ದೃಢೀಕರಿಸಬೇಕು.
ವಿದ್ಯಾರ್ಥಿನಿಯು ಆಧಾರ್, ಬ್ಯಾಂಕ್ ಖಾತೆ ಮತ್ತು ಮೊಬೈಲ್ ಸಂಖ್ಯೆಯನ್ನು ಕಡ್ಡಾಯವಾಗಿ ಹೊಂದಿರಬೇಕು. ಈ ಯೋಜನೆಯಲ್ಲಿ ಜೂನಿಯರ್ ರಿಸರ್ಚ್ ಫೆಲೋ ವಿದ್ಯಾರ್ಥಿನಿಯರಿಗೆ ಮಾಸಿಕ 31 ಸಾವಿರ ರೂಪಾಯಿಯ ಸ್ಟೈಫಂಡ್ ನೀಡಲಾಗುತ್ತದೆ. ಹಿರಿಯ ಸಂಶೋಧನಾ ವಿದ್ಯಾರ್ಥಿಗಳಿಗೆ 35 ಸಾವಿರ ರೂ ಹಾಗೂ ವಿಕಲಚೇತನರಿಗೆ ಮಾಸಿಕ 31 ಸಾವಿರ ರೂಪಾಯಿ ಬದಲಿಗೆ 35 ಸಾವಿರ ರೂಪಾಯಿ ಆರ್ಥಿಕ ನೆರವು ನೀಡಲಾಗುತ್ತದೆ.
ವಿದ್ಯಾರ್ಥಿನಿಯು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಕಾಲೇಜು, ಸಂಸ್ಥೆಯಲ್ಲಿ ಪೂರ್ಣ ಸಮಯದ ಪಿಎಚ್ಡಿ ಕೋರ್ಸ್ ಅನ್ನು ಮುಂದುವರಿಸುವುದು.ಮುಖ್ಯ ವಿಷಯವೆಂದರೆ, ಅರೆಕಾಲಿಕ ಪಿಎಚ್ಡಿ ವಿದ್ಯಾರ್ಥಿಗಳು ಸಾವಿತ್ರಿಬಾಯಿ ಜ್ಯೋತಿರಾವ್ ಫುಲೆ ಫೆಲೋಶಿಪ್ ಯೋಜನೆಗೆ ಅರ್ಹರಾಗಿರುವುದ್ದಿಲ್ಲ. 40 ವರ್ಷದೊಳಗಿನ ಮಹಿಳಾ ವಿದ್ಯಾರ್ಥಿಗಳು ಮಾತ್ರ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. SC/ST/OBC ಮತ್ತು PWD ವಿದ್ಯಾರ್ಥಿಗಳಿಗೆ 45 ವರ್ಷಗಳವರೆಗೆ ಸಡಿಲಿಕೆ ಸರಕಾರ ನೀಡಿದೆ.