Cleaning Tips: ನಿಮ್ಮ ಮನೆಯ ಕಿಟಕಿಯ ಗ್ಲಾಸ್ ತುಂಬ ಗಲೀಜಾಗಿದ್ಯಾ? ಹೀಗೆ ಮಾಡಿ ಮಿರಮಿರ ಮಿಂಚುತ್ತೆ
Cleaning Tips: ನಿಮ್ಮ ಮನೆಯ ಕಿಟಕಿಗಳು ಪದೇ ಪದೇ ಗಲೀಜು ಆಗುತ್ತಿದೆಯೇ. ಅವನ್ನು ಸ್ವಚ್ಚವಾಗಿಡಲು ಹೀಗೆ ಮಾಡಿ, ಸುಲಭವಾಗಿ ನಿಮ್ಮ ಕಿಟಕಿಯನ್ನು ಸ್ವಚ್ಚಗೊಳಿಸುವ ವಿಧಾನವನ್ನು ಈ ಕೆಳಗೆ ನೀಡಲಾಗಿದೆ.
ಸಾಮಾನ್ಯವಾಗಿ ಗ್ಲಾಸ್ ಗಳ ಮೇಲೆ ಫಿಂಗರ್ಪ್ರಿಂಟ್ಗಳು, ಸ್ಕ್ರಾಚ್ ಮಾರ್ಕ್ಗಳು ಅಥವಾ ಕೊಳೆಯಾಗಿರುವುದೆ ಹೆಚ್ಚು. ಇವುಗಳ ನಡುವೆ ಕಿಟಕಿಯ ಗಾಜನ್ನು ಹೊಳೆಯುವಂತೆ ಮಾಡುವುದು ಬಹಳ ಕಷ್ಟದಾಯಕ ಕೆಲಸವಾಗಿದೆ.
ಕೆಲವೊಂದು ಸರಳ ನಿಯಮಗಳನ್ನು ಮತ್ತು ವಿಧಾನಗಳನ್ನು ಅನುಸರಿಸುವ ಮೂಲಕ ಕಿಟಕಿಯ ಗ್ಲಾಸ್ ಗಳನ್ನು ಸ್ವಚ್ಚವಾಗಿಡಬಹುದು. ಈ ಕೆಳಗಿನ ನಿಯಮಗಳನ್ನು ಅನುಸರಿಸಿ ಸಾಕು.
ವಿನೆಗರ್: ನಮ್ಮ ಕಿಟಕಿಯ ಗ್ಲಾಸ್ಗಳನ್ನು ಸ್ವಚ್ಛಗೊಳಿಸುವಲ್ಲಿ ವಿನೆಗರ್ ಉತ್ತಮವಾಗಿ ಕೆಲಸ ನಿರ್ವಹಿಸುತ್ತದೆ. ಇದಕ್ಕಾಗಿ ಒಂದು ಸ್ಪ್ರೇ ಬಾಟಲಿಯಲ್ಲಿಯನ್ನು ತೆಗೆದುಕೊಂಡು ಬಿಳಿ ವಿನೆಗರ್ ಮತ್ತು ನೀರನ್ನು ಸೇರಿಸಿ ಮಿಕ್ಸ್ ಮಾಡಿಕೊಳ್ಳಿ.
ಆ ನೀರನ್ನು ಗ್ಲಾಸ್ ಮೇಲೆ ಸ್ಪ್ರೇ ಮಾಡಿ. ಸ್ಕ್ರಾಚ್ ಮಾರ್ಕ್ ಹೋಗಿಸಲು ಮೈಕ್ರೋಫೈಬರ್ ಬಟ್ಟೆಯನ್ನು ಬಳಸಿ ಒರೆಸಿ. ವಿನೆಗರ್ ಗ್ರೀಸ್ ಮತ್ತು ಕೊಳಕನ್ನು ವೇಗವಾಗಿ ತೆಗೆದುಹಾಕುತ್ತದೆ. ಇದರಿಂದಾಗಿ ಕಿಟಕಿಯ ಗ್ಲಾಸ್ ಗಳು ಹೊಳೆಯಲು ಶುರು ಮಾಡುತ್ತವೆ.
ಸ್ಯಾನಿಟೈಸರ್: ಕೊರೊನಾ ವೇಳೆ ಸ್ಯಾನಿಟೈಸರ್ ಅನ್ನು ಪ್ರತಿಯೊಬ್ಬರು ಬಳಸಿರುತ್ತೇವೆ. ಆದರೆ ಇದು ಅನೇಕ ವಸ್ತುಗಳನ್ನು ಸ್ವಚ್ಛಗೊಳಿಸಬಹುದು ಎಂಬ ಮಾಹಿತಿ ಬಹುತೇಕ ಮಂದಿಗೆ ಗೊತ್ತಿಲ್ಲ.
ಸ್ಪ್ರೇ ಬಳಸಿ ಗ್ಲಾಸ್ ನ ಮೇಲೆ ಸ್ಯಾನಿಟೈಸರ್ ಅನ್ನು ಸ್ಪ್ರೇ ಮಾಡಿ. ನಂತರ ಮೈಕ್ರೋಫೈಬರ್ ಬಟ್ಟೆಯ ಸಹಾಯದಿಂದ ಕಿಟಕಿಯ ಗ್ಲಾಸ್ ಅನ್ನು ಸ್ವಚ್ಛಗೊಳಿಸಿದರೆ, ಅದು ಹೊಸದರಂತೆ ಹೊಳೆಯುತ್ತದೆ.
ಸೋಪ್: ಕಿಟಕಿಯ ಗ್ಲಾಸ್ ಅನ್ನು ಸ್ವಚ್ಛಗೊಳಿಸಲು ಅತ್ಯಂತ ಹಳೆಯ ವಿಧಾನವಾಗಿದೆ. ಒಂದು ಸಣ್ಣ ಬಕೆಟ್ನಲ್ಲಿ ನೀರಿನೊಂದಿಗೆ ಸೋಪ್ ಲಿಕ್ವೆಡ್ ಹಾಕಿ, ಮಿಕ್ಸ್ ಮಾಡಿಕೊಂಡು ಫೋಮ್ ಅನ್ನು ತೆಗೆದುಕೊಂಡು ಇದರೊಳಗೆ ಅದ್ದಿ. ನಂತರ ಈ ಫೋಮ್ ಸಹಾಯದಿಂದ ಕಿಟಕಿಯ ಗಾಜನ್ನು ಮೆಲ್ಲಗೆ ಉಜ್ಜಿ ಕ್ಲೀನ್ ಮಾಡಿ.