Yogi adithyanath: ಅಯೋಧ್ಯೆ ಆಯಿತು, ಮುಂದಿನ ಟಾರ್ಗೆಟ್ ಈ ಮಸೀದಿಗಳು – ಹೊಸ ಘೋಷಣೆ ಹೊರಡಿಸಿದ ಸಿಎಂ ಯೋಗಿ ಆದಿತ್ಯನಾಥ್ !!

Yogi adithyanath: ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮನ ಭವ್ಯ ಮಂದಿರ ನಿರ್ಮಾಣವಾಗಿ ಕೋಟ್ಯಾಂತರ ಹಿಂದೂಗಳ ನೂರಾರು ವರ್ಷಗಳ ಕನಸು ನೆರವೇರಿದೆ. ಇದರ ಬೆನ್ನಲ್ಲೇ ದೇಶದ ಹಿಂದೂಗಳ ಚಿತ್ತ ಕಾಶಿ, ಮಥುರೆಯತ್ತ ನೆಟ್ಟಿದೆ. ಸನಾತನ ಸಂಸ್ಕೃತಿಯ ಭಾರತವನ್ನು ಎದುರು ನೋಡುತ್ತಿದ್ದಾರೆ. ಈ ಬೆನ್ನಲ್ಲೇ ಸಿಎಂ ಯೋಗಿ ಆದಿತ್ಯನಾಥ್(CM Yogi Adithyanath) ಮಹತ್ವದ ಘೋಷಣೆಯೊಂದನ್ನು ಹೊರಡಿಸಿದ್ದಾರೆ.

ಇದನ್ನೂ ಓದಿ: Beautiful Women: ಈ ದೇಶದ ಹುಡುಗಿಯರು ಅತ್ಯಂತ ಸುಂದರಿಯರಂತೆ, ಭಾರತದ ಸಂಖ್ಯೆ ಎಷ್ಟರಲ್ಲಿದೆ?

ಹೌದು, ಉತ್ತರ ಪ್ರದೇಶದ(Uttar pradesh) ವಿಧಾನಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath), ಬಿಜೆಪಿಯ ಆದ್ಯತೆಯ ಪಟ್ಟಿಯಲ್ಲಿ ಕೃಷ್ಣ ಜನ್ಮಭೂಮಿ (Krishna Janmabhoomi) ಭೂ ವಿವಾದವು ಮುಂದಿನ ಸ್ಥಾನದಲ್ಲಿದೆ. ನಂದಿ ಬಾಬಾ ಅಯೋಧ್ಯೆಯಲ್ಲಿ ಆಚರಣೆಗಳನ್ನು ನೋಡಿದಾಗ ಅದು ಹಠ ಹಿಡಿದು ರಾತ್ರಿಯಲ್ಲಿ ಬ್ಯಾರಿಕೇಡ್‌ಗಳನ್ನು ಮುರಿದಿತ್ತು. ಈಗ ನಮ್ಮ ಕೃಷ್ಣ ಕನ್ಹಯ್ಯಾ ಅಚಲ” ಎಂದು ಹೇಳಿದ್ದಾರೆ. ಅಯೋಧ್ಯೆಯ ನಂತರ ಕಾಶಿ (ವಾರಣಾಸಿ) ಮತ್ತು ಮಥುರಾ ವಿಷಯಗಳು ಅವರ ಅಜೆಂಡಾದಲ್ಲಿ ಪ್ರಮುಖವಾಗಿವೆ ಎಂಬುದಕ್ಕೆ ಇಲ್ಲಿ ಆದಿತ್ಯನಾಥ್ ಹೇಳಿಕೆಗಳು ಸ್ಪಷ್ಟ ಸೂಚನೆಯಾಗಿದೆ.

 

ಅಲ್ಲದೆ ಮಹಾಭಾರತದಲ್ಲಿ ಶ್ರೀಕೃಷ್ಠ , ಕೌರವರ ಜೊತೆಗಿನ ಸಂಧಾನದಲ್ಲಿ ಪಾಂಡವರಿಗಾಗಿ ಕೇವಲ ಐದು ಹಳ್ಳಿಗಳನ್ನು ಕೇಳಿದ್ದ. ಇಂದು ಹಿಂದೂ ಸಮುದಾಯವು (Hindu Community) ತಮ್ಮ ಪವಿತ್ರ ಮೂರು ಸ್ಥಳಗಳನ್ನು ಕೇಳುತ್ತಿದ್ದಾರೆಂದು ಅವರು ಹೇಳುವ ಮೂವಲಕ ಅಯೋಧ್ಯೆಯ ಬಳಿಕ, ಕಾಶಿ (Kashi Gyanvapi mosque) ಮತ್ತು ಮಥುರಾದಲ್ಲಿರುವ (Mathura Shahi Idgah mosque) ಮಸೀದಿಗಳನ್ನು ವಶಪಡಿಸಿಕೊಳ್ಳಲಾಗುವುದು, ಈ ಮೂಲಕ ಬಿಜೆಪಿ ಸರ್ಕಾರದ ಮುಂದಿನ ಟಾರ್ಗೆಟ್ ಕಾಶಿ ಹಾಗೂ ಮಥುರಾ ಅನ್ನೋದನ್ನು ಸೂಚ್ಯವಾಗಿ ಹೇಳಿದ್ದಾರೆ. ವಿಧಾನಸಭೆ ಅಧಿವೇಶದಲ್ಲೇ ಈ ಮಾತು ಹೇಳಿರುವ ಕಾರಣ ಭಾರಿ ಸಂಚಲನ ಸೃಷ್ಟಿಸಿದೆ.

https://x.com/myogiadityanath/status/1755174024358060288?t=wfnp-v_XalZVO9zaxTFPrw&s=08

ಬಳಿಕ ಮಾತನಾಡಿದ ಅವರು ದೇವಸ್ಥಾನದಲ್ಲಿ ಶ್ರೀರಾಮನನ್ನು ಪ್ರತಿಷ್ಠಾಪಿಸಿರುವುದಕ್ಕೆ ದೇಶದ ಪ್ರತಿಯೊಬ್ಬರೂ ಸಂತೋಷಪಡುತ್ತಿದ್ದಾರೆ. ಭಗವಾನ್ ರಾಮ ಲಲ್ಲಾನೇ ತನ್ನ ಅಸ್ತಿತ್ವದ ಪುರಾವೆಗಳನ್ನು ಪ್ರಸ್ತುತ ಪಡಿಸಿದ ಜಗತ್ತಿನ ಮೊದಲ ನಿರ್ದೇಶನವಿದು. ಮಂದಿರ ಉಳಿಸಿಕೊಳ್ಳಲು ನಮಗೆ ಜವಾಬ್ದಾರಿಯನ್ನೂ ನೀಡಿದೆ. ಶ್ರೀರಾಮ ತಾನು ಹುಟ್ಟಿದ ಸ್ಥಳದಲ್ಲಿ ವಿರಾಜಮಾನನಾಗಿದ್ದಾನೆ. ಒಬ್ಬ ಭಕ್ತನಾಗಿ ಇದಕ್ಕಿಂತ ಖುಷಿಯ ವಿಚಾರವೇನಿದೆ? ಎಂದು ಹೆಮ್ಮೆ ಪಟ್ಟಿದ್ದಾರೆ.

Leave A Reply

Your email address will not be published.