Malali Mosque: ಮಂಗಳೂರು ಮಳಲಿ ಮಸೀದಿ ವಿವಾದ, ಮಹತ್ವದ ಮಾಹಿತಿ

Mangaluru Malali Mosque: ಮಂಗಳೂರಿನ ಮಳಲಿ ಮಸೀದಿ ವಿಷಯಕ್ಕೆ ಇದೀಗ ವಕ್ಫ್‌ ಬೋರ್ಡ್‌ (Waqf Board) ಅಧಿಕೃತ ಎಂಟ್ರಿ ಕೊಟ್ಟಿದೆ. ಇಂದು ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್‌ ಕೋರ್ಟ್‌ನಲ್ಲಿ ಅಧಿಕೃತವಾಗಿ ವಕಾಲತ್ತು ದಾಖಲಿಸುವ ಎಲ್ಲಾ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಇದನ್ನೂ ಓದಿ: Heart Attack: ಖ್ಯಾತ ಸೈಕ್ಲಿಸ್ಟ್‌ ಹಾಗೂ ಫಿಟ್ನೆಸ್‌ ತರಬೇತುದಾರ ಅನಿಲ್‌ ಕಡ್ಸೂರ್‌ ಹೃದಯಾಘಾತಕ್ಕೆ ಬಲಿ!

ಮಳಲಿ ಮಸೀದಿ ವಕ್ಫ್‌ ಬೋರ್ಡ್‌ ಆಸ್ತಿ ಎಂಬುವುದಾಗಿ ಪ್ರತ್ಯೇಕವಾಗಿ ವಾದ ಮಂಡಿಸಲು ಮುಂದಾಗಿದೆ. ವಕ್ಫ್‌ ಬೋರ್ಡ್‌ ಇದೀಗ ಈ ಪ್ರಕರಣದಲ್ಲಿ ವಕೀಲರ ಮೂಲಕ ವಕಾಲತ್ತು ದಾಖಲು ಮಾಡಿ ಹೋರಾಟಕ್ಕೆ ಇಳಿದಿದೆ. ಈ ಕುರಿತು ಹೈಕೋರ್ಟ್‌ನಿಂದ ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್‌ ಕೋರ್ಟ್‌ಗೆ ನಿರ್ದೇಶನ ದೊರಕಿರುವುದಾಗಿ ವರದಿಯಾಗಿದೆ.

ಮಳಲಿ ಮಸೀದಿ ಜಾಗ ವಕ್ಫ್‌ ಆಸ್ತಿ ಹೌದಾ? ಇಲ್ಲವೇ? ಎಂಬುವುದನ್ನು ನಿರ್ಧಾರ ಮಾಡಲು ಹೈಕೋರ್ಟ್‌ ನಿರ್ದೇಶನ ನೀಡಿದ್ದು, ಹೈಕೋರ್ಟ್‌ ಈಗಾಗಲೇ ತೀರ್ಪು ಪ್ರಕಟ ಮಾಡಿ ಆದೇಶ ಹೊರಡಿಸಿದೆ. ಇದೀಗ ಈ ತೀರ್ಪು ಆಧಾರದ ಮೇಲೆ ಮಂಗಳುರು ಕೋರ್ಟ್‌ನಲ್ಲಿ ಮತ್ತೆ ವಿಚಾರಣೆ ಆರಂಭವಾಗಲಿದೆ. ವಿಎಚ್‌ಪಿ ಪರ ವಕೀಲರಿಂದಲೂ ಅರ್ಜಿ ಸಲ್ಲಿಕೆಯಾಗಿದೆ. ಇನ್ನು ಈ ಹೋರಾಟಕ್ಕೆ ವಕ್ಫ್‌ ಬೋರ್ಡ್‌ ಕೂಡಾ ಎಂಟ್ರಿ ನೀಡಿದೆ. ಮಳಲಿ ಮಸೀದಿ, ವಿಎಚ್‌ಪಿಯಿಂದಲೂ ಈ ಕುರಿತು ದಾಖಲು ಸಲ್ಲಿಕೆಯಾಗುವ ಸಾಧ್ಯತೆ ಇದೆ.

ಮಂಗಳೂರು ಸಿವಿಲ್‌ ಕೋರ್ಟ್‌ ವಿಚಾರಣೆಯಲ್ಲಿ ಮಳಲಿ ಮಸೀದಿ ಭವಿಷ್ಯ ನಿಂತಿದೆ. ಒಂದು ವೇಳೆ ವಕ್ಫ್‌ ಆಸ್ತಿ ಎಂದಾದರೆ ಇಡೀ ಪ್ರಕರಣ ವಕ್ಫ್‌ ಟ್ರಿಬ್ಯೂನಲ್‌ ಗೆ ಹೈಕೋರ್ಟ್‌ ವರ್ಗಾವಣೆ ಮಾಡುತ್ತದೆ. ವಕ್ಫ್‌ ಆಸ್ತಿ ಅಲ್ಲ ಎಂದಾದರೆ ವಿಚಾರಣೆ ಹೈಕೋರ್ಟ್‌ನಲ್ಲಿ ನಡೆಯೋ ಸಾಧ್ಯತೆ ಇದೆ. ತಾಂಬೂಲ ಪ್ರಶ್ನೆಯಲ್ಲಿ ಇದು ದೈವ ಸಾನಿಧ್ಯ ಎಂಬುವುದಾಗಿ ಪತ್ತೆಯಾಗಿತ್ತು. ಇದೀಗ ಕಾನೂನು ಹೋರಾಟದ ಫಲಿತಾಂಶಕ್ಕಾಗಿ ವಿಎಚ್‌ಪಿ ಎದುರು ನೋಡುತ್ತಿದೆ.

Leave A Reply

Your email address will not be published.