Taxi Rate: ರಾಜ್ಯಾದ್ಯಂತ ಟ್ಯಾಕ್ಸಿಗಳಿಗೆ ಏಕರೂಪದ ದರ ನಿಗದಿ!!!

Taxi Rate: ರಾಜ್ಯಾದ್ಯಂತ ಟ್ಯಾಕ್ಸಿಗಳಿಗೆ ʼಏಕರೂಪದ ದರʼ ನಿಗದಿ ಪಡಿಸಿ ಸಾರಿಗೆ ಇಲಾಖೆ ಅಧಿಸೂಚನೆ ಹೊರಡಿಸಿದೆ. ಟ್ಯಾಕ್ಸಿ, ಸಿಟಿ ಟ್ಯಾಕ್ಸಿ ಹಾಗೂ ಅಗ್ರಿಗೇಟರ್ಸ್‌ಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಮಾದರಿಯ ಟ್ಯಾಕ್ಸಿಗಳ ಪ್ರಯಾಣ ದರ ಮತ್ತು ಸಾಗಾಣಿಕ ದರಗಳನ್ನು ಗಮನದಲ್ಲಿಟ್ಟು ಸಾರಿಗೆ ಇಲಾಖೆ ಈ ನಿರ್ಧಾರ ಕೈಗೊಂಡಿದೆ.

ಇದನ್ನೂ ಓದಿ: Sonu Gowda: ಸೋನು ಗೌಡ ಕಾರು ಅಪಘಾತ; ಬಿಗ್‌ಬಾಸ್‌ ಮಾಜಿ ಸ್ಪರ್ಧಿ ಆಸ್ಪತ್ರೆಗೆ ದಾಖಲು!

ಏಕರೂಪ ಪ್ರಯಾಣ ದರ ನಿಗದಿ ಪಡಿಸಿ ಸರಕಾರದ ಆದೇಶ;

10 ಲಕ್ಷ ರೂ.ಗಿಂತ ಕಡಿಮೆ ಮೌಲ್ಯದ ವಾಹನಗಳಿಗೆ 4 ಕಿಮೀ ವರೆಗೆ ಕನಿಷ್ಠ 100 ರೂ. ನಿಗದಿ

4 ಕಿಮೀ ನಂತರ ಪ್ರತಿ ಕಿಮೀಗೆ ಹೆಚ್ಚುವರಿ 24 ರೂ.ನಿಗದಿ

10 ಲಕ್ಷದಿಂದ 15 ಲಕ್ಷ ರೂ.ವರೆಗಿನ ವಾಹನಗಳಿಗೆ 4 ಕಿಮೀ ವರೆಗೆ ಕನಿಷ್ಠ 115 ರೂ. ನಿಗದಿ

4 ಕಿಮೀ ನಂತರ ಪ್ರತಿ ಕಿಲೋ ಮೀಟರ್ಗೆ ಹೆಚ್ಚುವರಿ 32 ರೂ. ನಿಗದಿ

4 ಕಿಮೀ ನಂತರ ಪ್ರತಿ 1 ಕಿಮೀಗೆ ಹೆಚ್ಚುವರಿ 28 ರೂ. ನಿಗದಿ

15 ಲಕ್ಷ ರೂ.ಗಿಂತ ಹೆಚ್ಚಿನ ಮೌಲ್ಯದ ವಾಹನಗಳಿಗೆ 4 ಕಿಮೀ ವರೆಗೆ ಕನಿಷ್ಠ 130 ರೂ. ನಿಗದಿ

ಹೊಸ ನಿಯಮಗಳೇನು?

ವೈಯಕ್ತಿಕ ಲಗೇಜುಗಳಿಗೆ 120 ಕೆಜಿ ವರೆಗೆ ವಿನಾಯಿತಿ

ಮೊದಲ 5 ನಿಮಿಷ ಕಾಯುವಿಕೆಗೆ ಶುಲ್ಕ ಇಲ್ಲ

ಪ್ರಯಾಣಿಕರಿಂದ ಜಿಎಸ್ಟಿ, ಟೋಲ್ ವಸೂಲಿಗೆ ಅವಕಾಶ

ಬೆಳಗ್ಗಿನ ಜಾವ 6 ಗಂಟೆ ವರೆಗೆ ಸಂಚರಿಸುವ ಟ್ಯಾಕ್ಸಿಗಳಿಗೆ 10% ಹೆಚ್ಚುವರಿ ದರ ವಿಧಿಸಲು ಅವಕಾಶ.

Leave A Reply

Your email address will not be published.