Malali Masjid Case: ಮಂಗಳೂರು ಮಳಲಿ ಮಸೀದಿ ಕೇಸ್‌ಗೆ ವಕ್ಫ್‌ ಬೋರ್ಡ್‌ ಕಡೆಯಿಂದ ಕಾನೂನು ಹೋರಾಟ!

Share the Article

Malali Masjid Case: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಗಂಜಿಮಠ ಬಳಿ ಇರುವ ಮಳಲಿ ಗ್ರಾಮದಲ್ಲಿ ಅಸ್ಸಾಯ್ಯಿದ್‌ ಅಬ್ದುಲ್ಲಾಹಿಲ್‌ ಮದನಿ ಜುಮಾ ಮಸೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯವಾದ ಮಾಹಿತಿಯೊಂದು ಹೊರಬಿದ್ದಿದೆ.

ಮಳಲಿ ಮಸೀದಿ (Malali Masjid Case) ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಈ ಪ್ರಕರಣ ವಕ್ಫ್‌ ಬೋರ್ಡ್‌ ಹಾಗೂ ಮಸೀದಿ ಕಮಿಟಿ ಮೂಲಕ ನಡೆಯಲಿದೆ ಎಂದು ವಕ್ಫ್‌ ಜಿಲ್ಲಾ ಸಮಿತಿ ಅಧ್ಯಕ್ಷ ಬಿಎ ನಾಸೀರ್‌ ಅವರು ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದ್ದಾರೆ.

ಹೈಕೋರ್ಟ್‌ನಲ್ಲಿ ಜ.31ರಂದು ಕೆಳ ನ್ಯಾಯಾಲಯದಲ್ಲಿ ಇದು ವಕ್ಫ್‌ ಆಸ್ತಿ ಹೌದಾ ಅಲ್ವಾ ಎಂದು ತನಿಖೆ ಮಾಡಿ ಎಂದು ಆದೇಶ ನಡೆಯಲಿದೆ ಎಂದು ತಿಳಿಸಿರುವುದಾಗಿ ಹೇಳಿದರು.

ಹೈಕೋರ್ಟ್‌ನಲ್ಲಿ ವಿಜಯದ ತೀರ್ಪು ಬಂದಿಲ್ಲ. ಜಿಲ್ಲಾ ನ್ಯಾಯಾಲಯದಲ್ಲಿ ಈ ತೀರ್ಪು ವಿಚಾರಣೆಗೆ ನೀಡಲಾಗಿದೆ ಎಂದು ಹೇಳಿದರು. ಮಳಲಿ ಮಸೀದಿಗೆ ಸಂಬಂಧಪಟ್ಟ ದಾಖಲೆಗಳು ನಮ್ಮ ಬಳಿ ಇದೆ. ಸರ್ವೇ ಈಗಾಗಲೇ ಆಗಿದೆ. ಆರ್ಟಿಸಿಯೂ ಇದೆ. ಆರ್ಟಿಸಿಗೂ ಮುನ್ನ ಅಡಂಗಲ್‌ನಲ್ಲೂ ಮಸೀದಿಯಿತ್ತು ಎನ್ನುವುದಕ್ಕೆ ಸಾಕ್ಷಿ ಇದೆ. ನಮ್ಮ ದಾಖಲೆ ಪ್ರಸ್ತುತ ಪಡಿಸಿ ನಾವು ಹೋರಾಟ ಮಾಡುತ್ತೇವೆ. ಮಳಲಿ ಮಸೀದಿಗೆ ಸಂಬಂಧಿಸಿ ಹೈಕೋರ್ಟ್‌ ಆದೇಶದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತಪ್ಪು ಮಾಹಿತಿ ನೀಡಲಾಗುತ್ತಿದೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.

 

 

 

Leave A Reply

Your email address will not be published.