CM Siddaramaiah: ದೇವಾಲಯ ಡ್ರೆಸ್ ಕೋಡ್ ಬಗ್ಗೆ ಸಿದ್ದರಾಮಯ್ಯ ವಿವಾದಾತ್ಮಕ ಹೇಳಿಕೆ!!

CM Siddaramaiah: ಕೆಲವು ಸಮಯದ ಹಿಂದಷ್ಟೇ ಕರ್ನಾಟಕ ಸರ್ಕಾರದ ಮುಜರಾಯಿ ಇಲಾಖೆಯು ರಾಜ್ಯದಾದ್ಯಂತ ಇರುವ ದೇವಸ್ಥಾನಗಳಲ್ಲಿ ಭಾರತೀಯ ಸಂಸ್ಕೃತಿಗೆ ಅನುಗುಣವಾಗಿ ಡ್ರೆಸ್ ಕೋಡ್ ಜಾರಿಗೆ ತರಲು ಚಿಂತನೆ ನಡೆಸಿತ್ತು. ಈ ಬಗ್ಗೆ ಕೆಲ ಎಡ ಚಿಂತಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಬೆನ್ನಲ್ಲೇ ದೇವಾಲಯ ಡ್ರೆಸ್ ಕೋಡ್(Temple dress code)ಅನ್ನು ವಿರೋಧಿಸಿರುವ ಸಿಎಂ ಸಿದ್ದರಾಮಯ್ಯನವರು(CM Siddaramaiah)ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ.

ಹೌದು, ಇಲಾಖೆಯು ಈ ಹಿನ್ನೆಲೆಯಲ್ಲಿ ಚಿಂತನೆ ನಡೆಸಿದೆ ಎಂದು ತಿಳಿದ ತಕ್ಷಣ ಮುಜರಾಯಿ ಇಲಾಖೆ ವ್ಯಾಪ್ತಿಗೆ ಬರುವ ಹಂಪಿ ವಿರೂಪಾಕ್ಷ ದೇವಸ್ಥಾನಕ್ಕೆ ವಿಜಯನಗರ ಜಿಲ್ಲಾಡಳಿತ ಕಳೆದ ಶುಕ್ರವಾರದಿಂದ ವಸ್ತ್ರ ಸಂಹಿತ ಜಾರಿಗೊಳಿಸಿದೆ. ದೇವಾಲಯಕ್ಕೆ ಭೇಟಿ ನೀಡುವ ಭಕ್ತರು ಜೀನ್ಸ್, ಬರ್ಮುಡಾ ಶಾರ್ಟ್ಸ್/ನಿಕ್ಕರ್‌ಗಳನ್ನು ಧರಿಸುವುದನ್ನು ನಿಷೇದಿಸಿತ್ತು. ಈ ಅಭಿಯಾನ ರಾಜ್ಯಾದ್ಯಂತ ವ್ಯಾಪಿಸುವ ಮುನ್ನವೇ ದೇಗುಲಗಳಲ್ಲಿ ವಸ್ತ್ರಸಂಹಿತೆ ನಿರ್ಧಾರಕ್ಕೆ ಸಿಎಂ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸುವುದರ ಜೊತೆಗೆ ವಿವಾದಾತ್ಮಕ ಹೇಳಿಕೆಯೊಂದನ್ನು ಕೂಡ ನೀಡಿದ್ದಾರೆ.

ಅಂದಹಾಗೆ ಬುಧವಾರ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ದೇವಸ್ಥಾನದಲ್ಲಿ ವಸ್ತ್ರಸಂಹಿತೆ ಬಗ್ಗೆ ಹಿರಿಯ ಸಾಹಿತಿ ಮರುಳಸಿದ್ಧಪ್ಪ ಅವರು ಸಿಎಂ ಮುಂದೆಯೇ ಅಕ್ಷೇಪ ವ್ಯಕ್ತಪಡಿಸಿದ್ದರು. ಸ್ಪಷ್ಟೀಕರಣ ನೀಡಿದ ಸಿಎಂ, ನಮ್ಮ ಮುಜರಾಯಿ ಇಲಾಖೆ ಈ ತೀರ್ಮಾನ ಎಲ್ಲಾ ಮಾಡಿಲ್ಲ. ಇಂಥದ್ದೇ ಡ್ರೆಸ್ ಹಾಕಬೇಡಿ ಅಥವಾ ಹಾಕಿ ಅನ್ನೋದು ತಪ್ಪು. ಶರ್ಟ್, ಪ್ಯಾಂಟ್ ಧರಿಸಿಕೊಂಡು ಹೋಗಬೇಡಿ, ಸೀರೆ ಹಾಕ್ಕೊಂಡು ಹೋಗಿ ಅಂತಾ ಹೇಳೋದು ಸರಿಯಲ್ಲ. ನಾವು ಇಂಥದ್ದೇ ಡ್ರೆಸ್ ಹಾಕಿಕೊಳ್ಳಿ ಅಥವಾ ಬಟ್ಟೆ ಬಿಚ್ಚಾಕ್ಕೊಂಡು ಬನ್ನಿ ಅಂತಾ ಹೇಳಲ್ಲ. ಶುದ್ಧ ಮನಸ್ಸಿನಿಂದ ಹೋಗಿ ಎಂದು ನುಡಿದರು.

Leave A Reply

Your email address will not be published.