Auto Drivers: ರಿಕ್ಷಾ ಚಾಲಕರಿಗೆ ಭರ್ಜರಿ ಗುಡ್‌ನ್ಯೂಸ್; 12 ಸಾವಿರ ಧನ ಸಹಾಯ ಘೋಷಣೆ ಮಾಡಿದ ಕಾಂಗ್ರೆಸ್ ಸರಕಾರ
ರಾಜ್ಯದಲ್ಲಿ ಮಹಿಳೆಯರಿಗೆ ಉಚಿತ ಆರ್‌ಟಿಸಿ (ಮಹಾಲಕ್ಷ್ಮೀ ಯೋಜನೆ) ಜಾರಿ ಮಾಡಿದ್ದರಿಂದ ಆಟೋಚಾಲಕರು ತೀವ್ರ ತೊಂದರೆ ಅನುಭವಿಸುತ್ತಿರುವ ಕಾರಣ ಚಾಲಕರಿಗೆ ಧೈರ್ಯ ತುಂಬುವ ಕೆಲಸಕ್ಕೆ ಮುಂದಾಗಿದೆ. ಸಂಕಷ್ಟದಲ್ಲಿರುವ ಆಟೋ ಚಾಲಕರಿಗೆ ನೆರವು ನೀಡುವುದಾಗಿ ತೆಲಂಗಾಣ ಸರಕಾರ ರಾಜ್ಯದ ಆಟೋ ಚಾಲಕರಿಗೆ ವರ್ಷಕ್ಕೆ 12 ಸಾವಿರ ರೂ.ನಂತೆ ಆರ್ಥಿಕ ನೆರವು ನೀಡಲಾಗುವುದು ಎಂದು ತಿಳಿಸಿದ್ದಾರೆ.
ಬರುವ ಬಜೆಟ್‌ನಲ್ಲಿ ಆಟೋ ಚಾಲಕರಿಗೆ ವರ್ಷಕ್ಕೆ 12ಸಾವಿರ ಧನಸಹಾಯವನ್ನು ಜಾರಿಗೊಳಿಸುವುದಾಗಿ ಭರವಸೆ ನೀಡಿದ್ದಾರೆ.
ವಿರೋಧ ಪಕ್ಷವು ತೆಲಂಗಾಣ ವಿಧಾನಸಭೆಯಲ್ಲಿ ಚಾಲಕರ ಸಮಸ್ಯೆಗಳ ಬಗ್ಗೆ ಸರಕಾರವನ್ನು ಪ್ರಶ್ನೆ ಮಾಡಿತ್ತು. ಬಿಆರ್‌ಎಸ್ ಶಾಸಕ ಪಲ್ಲಾ ರಾಜೇಶ್ವರ್ ರೆಡ್ಡಿ ಕೇಳಿದ ಪ್ರಶ್ನೆಗೆ ಸಚಿವ ಶ್ರೀಧರ ಬಾಬು ಅವರು ಮಹಾಲಕ್ಷ್ಮೀ ಯೋಜನೆ ಜಾರಿಯಿಂದ ಈಗಾಗಲೇ ಆಟೋ ಚಾಲಕರಿಗೆ ಸಣ್ಣಪುಟ್ಟ ಸಮಸ್ಯೆ ಎದುರಾಗಲಿದೆ ಎಂದು ಪ್ರಣಾಳಿಕೆಯಲ್ಲಿ ಉಲ್ಲೇಖ ಮಾಡಲಾಗಿದೆ.
ಆಟೋ ಚಾಲಕರು ಈ ಯೋಜನೆಯಿಂದ ನಷ್ಟ ಅನುಭವಿಸುತ್ತಿದ್ದಾರೆ ಎಂಬ ಟೀಕೆ ಬಂದ ಬೆನ್ನಲ್ಲೇ ಸಚಿವ ದಿಡ್ಡಿಲ್ಲಾ ಶ್ರೀಧರ್ ಬಾಬು ವಿಧಾನಸಭಾ ವೇದಿಕೆಯಲ್ಲಿ ಈ ಮಹತ್ವದ ಘೋಷಣೆಯನ್ನು ಮಾಡಿದ್ದಾರೆ.