Bengaluru: ಕಾರ್‌ ಟಚ್‌ ಆಗಿದ್ದಕ್ಕೆ ಪ್ಯಾಂಟ್‌ ಬಿಚ್ಚಿ ತೋರಿಸಲು ಮುಂದಾದ ಇನ್ನೋರ್ವ ಕ್ಯಾಬ್‌ ಡ್ರೈವರ್‌; ಜನರಿಂದ ಆಕ್ರೋಶ

Share the Article

Bengaluru: ಬೆಂಗಳೂರಿನಲ್ಲಿ ದಿನೇ ದಿನೇ ರೋಡ್‌ ರೇಜ್‌ ಪ್ರಕರಣ ಹೆಚ್ಚುತ್ತಲೇ ಇರುತ್ತಿದೆ. ರೋಡ್‌ ರೇಜ್‌ ಪ್ರಕರಣಗಳಲ್ಲಿ ಭಾಗಿಯಾಗುವ ವ್ಯಕ್ತಿಗಳ ಮೇಲೆ ಪೊಲೀಸರು ವಾರ್ನಿಂಗ್‌ ನೀಡಿದರೂ, ರೌಡಿಶೀಟರ್‌ ಓಪನ್‌ ಮಾಡುವ ಕುರಿತು ಹೇಳಿದರೂ ಇಂತವರ ಸಂಖ್ಯೆ ಮಾತ್ರ ಕಡಿಮೆ ಆಗಿಲ್ಲ. ಇದಕ್ಕೆ ನಿನ್ನೆ (ಶುಕ್ರವಾರ) ನಡೆದ ಘಟನೆಯೂ ಒಂದು ಸಾಕ್ಷಿ

ಹೆಬ್ಬಾಳ ಸಿಗ್ನಲ್‌ ಬಳಿ ಎರಡು ಕಾರುಗಳ ನಡುವೆ ಟಚ್‌ ಆಗಿತ್ತು. ಈ ಸಂದರ್ಭದಲ್ಲಿ ಕಾರಿನಿಂದ ಕೆಳಗೆ ಇಳಿದ ಕ್ಯಾಬ್‌ ಡ್ರೈವರ್‌ ಮತ್ತೊಂದು ಕಾರಿನಲ್ಲಿದ್ದವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಮುಂದಾಗಿರುವ ಘಟನೆ ನಡೆದಿತ್ತು. ಅಷ್ಟಲ್ಲದೇ ಕಾರಿನಲ್ಲಿದ್ದ ಫ್ಯಾಮಿಲಿ ಮುಂದೆಯೇ ಪ್ಯಾಂಟ್‌ ಬಿಚ್ಚಿ ಅಸಭ್ಯವಾಗಿ ವರ್ತಿಸಲು ಮುಂದಾಗಿದ್ದಾನೆ ಎಂದು ವರದಿಯಾಗಿದೆ.

ಇದನ್ನೂ ಓದಿ: Helmet Compulsory: 6 ವರ್ಷ ಮೇಲ್ಪಟ್ಟ ಮಕ್ಕಳಿಗೂ ಹೆಲ್ಮೆಟ್‌ ಕಡ್ಡಾಯ; ಪೋಷಕರೇ ನಿಮಗೂ ಇದೆ ರೂಲ್ಸ್‌-ಪೊಲೀಸರಿಂದ ಖಡಕ್‌ ಆದೇಶ

ಇದೀಗ ಚಾಲಕನ ವರ್ತನೆ ವಿರುದ್ಧ ಇತರೆ ಚಾಲಕರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದು, ಅಸಭ್ಯ ವರ್ತನೆಯ ವೀಡಿಯೋಗಳನ್ನು ತೆಗೆದು ಪೊಲೀಸ್‌ ಆಯುಕ್ತರಿಗೆ ಟ್ಯಾಗ್‌ ಮಾಡಿ ಕ್ರಮಕ್ಕೆ ಒತ್ತಾಯ ಮಾಡಲಾಗಿದೆ. ಕೊಡಿಗೆಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

Leave A Reply