Mangaluru Ullala: ಜೇನುಗೂಡಿಗೆ ಹಿಟ್‌ ಆದ ಚೆಂಡು; ಕ್ರಿಕೆಟ್‌ ಆಟಗಾರರನ್ನು ಅಟ್ಟಾಡಿಸಿದ ಜೇನುನೊಣಗಳ ಹಿಂಡು!!!

Mangaluru Ullala: ಜೇನುನೊಣಗಳ ಹಿಂಡೊಂದು ಕ್ರಿಕೆಟ್‌ ಆಟಗಾರರ ಮೇಲೆ ದಾಳಿ ಮಾಡಿರುವ ಘಟನೆಯೊಂದು ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಒಂಬತ್ತುಕೆರೆ ಮೈದಾನದಲ್ಲಿ ನಡೆದಿದೆ.

ಇದನ್ನೂ ಓದಿ: Puttur: ಪುತ್ತೂರು ಬಿಜೆಪಿ ಮಂಡಲ ಅಧ್ಯಕ್ಷರಾಗಿ ಮಠಂದೂರು; ಜಿಲ್ಲಾಧ್ಯಕ್ಷರು ಹೇಳಿದ್ದೇನು?

ದಾಳಿಗೆ ಓಟಕ್ಕಿತ್ತ ಆಟಗಾರರು 

ಪಂದ್ಯದ ಸಮಯದಲ್ಲಿ ಒಬ್ಬ ಆಟಗಾರ ಸಿಕ್ಸರ್‌ ಹೊಡೆದಿದು, ಬಾಲು ಸೀದಾ ಹೋಗಿ ಮೈದಾನದಿಂದ ಹೊರಗೆ ತೆಂಗಿನ ಮರಕ್ಕೆ ಬಿದ್ದಿದೆ. ಆದರೆ ಆ ತೆಂಗಿನ ಮರದಲ್ಲಿ ಜೇನುಗೂಡು ಇದ್ದಿದ್ದು, ಆಟಗಾರರಿಗೆ ತಿಳಿದಿರಲಿಲ್ಲ. ಬಾಲ್‌ ಬಿದ್ದದ್ದೇ ತಡ ಅದು ಹೇಗೆ ಮೈದಾನಕ್ಕೆ ದಾಳಿ ಮಾಡಿದೆ ಎಂದರೆ……ಜೇನುನೊಣಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಆಟಗಾರರು ದಿಕ್ಕಾಪಾಲಾಗಿ ಓಡಿದ್ದಾರೆ.

ಕೊನೆಗೆ ಜೇನುನೊಣಗಳ ದಾಳಿಗೆ ಆಟಗಾರರು ಸೋತೋಗಿ, ಪಂದ್ಯವೇ ರದ್ದು ಮಾಡಿದ್ದಾರೆ. ಸದ್ಯ ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

Leave A Reply

Your email address will not be published.