PM Modi: ಪ್ರತ್ಯೇಕ ರಾಷ್ಟ್ರದ ಧ್ವನಿ ಎತ್ತಿದ ಸಂಸದ ಡಿ ಕೆ ಸುರೇಶ್- ಮುಟ್ಟಿನೋಡಿಕೊಳ್ಳುವಂತೆ ಕೌಂಟ್ರು ಕೊಟ್ಟ ಪ್ರಧಾನಿ ಮೋದಿ!!

Share the Article

PM Modi: ಪ್ರತ್ಯೇಕ ರಾಷ್ಟ್ರದ ಬಗ್ಗೆ ಹೇಳಿಕೆ ನೀಡಿದ್ದ ಸಂಸದ ಡಿಕೆ ಸುರೇಶ್‌ ಅವರ ವಿರುದ್ಧ ಪ್ರಧಾನಿ ಮೋದಿ(PM Modi) ವಾಗ್ದಾಳಿ ನಡೆಸಿದ್ದು ಮುಟ್ಟಿನೋಡಿಕೊಳ್ಳುವಂತೆ ಕೌಂಟರ್ ನೀಡಿದ್ದಾರೆ.

ಇದನ್ನೂ ಓದಿ: Parliament Election: ರಾಜ್ಯದ 28 ಲೋಕಸಭೆ ಕ್ಷೇತ್ರಗಳಿಗೆ ಚುನಾವಣೆ ಉಸ್ತುವಾರಿ ನೇಮಿಸಿದ ಜೆಡಿಎಸ್‌; ಕುತೂಹಲ ಅಭ್ಯರ್ಥಿ ಸೆಲೆಕ್ಟ್‌

ಹೌದು, ಲೋಕಸಭೆಯಲ್ಲಿ(Lokasabha) ಸೋಮವಾರ ಮಾತನಾಡಿದ ಪ್ರಧಾನಿ ಮೋದಿ ಒಬ್ಬ ಕಾಂಗ್ರೆಸ್(Congress)ಸಂಸದ ಪ್ರತ್ಯೇಕ ರಾಷ್ಟ್ರದ ಹೇಳಿಕೆ ನೀಡುತ್ತಿದ್ದಾರೆ. ದೇಶವನ್ನು ಈಗಾಗಲೇ ವಿಭಜನೆ ಮಾಡಿದ್ದೀರಾ. ದೇಶವನ್ನು ಒಡೆದ ಮೇಲೂ ನಿಮಗೆ ತೃಪ್ತಿ ಇಲ್ಲವೇ? ಇನ್ನೆಷ್ಟು ವಿಭಜಿಸುತ್ತೀರಾ? ಎಂದು ಸಂಸದ ಡಿಕೆ ಸುರೇಶ್‌(DK Suresh) ವಿರುದ್ಧ ಪ್ರಧಾನಿ ಮೋದಿ ಕಿಡಿಕಾರಿದ್ದಾರೆ.

ಅಂದಹಾಗೆ ಲೋಕಸಭೆಯಲ್ಲಿ ಬಜೆಟ್ ಅಧಿವೇಶನದಲ್ಲಿ ರಾಷ್ಟ್ರಪತಿ ಭಾಷಣದ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಮೋದಿ, ಕಾಂಗ್ರೆಸ್ ಹಾಗೂ ವಿಪಕ್ಷಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಭಯೋತ್ಪಾದನೆ, ನಕ್ಸಲ್ ಆತಂಕ ಸೇರಿದಂತೆ ಯಾವುದೇ ದಾಳಿಯನ್ನು ಸಹಿಸುವುದಿಲ್ಲ. ಭಾರತೀಯ ಸೇನೆ ಗಡಿಯಲ್ಲಿ ಸಶಕ್ತವಾಗಿ ಹೋರಾಡುತ್ತಿದೆ. ನಮ್ಮ ಸೇನೆಯ ಬಗ್ಗೆ ನಮಗೆ ಹೆಮ್ಮೆಯಾಗಬೇಕು ಎಂದು ಹೇಳಿದ್ದಾರೆ.

Leave A Reply

Your email address will not be published.