Poonam Pandey: ಫೇಕ್ ಸಾವಿನ ಸುದ್ದಿ ಹಬ್ಬಿಸಿ ಪ್ರಚಾರ ಗಿಟ್ಟಿಸಿದ ನಟಿ; ಪೂನಂ ಪಾಂಡೆ ವಿರುದ್ಧ ದೂರು ದಾಖಲು
Poonam Pandey Contraversy: ಪೂನಂ ಪಾಂಡೆ ತನ್ನ ಸುಳ್ಳು ಸಾವಿನ ಸುದ್ದಿಯನ್ನು ಹರಡಿದ್ದು, ಚಿತ್ರರಂಗದಿಂದ ಕಿರುತೆರೆ ಕ್ಷೇತ್ರದ ತಾರೆಯರು ನಟಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಆಲ್ ಇಂಡಿಯನ್ ಸಿನಿ ವರ್ಕರ್ಸ್ ಅಸೋಸಿಯೇಷನ್ ಕೂಡ ಪೂನಂ ಪಾಂಡೆಯ ನಕಲಿ ಡೆತ್ ಸ್ಟಂಟ್ ಬಗ್ಗೆ ಪ್ರತಿಕ್ರಿಯಿಸಿದೆ.
ಇದನ್ನೂ ಓದಿ: Mangaluru: ಮಂಗಳೂರಿನ ಲಾಡ್ಜ್‌ನಲ್ಲಿ ಸಮಾಜಸೇವಕನ ಹನಿಟ್ರ್ಯಾಪ್;
ವಾಸ್ತವವಾಗಿ, ಆಲ್ ಇಂಡಿಯನ್ ಸಿನಿ ವರ್ಕರ್ಸ್ ಅಸೋಸಿಯೇಷನ್ ಮುಂಬೈ ಪೊಲೀಸರಿಗೆ ಪತ್ರ ಬರೆದಿದೆ. ಸುದ್ದಿ ಸಂಸ್ಥೆ ಎಎನ್‌ಐ ಹಂಚಿಕೊಂಡ ಪತ್ರದ ಪ್ರಕಾರ, ಪೂನಂ ಪಾಂಡೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಂಘವು ಪೊಲೀಸರನ್ನು ಒತ್ತಾಯಿಸಿದೆ.
ಇನ್ನೊಂದಡೆ ಇಎಐಸಿಡಬ್ಲ್ಯೂಎ ಅಧ್ಯಕ್ಷ ಸುರೇಶ್ ಗುಪ್ತಾ ಅವರು ನಟಿಯ ವಿರುದ್ಧ ದೂರು ದಾಖಲು ಮಾಡಿದ್ದು, ವಕೀಲ ಆಲಿ ಕಾಶಿಫ್ ಖಾನ್ ದೇಶ್ಮುಖ್ ಅವರು ಕೂಡಾ ನಟಿ ಮತ್ತು ಅವರ ಪಿಆರ್ ತಂಡದ ವಿರುದ್ಧ ಹೌಟರ್ಫೈ ಏಜೆನ್ಸಿಯೊಂದಿಗೆ ದೂರು ದಾಖಲು ಮಾಡಿದ್ದಾರೆ.
ಅಸೋಸಿಯೇಷನ್ ಬರೆದಿರುವ ಪತ್ರದಲ್ಲಿ, ‘ಈ ಸುಳ್ಳು ಸುದ್ದಿಯನ್ನು ಮಾಡೆಲ್ ಮತ್ತು ನಟಿ ಪೂನಂ ಪಾಂಡೆ ಅವರು ಪ್ರಚಾರಕ್ಕಾಗಿ ಸೃಷ್ಟಿಸಿದ್ದಾರೆ, ಅದರ ದೃಢೀಕರಣವನ್ನು ಅವರ ಮ್ಯಾನೇಜರ್ ನೀಡಿದ್ದಾರೆ. ಈ ಸುಳ್ಳು ಸುದ್ದಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಎಲ್ಲ ಭಾರತೀಯರ ಭಾವನೆಗಳಿಗೆ ಧಕ್ಕೆ ತಂದಿದೆ. ಪೂನಂ ಪಾಂಡೆ ಮತ್ತು ಅವರ ಮ್ಯಾನೇಜರ್ ಇಬ್ಬರ ವಿರುದ್ಧ ತಮ್ಮ PR ಪ್ರಚಾರಕ್ಕಾಗಿ ನಕಲಿ ಸುದ್ದಿಗಳನ್ನು ಹರಡಿದ್ದಕ್ಕಾಗಿ ದಯವಿಟ್ಟು ಎಫ್‌ಐಆರ್ ದಾಖಲಿಸಲು ನಾವು ನಿಮ್ಮನ್ನು ವಿನಂತಿಸುತ್ತೇವೆ.