Government Employee Salary: 8 ನೇ ವೇತನ ಆಯೋಗ ಜಾರಿ ಕುರಿತು ಮಹತ್ವದ ಮಾಹಿತಿ
8th Pay Commission :ಕೇಂದ್ರ ಸರ್ಕಾರವು ಪ್ರತಿ 10 ವರ್ಷಕ್ಕೊಮ್ಮೆ ವೇತನ ಆಯೋಗವನ್ನು ರಚನೆ ಮಾಡುತ್ತದೆ. 2014ರಲ್ಲಿ ಏಳನೇ ವೇತನ ಆಯೋಗ ರಚನೆ ಮಾಡಿತ್ತು. ಇದರ ಶಿಫಾರಸ್ಸುಗಳು 2016ರಲ್ಲಿ ಜಾರಿಗೆ ಬಂದವು. ಇದೀಗ ನೌಕರರು ಎಂಟನೇ ವೇತನ ಆಯೋಗದ ರಚನೆಗಾಗಿ ಕಾಯುತ್ತಿದ್ದಾರೆ. ಈ ಕುರಿತಂತೆ ಅಧಿಕೃತ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ: CM Siddaramaiah: ಸಿಎಂ ಸಿದ್ದರಾಮಯ್ಯನ ರಾಜಕೀಯ ನಿವೃತ್ತಿ?!
ನೌಕರರು ಈ ಬಾರಿಯ ಬಜೆಟ್ ನಲ್ಲಿ ಕೇಂದ್ರ ಸರ್ಕಾರದ ತುಟ್ಟಿಭತ್ಯೆಗಾಗಿ ಕಾಯುತ್ತಿದ್ದರು. ಆದರೆ ಸರ್ಕಾರದ ಕಡೆಯಿಂದ ಯಾವುದೇ ಗ್ರೀನ್ ಸಿಗ್ನಲ್ ದೊರೆಯಲಿಲ್ಲ. ಇದೀಗ ಸರಕಾರ ತನ್ನ 8 ನೇವೇತನ ಆಯೋಗವನ್ನು ಮಾಡಲು ಸಿದ್ಧತೆ ನಡೆಸುತ್ತಿದೆ.
ಕೇಂದ್ರ ಸರಕಾರ ಈ ವೇತನ ಆಯೋಗವನ್ನು 10 ವರ್ಷಗಳಿಗೊಮ್ಮೆ ರಚನೆ ಮಾಡುತ್ತದೆ. ಈ ಆಯೋಗದ ಶಿಫಾರಸ್ಸಿನ ಮೇಲೆಯೇ ಕೇಂದ್ರ ನೌಕರರ ಸಂಬಳ ನಿರ್ಧಾರವಾಗುವುದು. 1946 ರಲ್ಲಿ ಮೊದಲ ಆಯೋಗ ರಚನೆಯಾಯಿತು.
ಈ ಹಿಂದೆ ಫೆಬ್ರವರಿ 28, 2014 ರಂದು ಏಳನೇ ವೇತನ ಆಯೋಗವನ್ನು ರಚಿಸಲಾಗಿತ್ತು. ಇದರ ಶಿಫಾರಸ್ಸುಗಳು 2016ರಲ್ಲಿ ಜಾರಿಗೆ ಬಂದ್ದವು. ಇದೀಗ ಎಂಟನೇ ಆಯೋಗದತ್ತ ಕೇಂದ್ರ ಸರ್ಕಾರಿ ನೌಕರರು ಮುಖ ಮಾಡಿದ್ದಾರೆ.
ಕೇಂದ್ರ ಹಣಕಾಸು ಖಾತೆ ಸಚಿವ ಪಂಕಜ್ ಚೌಧರಿ ಅವರು ಬುಧವಾರ ರಾಜ್ಯಸಭೆಯಲ್ಲಿ ಲಿಖಿತ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ, 8ನೇ ವೇತನ ಆಯೋಗದ ಕುರಿತು ಸರ್ಕಾರದ ಮುಂದೆ ಯಾವುದೇ ಪ್ರಸ್ತಾವನೆ ಪರಿಶೀಲನೆಯಲ್ಲಿ ಇಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಈ ಆಗಾಗಲೇ ಇರುವ ಕೇಂದ್ರ ನೌಕರರು ಮತ್ತು ಪಿಂಚಣಿದಾರರ ವೇತನ, ಭತ್ಯೆ ಮತ್ತು ಪಿಂಚಣಿಗಳನ್ನು ಪರಿಶೀಲಿಸಲು ಹೊಸ ಆಯೋಗದ ರಚನೆ ಬೇಕಿಲ್ಲ. ಈ ಹಿಂದೆ ಮಾಡಲಾದ ಏಳನೇ ವೇತನ ಆಯೋಗದ ಶಿಫಾರಸ್ಸಿನ ಮೇಲೆ ನಿರ್ಧರಿಸಲಾಗುವುದು ಎಂದು ಸರ್ಕಾರ ಹೇಳಿದೆ. ಹೊಸದಾಗಿ ನೌಕರರ ಕಾರ್ಯಕ್ಷಮತೆ ಆಧಾರದ ಮೇಲೆ ಸಂಬಳ ಹೆಚ್ಚಿಸುವ ವ್ಯವಸ್ಥೆಯ ಜಾರಿಗೆ ತರುವ ಚಿಂತನೆಯಲ್ಲಿ ಸರ್ಕಾರವಿದೆ ಎಂದು ತಿಳಿಸಿದ್ದಾರೆ.
ತುಟ್ಟಿಭತ್ಯೆ ಹೆಚ್ಚಳ ಸಾಧ್ಯತೆ
ನೌಕರರು ಮತ್ತು ಪಿಂಚಣಿದಾರರಿಗೆ ಸಂಬಂಧಿಸಿದಂತೆ ಸಂಸ್ಥೆಗಳು 8ನೇ ವೇತನ ಆಯೋಗವನ್ನು ರಚಿಸುವ ಸಾಧ್ಯತೆ ಇದೆ. ಪ್ರಸ್ತುತ ದೇಶದಲ್ಲಿ ಸುಮಾರು 48.62 ಲಕ್ಷ ಕೇಂದ್ರ ನೌಕರರು ಮತ್ತು 67.85 ಲಕ್ಷ ಪಿಂಚಣಿದಾರರಿದ್ದಾರೆ. ಕೇಂದ್ರ ಸರ್ಕಾರದ ಶೀಘ್ರದಲ್ಲೇ ತುಟ್ಟಿಭತ್ಯೆಯನ್ನು ಘೋಷಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಸಾಮಾನ್ಯವಾಗಿ ತುಟ್ಟಿಭತ್ಯೆಯನ್ನು ವರ್ಷಕ್ಕೆ 2 ಬಾರಿ ಹೆಚ್ಚಿಸಲಾಗುತ್ತದೆ. ಪಿಂಚಣಿದಾರರು ತುಟ್ಟಿಭತ್ಯೆಯನ್ನು ಪಡೆಯುತ್ತಾರೆ. ಮೊದಲನೆಯ ಹೆಚ್ಚಳವು ಜನವರಿಯಿಂದ ಜೂನ್‌ವರೆಗಿನ ಅವಧಿಗೆ ಹಾಗೂ ಎರಡನೆಯದು ಜುಲೈನಿಂದ ಡಿಸೆಂಬರ್‌ವರೆಗಿನ ಅವಧಿಗೆ ಇರುತ್ತದೆ. ಪ್ರಸ್ತುತ ಮೂಲ ವೇತನದ ಶೇ.46ರಷ್ಟಿದೆ.