PM of India after Modi: ಮೋದಿ ಬಳಿಕ ದೇಶದ ಪ್ರಧಾನಿ ಆಗೋದು ಯಾರು ಗೊತ್ತಾ?! ಬಯಲಾಯ್ತು ಬಿಜೆಪಿ ರಹಸ್ಯ

PM of India after Modi: ನರೇಂದ್ರ ಮೋದಿಯವರು ದೇಶ ಕಂಡಂತಹ ಹೆಮ್ಮೆಯ ಪ್ರಧಾನಮಂತ್ರಿಯಾಗಿದ್ದಾರೆ. 2014ರಲ್ಲಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಾಗಿನಿಂದ ಇದೀಗ 2024ರ ತನಕ ಅಂದರೆ ಸುದೀರ್ಘ 10 ವರ್ಷಗಳ ಕಾಲ ದೇಶದ ಪ್ರಧಾನಿಯಾಗಿ ದೇಶದ ಸ್ಥಾನನಮಾನವನ್ನು ವಿಶ್ವಮಟ್ಟದಲ್ಲಿ ಎತ್ತರಕ್ಕೆ ಏರಿಸಿದ್ದಾರೆ. ಅಷ್ಟೇ ಅಲ್ಲದೆ ಪ್ರಪಂಚದ ಪ್ರಭಾವಿ ಪ್ರಧಾನಿಗಳ, ನಾಯಕರ ಪಟ್ಟಿಯಲ್ಲಿ ನರೇಂದ್ರ ಮೋದಿಯವರೇ(Narendra modi) ಮೊದಲಿಗರು. ಅವರ ವರ್ಚಸ್ಸು, ಮಾತು, ಆಡಳಿತ ವೈಖರಿ ಯಾರಿಗೂ ಬರಲಾರದೇನೋ. ಒಟ್ಟಿನಲ್ಲಿ ಸದ್ಯಕ್ಕೆ ಅವರಿಗೆ ಪರ್ಯಾಯವಾಗಿ ಯಾವುದೇ ವ್ಯಕ್ತಿ ಇಲ್ಲ ಎಂದೆನಿಸುತ್ತದೆ. ಆದರೆ ಈ ನಡುವೆ ಮೋದಿ ಬಳಿಕ ದೇಶದ ಪ್ರಧಾನಿ(PM of India after Modi) ಯಾರಾಗುತ್ತಾರೆ ಎಂಬ ವಿಚಾರವೊಂದು ಮುನ್ನರೆಗೆ ಬಂದಿದೆ.

ಪ್ರಧಾನಿ ಮೋದಿಗೆ ಇದೀಗ 74-75 ವಯಸ್ಸು. ಹೆಚ್ಚೆಂದರೆ ಮುಂದಿನ 5 ವರ್ಷಗಳ ಅವಧಿಗೆ ಅವರು ಪ್ರಧಾನಿ ಆಗಿ ಮುಂದುವರಿಯಬಹುದು. ಅಂದರೆ 2028ರ ವರೆಗೆ. ಬಿಜೆಪಿ ನಿಯಮದ ಪ್ರಕಾರ 75 ದಾಟಿದವರಿಗೆ ಅಧಿಕಾರವಿಲ್ಲ ಎಂಬುದನ್ನೂ ನಾವು ನೆನಪಿಡಬೇಕು. ಆದರೆ ಮೋದಿ ಹವಾ ಆ ನಿಯಮವನ್ನೂ ಮೀರಿದ್ದು. ಒಟ್ಟಿನಲ್ಲಿ 5 ವರ್ಷಗಳ ಬಳಿಕ ಮುಂದಿನ ಪ್ರಧಾನಿ ಯಾರು? ಬಿಜೆಪಿ(BJP) ನೇತಾರ ಯಾರು ಎಂಬುದು ಯಕ್ಷ ಪ್ರಶ್ನೆ. ಅದಕ್ಕೆ ಸಮೀಕ್ಷೆಯೊಂದರ ಉತ್ತರ ಭಾರೀ ಅಚ್ಚರಿ ಮೂಡಿಸಿದೆ.

ಹೌದು, ಮೂಡ್ ಆಫ್ ದಿ ನೇಶನ್(Mood of the nation) ಸಮೀಕ್ಷೆಯಲ್ಲಿ ಕೆಲ ಅಚ್ಚರಿ ಮಾಹಿತಿ ತಿಳಿದು ಬಂದಿದೆ. ಮೋದಿ ನಂತರ ಜನ ಯಾರನ್ನು ಬಯಸುತ್ತಿದ್ದಾರೆ ಎಂಬುದು ಬಯಲಾಗಿದೆ. ಅಂದಹಾಗೆ ಮೋದಾಯವರನ್ನು ಬಿಟ್ಟರೆ ಪ್ರಧಾನಿ ಸ್ಥಾನ ಯಾರಿಗೆ ಹೆಚ್ಚು ಸೂಕ್ತ ಎಂಬ ಪ್ರಶ್ನೆಗೆ ಮೂರು ಪ್ರಬಲ ಬಿಜೆಪಿ ನಾಯಕರ ಹೆಸರು ಕೇಳಿ ಬಂದಿದೆ. ಆ ಮೂರು ನಾಯಕರು ಯಾರೆಂದರೆ ಕೇಂದ್ರ ಗೃಹ ಸಚಿವರಾದ ಅಮೀತ್ ಶಾ (Amit Shah), ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ (Yogi Adityanath), ರಸ್ತೆ , ಸಾರಿಗೆಯ ಕೇಂದ್ರ ಸಚಿವರಾದ ನಿತೀನ್ ಗಡ್ಕರಿ (Nitin Gadkari).

ಸಮೀಕ್ಷೆಯಲ್ಲಿ ಮುಂದಿನ ಪ್ರಧಾನಿ ಅಮೀತ್ ಶಾ ಅವರು ಸೂಕ್ತ ಎಂದು 29% ನಷ್ಟು ಜನ ಉತ್ತರಿಸಿದ್ದಾರೆ. ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ 25% ನಷ್ಟು ಸೂಕ್ತ ಎಂದು ಉತ್ತರಿಸಿದ್ದಾರೆ. ರಸ್ತೆ , ಸಾರಿಗೆಯ ಕೇಂದ್ರ ಸಚಿವರಾದ ನಿತೀನ್ ಗಡ್ಕರಿ ಅವರು 16% ನಷ್ಟು ಸೂಕ್ತ ಎಂದು ತಿಳಿಸಿದ್ದಾರೆ.

Leave A Reply

Your email address will not be published.