Congress: ದೇಶದ ಪ್ರಭಾವಿ ಕಾಂಗ್ರೆಸ್ ನಾಯಕ ಬಿಜೆಪಿ ಸೇರ್ಪಡೆ?! ಪುತ್ರನಿಗೆ ಲೋಕಸಭಾ ಟಿಕೆಟ್ ಫಿಕ್ಸ್ !!

Congress: ದೇಶದಲ್ಲಿ ಕಾಂಗ್ರೆಸ್ ಬುಡ ಸಂಪೂರ್ಣವಾಗಿ ಅಲುಗಾಡುತ್ತಿದೆ. ಪಕ್ಷದಲ್ಲಿ ಸೂಕ್ತ ನಾಯಕತ್ವ ಇಲ್ಲದೆ, ಕುಟುಂಬ ರಾಜಕಿಯದ ಪರಮಾವಧಿ ಒಂದೆಡೆಯಾದರೆ ಮೋದಿ ಹವಾ ಮತ್ತೊಂದೆಡೆಯಾಗಿದೆ. ಹೀಗಾಗಿ ಮೈತ್ರಿ ನೆಪ ಹೇಳಿ ಬಿಜೆಪಿ ದೋಸ್ತಿ ಬಯಸುತ್ತಿರುವ ಪಕ್ಷಗಳು ಕೆಲವಾದರೆ ಭವಿಷ್ಯವಿಲ್ಲ ಎಂದರಿತ ಕಾಂಗ್ರೆಸ್(Congress) ನಾಯಕರೂ ಬಿಜೆಪಿ ಬಾಗಿಲುತಟ್ಟುತ್ತಿದ್ದಾರೆ. ಅಂತೆಯೇ ಇದೀಗ ದೇಶದ ಪ್ರಭಾವಿ ಕಾಂಗ್ರೆಸ್ ನಾಯಕ ಬಿಜೆಪಿ(BJP) ಸೇರ್ಪಡೆ ಆಗುತ್ತಿದ್ದಾರೆ ಎಂಬ ವಿಚಾರ ಭಾರೀ ಸದ್ದು ಮಾಡುತ್ತಿದೆ.

ಹೌದು, ಮಧ್ಯಪ್ರದೇಶದ(Madhyapradesh) ಕಾಂಗ್ರೆಸ್ ನಾಯಕ, ಮಾಜಿ ಸಿಎಂ, ಕಳೆದ 45 ವರ್ಷ ಗಳಿಂದ ಕಾಂಗ್ರೆಸ್‌ನ ಕಟ್ಟಾಳುವಾಗಿದ್ದ ಕಮಲ್ ನಾಥ್(Kamalnath) ಬಿಜೆಪಿಯನ್ನು ಸೇರಬಹುದು ಎಂಬ ಗುಲ್ಲು ಹರಡಿದೆ. ಕಮಲ್‌ಗೆ ಬಿಜೆಪಿ ರಾಜ್ಯಸಭಾ ಸ್ಥಾನ ನೀಡಬಹುದು. ಪುತ್ರ ನಕುಲ್ ನಾಥ್‌ಗೆ ಛಂದ್ವಾಡಾ ಲೋಕಸಭೆ ಕ್ಷೇತ್ರದ ಟಿಕೆಟ್ ನೀಡಬಹುದು ಎಂಬ ವಿಚಾರ ಕೇಳಿಬರುತ್ತಿದೆ. ಈ ಸುದ್ದಿ ನಿಜವಾದರೆ ಕಮಲ್ ನಾಥ್ ರಾಜಕೀಯ ಜೀವನ ಬಹುದೊಡ್ಡ ತಿರುವು ಪಡೆದಂತಾಗಲಿದೆ.

ಕಮಲ್ ನಾಥ್ ಪಕ್ಷ ಬಿಡಲು ಕಾರಣವಾಗೋ ಅಂಶಗಳು:
ರಾಜ್ಯಾಧ್ಯಕ್ಷಸ್ಥಾನದಿಂದ ಕಮಲನಾಥ್‌ರನ್ನು ಕೆಳಗಿಳಿಸಿದ್ದ ಕಾಂಗ್ರೆಸ್
• ರಾಜ್ಯಾಧ್ಯಕ್ಷಸ್ಥಾನದಿಂದ ಕಮಲನಾಥ್‌ರನ್ನು ಕೆಳಗಿಳಿಸಿದ್ದ ಕಾಂಗ್ರೆಸ್
• ದಿಗ್ವಿಜಯ್ ಸಿಂಗ್ ಜೊತೆ ಕಮಲನಾಥ್ ಕಿತ್ತಾಟ
• ಕಮಲ್ ಜೊತೆ ರಾಜ್ಯಸಭಾ ಸದಸ್ಯ ವಿವೇಕ್ ತಂಖಾ ಕೂಡ ಬಿಜೆಪಿ ಸೇರ್ಪಡೆ?
• ಬಿಜೆಪಿಯಲ್ಲಿ ಕಮಲ್‌ಗೆ ರಾಜ್ಯಸಭಾ ಸ್ಥಾನ, ಪುತ್ರನಿಗೆ ಲೋಕಸಭೆ ಟಿಕೆಟ್ ಸಾಧ್ಯತೆ

2 Comments
  1. Hunter Kane says

    Hunter Kane

  2. Haley Richardson says

    Haley Richardson

Leave A Reply

Your email address will not be published.