Rajastan: ಕೆಲಸ ಕೊಡಿಸುವಾದಾಗಿ 20 ಹುಡುಗಿಯರ ಮೇಲೆ ಗ್ಯಾಂಗ್ ರೇಪ್ – ಯಪ್ಪಾ.. ಇವರೇನು ಮನುಷ್ಯರೋ, ರಾಕ್ಷಸರೋ?!

Rajastan : ಕೆಲಸ ಕೊಡಿಸುತ್ತೇನೆಂದು ಬರೋಬ್ಬರಿ 20 ಹುಡುಗಿಯರನ್ನು ವಂಚಿಸಿ, ಅವರ ಮೇಲೆ ಇಬ್ಬರು ಕಾಮುಕರು ಸಾಮೂಹಿಕ ಅತ್ಯಾಚಾರ ನಡೆಸಿದ ಭಯಾನಕ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

 

ಹೌದು, ರಾಜಸ್ಥಾನದ (Rajastan)ಲ್ಲಿ ಈ ಭಯಾನಕ ಪ್ರಕರಣ ಬೆಳಕಿಗೆ ಬಂದಿದೆ. ಸಿರೋಹಿ ಮುನ್ಸಿಪಲ್ ಕೌನ್ಸಿಲ್‌ನ ಅಧ್ಯಕ್ಷ ಮಹೇಂದ್ರ ಮೇವಾಡ ಮತ್ತು ಮಾಜಿ ಪುರಸಭೆಯ ಆಯುಕ್ತ ಮಹೇಂದ್ರ ಚೌಧರಿ ಆರೋಪಿಗಳಾಗಿದ್ದಾರೆ. ಸದ್ಯ ಅವರ ವಿರುದ್ಧ ಸಾಮೂಹಿಕ ಅತ್ಯಾಚಾರ ಪ್ರಕರಣ ದಾಖಲಾಗಿದೆ.

ಈ ಆರೋಪಿಗಳು ಸುಮಾರು 20 ಕ್ಕೂ ಹೆಚ್ಚು ಮಹಿಳೆಯರಿಗೆ ಅಂಗನವಾಡಿ (Aganvadi) ಕೇಂದ್ರಗಳಲ್ಲಿ ಉದ್ಯೋಗ ಕೊಡಿಸುವುದಾಗಿ ವಂಚನೆ ಮಾಡಿದ್ದಾರೆ ಎಂದು ಮಹಿಳೆಯೊಬ್ಬರು ಪೊಲೀಸರಿಗೆ ದೂರು ನೀಡಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ.

ಏನಿದು ಪ್ರಕರಣ? ಮಹಿಳೆ ಹೇಳಿದ್ದೇನು?
ಅಂಗನವಾಡಿಯಲ್ಲಿ ಕೆಲಸ ಕೊಡಿಸುವುದಾಗಿ ಆಸೆ ತೋರುವ ಈ ಕಾಮುಕರು ಮಹಿಳೆಯರನ್ನು ಕರೆಸಿಕೊಂಡು ಸಂತ್ರಸ್ತೆಗೆ, ಆರೋಪಿಗಳು ವಸತಿ ಮತ್ತು ಊಟದ ಸೌಕರ್ಯವನ್ನು ಒದಗಿಸುತ್ತಾರೆ. ಬಳಿಕ ಆರೋಪಿಗಳು ನೀಡಿದ ಊಟದಲ್ಲಿ ನಿದ್ರೆ ಮಾತ್ರೆ ಹಾಕಿಕೊಟ್ಟು, ಅದನ್ನು ಸೇವಿಸಿದ ನಂತರ ಮಹಿಳೆ ಪ್ರಜ್ಞೆ ತಪ್ಪುವಂತೆ ಮಾಡುತ್ತಾರೆ. ಬಳಿಕ ಅತ್ಯಾಚಾರ ಎಸಗುತ್ತಾರೆ. ಈ ಘಟನೆಯನ್ನು ಸಂತ್ರಸ್ತ ಮಹಿಳೆ ವಿವರಿಸಿದ್ದಾಳೆ. ಇಷ್ಟೇ ಅಲ್ಲದೆ ಆರೋಪಿಗಳು ಮಹಿಳೆಯರ ಮೇಲೆ ಆತ್ಯಾಚಾರವೆಸಗಿ ಅದನ್ನು ವೀಡಿಯೋ ಮಾಡಿಕೊಂಡಿದ್ದು, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುವುದಾಗಿ ಬೆದರಿಕೆ ಹಾಕಿ ಸಂತ್ರಸ್ತೆಯರಿಂದ ತಲಾ 5 ಲಕ್ಷ ರೂ. ನೀಡುವಂತೆ ಹೇಳಿ ಬೆದರಿಕೆ ಹಾಕಿದ್ದಾರೆ.

ಮಹಿಳೆ ದೂರು ನೀಡಿದರೂ ಸುಳ್ಳು ದೂರು ಎಂದು ಪೋಲೀಸ್ ಅಧಿಕಾರಿ ಕೈಕಟ್ಟಿ ಕುಳಿತಿದ್ದರು. ಆದರೆ ಎಂಟು ಮಹಿಳೆಯರು ಕೋರ್ಟ್ ಮೊರೆ ಹೋಗಿದ್ದು, ಪ್ರಕರಣ ದಾಕಲಿಸಿಕೊಳ್ಳುವಂತೆ ಹೈಕೋರ್ಟ್ ಸೂಚನೆ ನೀಡಿದೆ.

Leave A Reply

Your email address will not be published.