Viagra: ವಯಾಗ್ರವು ಅಲ್ಝೈಮರ್ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡವಲ್ಲಿ ಸಹಕಾರಿ-ಅಧ್ಯಯನ
Viagra: ವಯಾಗ್ರವು ಅಲ್ಝೈಮರ್ ಕಾಯಿಲೆಯ ಅಪಾಯವನ್ನು ಕಡಿಮೆಗೊಳಿಸುತ್ತದೆ ಎಂದು ಅಧ್ಯಯನವೊಂದು ತಿಳಿಸಿದೆ.
ಆಲ್ಝೈಮರ್ನ ಕಾಯಿಲೆ ಎಂದರೆ ಮರೆಗುಳಿ ತನ. ಮರೆಗುಳಿ ತನವನ್ನು ಕಾಯಿಲೆ ಎಂದೆ ಕರೆಯಲಾಗುತ್ತದೆ. ಈ ಕಾಯಿಲೆ ಇಂದ ದಿನ ಕಳೆಯುತ್ತಿದ್ದಂತೆ ಸ್ಮರಣ ಶಕ್ತಿಯು ಕುಂದುತ್ತ ಹೋಗುತ್ತದೆ. ವಯಾಗ್ರವು ಅಲ್ಝೈಮರ್ ಕಾಯಿಲೆಯು ಅಪಾಯ ತರುತ್ತದೆ ಎಂದು ಹೇಳಲಾಗಿತ್ತು. ಆದರೆ ಈಗ ಸಂಶೋಧಕರು ವಯಾಗ್ರವು ಅಲ್ಝೈಮರ್ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ತಿಳಿಸಿದ್ದಾರೆ.
ಈ ಅಧ್ಯಯನವು ಕೊನೆ ಎಂದು ಹೇಳಲಾಗುವುದಿಲ್ಲ. ಆದರೂ ವಯಾಗ್ರ ಮತ್ತು ಆ ಔಷಧಿಗಳನ್ನು ಬಳಸಿದ ಪುರುಷರು ಜೀವನದ ನಂತರದ ವರ್ಷಗಳಲ್ಲಿ ಬುದ್ಧಿಮಾಂದ್ಯತೆಯಿಂದ ಬಳಲುವ ಸಾಧ್ಯತೆ ಶೇಕಡಾ 18 ರಷ್ಟು ಕಡಿಮೆ ಇದೆ ಎಂದು ಸಂಶೋಧಕರು ಕಂಡುಹಿಡಿದಿದ್ದಾರೆ.
ಗರಿಷ್ಠ ಸಂಖ್ಯೆಯ ಬಾರಿ ಔಷಧಿಯನ್ನು ಸೂಚಿಸಿದ ಪುರುಷರಲ್ಲಿ ವಯಾಗ್ರದ ಪರಿಣಾಮವು ಪ್ರಬಲವಾಗಿದೆ . ವಿಜ್ಞಾನಿಗಳು ತಮ್ಮ ಅಧ್ಯಯನದ ಸಮಯದಲ್ಲಿ ನಿಮಿರುವಿಕೆ ಕ್ರಿಯೆಯ ಮಾತ್ರೆಗಳನ್ನು 21 ರಿಂದ 50 ಬಾರಿ ಶಿಫಾರಸ್ಸು ಮಾಡಿದವರಲ್ಲಿ ಅಲ್ಝೈಮರ್ನ ಅಪಾಯವು ಶೇಕಡಾ 44 ರಷ್ಟು ಕಡಿಮೆ ಇದೆ ಎಂಬುದನ್ನು ಕಂಡುಕೊಂಡರು.
dqzbbg