EPFO: ಮಹಿಳಾ ಉದ್ಯೋಗಿಗಳಿಗೆ ಇಪಿಎಫ್‌ಒದಿಂದ ಸಂದೇಶ, ಸರಕಾರ ಏನು ತಿಳಿದುಕೊಳ್ಳಲು ಪ್ರಯತ್ನ ಪಡುತ್ತಿದೆ?

Employer Rating Survey: ವಿವಿಧ ಕಂಪನಿಗಳಲ್ಲಿ ಕೆಲಸ ಮಾಡುವ ಮಹಿಳಾ ಉದ್ಯೋಗಿಗಳಿಗೆ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಮೂಲಕ ಮೆಸೇಜ್‌ ಕಳುಹಿಸಲಾಗುತ್ತಿದ್ದು, ಇದರಲ್ಲಿ ಕಂಪನಿಯು ಸಮಾನ ಕೆಲಸಕ್ಕೆ ಸಮಾನ ವೇತನ ನೀಡುತ್ತಿದೆಯೇ ಎಂಬುದನ್ನು ಅವರಿಂದ ತಿಳಿದುಕೊಳ್ಳುವ ಪ್ರಯತ್ನ ಮಾಡಲಾಗುತ್ತಿದೆ. EPFO ಜೊತೆಗೆ, ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಈ ಸಮೀಕ್ಷೆಯಲ್ಲಿ ತೊಡಗಿದೆ.

ಇದನ್ನೂ ಓದಿ: JDS: ಲೋಕಸಭಾ ಚುನಾವಣೆ- ಈ ನಾಲ್ಕು ಕ್ಷೇತ್ರಗಳಿಂದ ಜೆಡಿಎಸ್ ಕಣಕ್ಕೆ?

ಈ ಸಮೀಕ್ಷೆಯ ಮೂಲಕ ವಿವಿಧ ಕಂಪನಿಗಳ ಉದ್ಯೋಗಿಗಳಲ್ಲಿ ಮಹಿಳಾ ಉದ್ಯೋಗಿಗಳ ಪಾಲು ಕೂಡ ತಿಳಿಯಲಿದೆ. ಇದರ ಆಧಾರದ ಮೇಲೆ ಕಂಪನಿಗಳನ್ನು ಮೌಲ್ಯಮಾಪನ ಮಾಡಲಾಗುತ್ತದೆ. ಈ ರೇಟಿಂಗ್‌ ಸಮೀಕ್ಷೆಯಲ್ಲಿ ಹಲವು ಪ್ರಶ್ನೆಗಳನ್ನು ಕೇಳಲಾಗಿದ್ದು, ಇದಕ್ಕೆ ಮಹಿಳಾ ಉದ್ಯೋಗಿಗಳು ಹೌದು, ಇಲ್ಲ ಮತ್ತು ಅನ್ವಯಿಸುವುದಿಲ್ಲ ಎಂದು ಆಯ್ಕೆ ಮಾಡಿಕೊಳ್ಳಬೇಕು. EPFO ನಿವೃತ್ತಿ ನಿಧಿಯಾಗಿದ್ದು, ಅದರ ಡೇಟಾವು ದೇಶದಲ್ಲಿ ನಿಯಮಿತ ಉದ್ಯೋಗದ ಸ್ಥಿತಿಯನ್ನು ತೋರಿಸುತ್ತದೆ. ಕಳೆದ ವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಈ ಉದ್ಯೋಗದಾತರ ರೇಟಿಂಗ್ ಸಮೀಕ್ಷೆ ಕುರಿತು ಮಾಹಿತಿ ನೀಡಿದ್ದರು. ಇದು ‘ಸಕ್ಷಮ್ ನಾರಿ ಸಶಕ್ತ್ ಭಾರತ್ – ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ಉದ್ಯೋಗಿಗಳಲ್ಲಿ ಮಹಿಳೆಯರು’ ಅಭಿಯಾನದ ಭಾಗವಾಗಿದೆ ಎಂದು ಅವರು ಹೇಳಿದರು.

 

ಉದ್ಯೋಗದಲ್ಲಿ ಮಹಿಳೆಯರ ಸ್ಥಾನಮಾನದ ವಿಷಯದಲ್ಲಿ ಭಾರತವು ಅತ್ಯಂತ ಕೆಳಮಟ್ಟದ ರಾಷ್ಟ್ರಗಳಲ್ಲಿ ಒಂದಾಗಿದೆ. 2022-23ರಲ್ಲಿ ಉದ್ಯೋಗದಲ್ಲಿರುವ ಮಹಿಳೆಯರ ಸಂಖ್ಯೆ ಶೇಕಡಾ 27.8 ಕ್ಕೆ ತಲುಪಿದೆ ಎಂದು ಸರ್ಕಾರದ ಕಾರ್ಮಿಕ ಬಲ ಸಮೀಕ್ಷೆ ತೋರಿಸುತ್ತದೆ. 2017-18ರಲ್ಲಿ ಈ ಅಂಕಿ ಅಂಶವು ಶೇ 17.5 ರಷ್ಟಿತ್ತು.

Leave A Reply

Your email address will not be published.