SSLC Marks Card: ಎಸ್‌ಎಸ್‌ಎಲ್‌ಸಿ. PUC ವಿದ್ಯಾರ್ಥಿಗಳ ʼMarks Card’ ನಲ್ಲಿ ಮಹತ್ವದ ಬದಲಾವಣೆ
SSLC Marks Card: ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಶಿಕ್ಷಣ ಸಚಿವರು ಸಿಹಿ ಸುದ್ದಿಯೊಂದನ್ನು ನೀಡಿದ್ದು, ಮಾರ್ಕ್ಸ್ ಕಾರ್ಡ್ ನಲ್ಲಿ ಮಹತ್ವದ ಬದಲಾವಣೆ ಮಾಡುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ: Congress Protest: ರಾಜ್ಯ ಕಾಂಗ್ರೆಸ್ ಆರೋಪಗಳಿಗೆ ದಾಖಲೆ ಮೂಲಕ ಉತ್ತರ ನೀಡಿದ ಬಿಜೆಪಿ; ಇಲ್ಲಿದೆ ಎಲ್ಲಾ ವಿವರ
ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಪರೀಕ್ಷೆಯನ್ನು ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸಪ್ಲಿಮೆಂಟರ್ ಪರೀಕ್ಷೆ ಇರಲಿದೆ. ಆದರೆ ಮಾರ್ಕ್ಸ್ ನೀಡುವಾಗ ಸಪ್ಲಿಮೆಂಟರ್ ಎಂದು ನಮೂದಿಸುವುದಿಲ್ಲ ಎಂದು ಹೇಳಿದ್ದಾರೆ.
ಶಾಲಾ ಮಕ್ಕಳಿಗೆ ವಾರದಲ್ಲಿ ಎರಡು ದಿನ ಮೊಟ್ಟೆ, ಚಿಕ್ಕಿ ನೀಡಲಾಗುವುದು. ವಾರದಲ್ಲಿ ಆರು ದಿನ ಕ್ಷೀರ ಭಾಗ್ಯದ ಹಾಲು ನೀಡುವ ಕ್ರಮ ಕೈಗೊಂಡಿರುವುದಾಗಿಯೂ, ಮೂರು ದಿನ ಹಾಲಿಗೆ ರಾಗಿ ಮಾಲ್ಟ್ ಮಿಕ್ಸ್ ಮಾಡಿ ಕೊಡಲಾಗುತ್ತದೆ. ಜೊತೆಗೆ ಶಾಲಾ ಬ್ಯಾಗ್ ಹೊರೆ ಕೂಡಾ ಕಡಿಮೆ ಮಾಡಲಾಗುತ್ತದೆ. ಸರಕಾರಿ ಶಾಲೆಗಳನ್ನು ಉನ್ನತೀರಕರಣ ಮಾಡುವುದಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗಿದ ಎಂದು ಅವರು ಮಾಧ್ಯಮದವರಿಗೆ ಹೇಳಿದ್ದಾರೆ.