Mangaluru: ಹನುಮಧ್ವಜ ಮರು ಸ್ಥಾಪನೆ ಮಾಡದಿದ್ದರೆ ತೀವ್ರ ಹೋರಾಟ; ಅನಾಹುತ ಸಂಭವಿಸಿದರೆ ರಾಜ್ಯ ಸರಕಾರ ಹೊಣೆ- ಶರಣ್ ಪಂಪ್ವೆಲ್
Mangaluru: ಮಂಡ್ಯ ಜಿಲ್ಲೆಯ ಕೆರಗೋಡಿನಲ್ಲಿ ಸುಮಾರು ನಲುವತ್ತು ವರ್ಷಗಳಿಂದ ಹನುಮ ಧ್ವಜ ಹಾರಾಡುತ್ತಿತ್ತು. ಇದೀಗ ಹನುಮ ಧ್ವಜ ತೆರವುಗೊಳಿಸಲಾಗಿದೆ. ಹನುಮಧ್ವಜ ಎಲ್ಲಿತ್ತೋ ಅಲ್ಲೇ ಮರುಸ್ಥಾಪನೆ ಮಾಡದಿದ್ದರೆ ಹೋರಾಟ ತೀವ್ರಗೊಳಿಸುತ್ತೇವೆ, ಕೆರಗೋಡು ಚಲೋ ಮಾಡುತ್ತೇವೆ ಎಂದು ವಿಶ್ವಹಿಂದು ಪರಿಷತ್ ಮುಖಂಡ ಶರಣ್ ಪಂಪ್ವೆಲ್ ಹೇಳಿಕೆ ನೀಡಿದ್ದಾರೆ.
ನಗರದ ಕ್ಲಾಕ್ ಟವರ್ ಬಳಿ ಇಂದು ಹನುಮಧ್ವಜ ತೆರವು ಖಂಡಿಸಿ ವಿಶ್ವ ಹಿಂದು ಪರಿಷತ್ ಮತ್ತು ಬಜರಂಗದಳ ಪ್ರತಿಭಟನೆ ನಡೆಯಿತು. ಶರಣ್ ಪಂಪ್‌ವೆಲ್ ನೇತೃತ್ವದಲ್ಲಿ ಹನುಮಾನ್ ಚಾಲೀನ ಪಠಣ ಮಾಡಿ ಧರಣಿ ಮಾಡಲಾಯಿತು. ಕೆರೆಗೋಡು ಗ್ರಾಮದಲ್ಲಿ ಹನುಮಧ್ವಜ ಮರುಸ್ಥಾಪನೆಗೆ ಅನುಮತಿ ನೀಡದೇ ಹೋದಲ್ಲಿ ಹೋರಾಟ ತೀವ್ರಗೊಳಿಸುವುದಾಗಿ ರಾಜ್ಯಸರಕಾರಕ್ಕೆ ಎಚ್ಚರಿಕೆ ನೀಡಿದರು.
ಕೆರಗೋಡು ಚಲೋ ಪ್ರತಿಭಟನೆಗೆ ರಾಜ್ಯದ ಎಲ್ಲಾ ಭಾಗದಿಂದ ವಿಶ್ವ ಹಿಂದೂ ಪರಿಷತ್, ಬಜರಂಗದಳ ಕಾರ್ಯಕರ್ತರು ಕೆರೆಗೋಡಿ ಬರಲಿದ್ದಾರೆ. ನಾವೇ ಹನುಮಧ್ವಜ ಹಾರಿಸಲಿದ್ದೇವೆ. ಮುಂದಾಗುವ ಅನಾಹುತಗಳಿಗೆ ರಾಜ್ಯ ಸರಕಾರವೇ ಹೊಣೆಯಾಗುತ್ತದೆ ಎಂದು ಶರಣ್‌ಪಂಪ್‌ವೆಲ್ ಹೇಳಿದರು.