Mangaluru: ಹಿಂದೂ ಜಾಗರಣಾ ವೇದಿಕೆ ಮುಖಂಡರಿಬ್ಬರ ಗಡಿಪಾರು ನೋಟಿಸ್‌; ನ್ಯಾಯಾಲಯ ತಡೆ

Hindu Jagarana Vedike: ಹಿಂದೂ ಜಾಗರಣ ವೇದಿಕೆ ಮುಖಂಡರಾದ ದಿನೇಶ್‌ ಪಂಜಿಗ ಹಾಗೂ ಬೆಳ್ತಂಗಡಿಯ ಯಶೋಧರ ಅವರ ಗಡಿಪಾರು ನೋಟಿಸ್‌ಗೆ ನ್ಯಾಯಾಲಯವು ತಡೆಯಾಜ್ಞೆಯನ್ನು ನೀಡಿದೆ. ಕರ್ನಾಟಕ ಪೊಲೀಸ್‌ ಕಾಯ್ದೆ ಕಲಂ 55ರಂತೆ ವಿಜಯಪುರ ಜಿಲ್ಲೆಯ ಸಿಂಧಗಿ ಪೊಲೀಸ್‌ ಠಾಣಾ ವ್ಯಾಪ್ತಿಗೆ ನಿಮ್ಮ ಯಾಕೆ ಗಡಿಪಾರು ಮಾಡಬಾರದು ಎಂಬ ಕಾರಣವನ್ನು ಕೇಳಿ ಪುತ್ತೂರು ಉಪವಿಭಾಗೀಯ ದಂಡಾಧಿಕಾರಿ ನೋಟಿಸ್‌ ಜಾರಿ ಮಾಡಿದ್ದರು. ಹಾಗಾಗಿ ಈ ಕುರಿತು ವಿಚಾರಣೆಗೆ ಹಾಜರಾಗಿ ವಾದಿಸಬಹುದು ಎಂಬುವುದನ್ನು ನೋಟಿಸ್‌ ಪತ್ರದಲ್ಲಿ ಹೇಳಲಾಗಿತ್ತು. ಈ ಕ್ರಮವನ್ನು ಪ್ರಶ್ನಿಸಿ ದಿನೇಶ್‌ ಪಂಜಿಗ ಹಾಗೂ ಬೆಳ್ತಂಗಡಿಯ ಯಶೋಧರ ಅವರು ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ್ಕೆಕ ಮೇಲ್ಮನವಿ ಮಾಡಿದ್ದರು.

 

ಇದನ್ನೂ ಓದಿ: Udupi: ನಮಾಝ್‌ಗೆಂದು ಕುಳಿತಾಗಲೇ ಸ್ಥಳದಲ್ಲಿಯೇ ಹೃದಯಾಘಾತ; ವ್ಯಕ್ತಿ ಸಾವು

ಅರ್ಜಿದಾರರ ಪರವಾಗಿ ಮಹೇಶ್‌ ಕಜೆ ವಕೀಲರು ವಾದ ಮಾಡಿದ್ದು, ನೋಟಿಸ್‌ ಜಾರಿ ಮಾಡಿದ್ದು ಸರಿಯಲ್ಲ ಎಂದು ವಾದ ಮಾಡಿದ್ದರು. ಅರ್ಜಿದಾರರ ವಾದವನ್ನು ಪುರಸ್ಕರಿಸಿದ ನ್ಯಾಯಾಧೀಶರು ಇದೀಗ ಗಡಿಪಾರು ನೋಟಿಸ್‌ಗೆ ತಡೆಯಾಜ್ಞೆಯನ್ನು ನೀಡಿದ್ದಾರೆ. ಆಪಾದಿತರ ವಿರುದ್ಧದ ಎಲ್ಲಾ ಕಡತಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಸೂಚಿಸಿದ್ದಾರೆ ಎಂದು ವರದಿಯಾಗಿದೆ.

Leave A Reply

Your email address will not be published.