Home Karnataka State Politics Updates Dharmasthala: ಧರ್ಮಸ್ಥಳದ ಭಕ್ತಾದಿಗಳಿಗೆ ಭರ್ಜರಿ ಗುಡ್ ನ್ಯೂಸ್ !! ರಾಜ್ಯ ಸರ್ಕಾರದಿಂದ ಹೊಸ ಘೋಷಣೆ

Dharmasthala: ಧರ್ಮಸ್ಥಳದ ಭಕ್ತಾದಿಗಳಿಗೆ ಭರ್ಜರಿ ಗುಡ್ ನ್ಯೂಸ್ !! ರಾಜ್ಯ ಸರ್ಕಾರದಿಂದ ಹೊಸ ಘೋಷಣೆ

Dharmastala

Hindu neighbor gifts plot of land

Hindu neighbour gifts land to Muslim journalist

Dharmasthala: ನಾಡಿನ ಪ್ರಸಿದ್ಧ ಪ್ರಮುಖ ಧಾರ್ಮಿಕ ಕ್ಷೇತ್ರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳವೂ(Dharmasthala) ಕೂಡ ಒಂದು. ಇಲ್ಲಿಗೆ ಪ್ರತಿದಿನವೂ ಲಕ್ಷಾಂತರ ಭಕ್ತಾದಿಗಳ ಆಗಮನವಾಗುತ್ತದೆ. ಇದೀಗ ಧರ್ಮಸ್ಥಳಕ್ಕೆ ದೊಡ್ಡ ಹಿರಿಮೆಯೊಂದು ಧಕ್ಕಿದ್ದು ಭಕ್ತಾದಿಗಳಲೆಲ್ಲರೂ ಖುಷಿಪಡುವಂತೆ ಮಾಡಿದೆ.

ಇದನ್ನೂ ಓದಿ: Arecanut Cultivation: ಅಡಿಕೆಯ ರೋಗಗಳು ಮತ್ತು ಹತೋಟಿ ಕ್ರಮಗಳು!!

Dharmashala

ಹೌದು, ಲಕ್ಷಾಂತರ ಭಕ್ತರು ಆಗಮಿಸಿದರು ಕೂಡ ಧರ್ಮಸ್ಥಳ ಸ್ವಚ್ಛತೆಗೆ ಹೆಸರುವಾಸಿಯಾದುದು. ಇಲ್ಲಿ ಸ್ವಚ್ಛತೆಗೆ ಅಷ್ಟು ಮಹತ್ವ ನೀಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಧರ್ಮಸ್ಥಳವನ್ನು ‘ಪ್ಲಾಸ್ಟಿಕ್ ಮುಕ್ತ ಗ್ರಾಮ’ ಎಂದು ಘೋಷಣೆ ಮಾಡಲಾಗಿದೆ. ರಾಜ್ಯದ ಅರಣ್ಯ ಮತ್ತು ಪರಿಸರ ಇಲಾಖೆ ಸಚಿವರಾದ ಈಶ್ವರ ಖಂಡ್ರೆ(Eshwar khandre) ಇವರು ಸೋಮವಾರ ಈ ಘೋಷಣೆ ಹೊರಡಿಸಿದ್ದಾರೆ.

ಅಂದಹಾಗೆ ಧರ್ಮಸ್ಥಳ ಪ್ರವಚನ ಮಂಟಪದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಚಿವರು ಪ್ಲಾಸ್ಟಿಕ್ ಮಾರಾಟ, ಖರೀದಿ ಮತ್ತು ಬಳಕೆ ಸಂಪೂರ್ಣ ನಿಲ್ಲಬೇಕು. ಇದಕ್ಕೆ ಧರ್ಮಸ್ಥಳ ರಾಜ್ಯದ ಎಲ್ಲಾ ಗ್ರಾಮಗಳಿಗೆ ಮಾದರಿಯಾಗಬೇಕು. ಸ್ವಚ್ಛತೆಗೆ ಇಲ್ಲಿ ಮೊದಲ ಆದ್ಯತೆ. ಹೀಗಾಗಿ ಯಾತ್ರಿಕರು ನೇತ್ರಾವತಿ ನದಿಯಲ್ಲಿ ತ್ಯಾಜ್ಯ ಎಸೆಯಬಾರದು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ(Dr veerendra heggade) ಅವರು ಪ್ಲಾಸ್ಟಿಕ್‌ ತ್ಯಾಜ್ಯ ನಿರ್ಮೂಲನೆಗಾಗಿ ಒಂದು ವಾರದೊಳಗೆ 2 ಯಂತ್ರಗಳನ್ನು ಖರೀದಿಸಲಾಗುವುದು. ಪ್ಲಾಸ್ಟಿಕ್ ತ್ಯಾಜ್ಯವನ್ನು ರಸ್ತೆ ದುರಸ್ತಿಗೆ ಬಳಸಲಾಗುವುದು ಎಂದರು. ರಾಜ್ಯಕ್ಕೆ ಕ್ಷೇತ್ರವನ್ನು ಮಾದರಿ ಗ್ರಾಮವಾಗಿ ಮಾಡಲಾಗುವುದು ಎಂದರು.