Madhu Bangarappa: ಚಕ್ರವರ್ತಿ ಸೂಲಿಬೆಲೆ ತಲೆಹರಟೆ, ಮಾನ, ಮರ್ಯಾದೆ, ಕಾಮನ್‌ಸೆಲ್ಸ್‌ ಇಲ್ಲ ಅವನಿಗೆ-ಸಚಿವ ಮಧು ಬಂಗಾರಪ್ಪ

Madhu Bangarappa: ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಮಂಗಳವಾರ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ,” ಚಕ್ರವರ್ತಿ ಸೂಲಿಬೆಲೆ ತಲೆಹರಟೆ; ಅವನಿಗೆ ಮಾನ,ಮರ್ಯಾದೆ, ಕಾಮನ್‌ಸೆನ್ಸ್‌ ಇಲ್ಲ. ನಮಾಜ್‌ಗೆ ಅವಕಾಶ ನೀಡಲು ಪರೀಕ್ಷಾ ವೇಳಾಪಟ್ಟಿ ಬದಲಾವಣೆ ಮಾಡಿದ್ದಾರೆ ಎಂದು ಟ್ವೀಟ್‌ ಮಾಡಿದ್ದು, ತಪ್ಪು ಸಂದೇಶವನ್ನು ಹರಡುತ್ತಿದ್ದಾರೆ. ಮಾರ್ಚ್‌ 1 ರಿಂದ ದ್ವಿತೀಯ ಪಿಯು ಪರೀಕ್ಷೆ ಪ್ರಾರಂಭವಾಗುತ್ತಿರುವ ಕಾರಣ ಅಂದು ಮಾತ್ರ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಮಧ್ಯಾಹ್ನಕ್ಕೆ ಮರು ನಿಗದಿಪಡಿಸಲಾಗಿದೆ ಎಂದು ಈ ಸಂದರ್ಭದಲ್ಲಿ ಹೇಳಿದರು.

ಇದನ್ನೂ ಓದಿ: Parliment election : ಜಯದೇವ ಮಾಜಿ ನಿರ್ದೇಶಕ ಡಾ. ಮಂಜುನಾಥ್ ಲೋಕಸಭಾ ಅಭ್ಯರ್ಥಿ ?! ಈ ಕ್ಷೇತ್ರದಿಂದಲೇ ಕಣಕ್ಕೆ, ಪಕ್ಷ ಯಾವುದು ?

ಚಕ್ರವರ್ತಿ ಸೂಲಿಬೆಲೆ ಟ್ವೀಟ್‌ಗೆ ಕೆಲವು ಬಿಜೆಪಿ ನಾಯಕರು ಸಾಥ್‌ ನೀಡಿದ್ದು, ಇದೊಂದು ವಿಷ ಬೀಜ ಬಿತ್ತುವ ಸಮಯವಲ್ಲ. ಸೂಲಿಬೆಲೆ ವಿರುದ್ಧ ಸಾಕಷ್ಟು ದೂರುಗಳು ಬರುತ್ತಿದ್ದು, ಇಂತವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸಚಿವರು ಎಚ್ಚರಿಕೆಯನ್ನು ನೀಡಿದ್ದಾರೆ.

1 Comment
  1. […] ಇದನ್ನೂ ಓದಿ: Madhu Bangarappa: ಚಕ್ರವರ್ತಿ ಸೂಲಿಬೆಲೆ ತಲೆಹರಟೆ, ಮಾ… […]

Leave A Reply

Your email address will not be published.