School Holidays: ಶಾಲಾ ಮಕ್ಕಳಿಗೆ ಫೆಬ್ರವರಿ ತಿಂಗಳಲ್ಲಿ ಭರ್ಜರಿ ಹಾಲಿಡೇ! ಇಲ್ಲಿದೆ ರಜಾ ಲಿಸ್ಟ್!!!
School Holidays: ಈ ವರ್ಷದ ಫೆಬ್ರವರಿ ತಿಂಗಳಲ್ಲಿ ಶಾಲಾ ಕಾಲೇಜುಗಳಿಗೆ ಕೆಲವು ಸಾರ್ವಜನಿಕ ರಜೆಗಳಿವೆ. ಅವುಗಳು ಎಷ್ಟಿವೆ ಎಂದು ನೋಡೋಣ.
ಬಿಡುವಿಲ್ಲದ ಕೆಲಸದ ನಡುವೆ ರಜೆ ದಿನಗಳಲ್ಲಿ ವಿಶ್ರಾಂತಿ ಪಡೆಯುವುದು ಸಾಮಾನ್ಯವಾಗಿದ್ದು. ಈ ಕಾರಣಕ್ಕಾಗಿಯೇ ಶಾಲೆ ಕಾಲೇಜುಗಳಿಗೆ ಹೋಗುವವರು ಹಾಗೂ ಕಂಪನಿಗಳಿಗೆ ಹೋಗುವವರು ರಜೆ ದಿನಗಳಿಗಾಗಿ ಕಾಯುತ್ತ ಕೂರುವುದುಂಟು. ಜನವರಿ ತಿಂಗಳ ಅಂತ್ಯದೊಂದಿಗೆ ರಜೆಗಳ ಸೀಸನ್ ಕೂಡ ಮುಗಿದು ಹೋಗುತ್ತದೆ.
ವರ್ಷದ ಮೊದಲ ತಿಂಗಳಾದ ಜನವರಿಯಲ್ಲಿ ಸಂಕ್ರಾತಿ, ರಿಪಬ್ಲಿಕ್ ಡೇ ಇತರೆ ಹಬ್ಬಗಳಿಗೆ ರಜೆಯು ಸಿಕ್ಕಿತ್ತು. ಜನವರಿಯಂತೆ ಫೆಬ್ರವರಿ ತಿಂಗಳಲ್ಲಿಯೂ ರಜೆ ದಿನಗಳಿವೆ. ಒಟ್ಟು ಎಷ್ಟು ರಜೆ ದಿನಗಳಿವೆ ಎಂದು ನೋಡೋಣ.
ಫೆಬ್ರವರಿ ತಿಂಗಳಲ್ಲಿ ಭಾನುವಾರಗಳ ಜೊತೆಗೆ ಇನ್ನು ಹಲವು ರಜೆ ದಿನಗಳಿವೆ. ಫೆ.14 ರಂದು ಸರಸ್ಪತಿ ಪೂಜೆ, ವಸಂತ ಪಂಚಮಿ, ನಂತರ ಫೆ.19 ರಂದು ಶಿವಾಜಿ ಜಯಂತಿ ಇದೆ. ಗುರು ರವಿದಾಸ್ ನಿಮಿತ್ತ ಫೆ.24 ರಂದು ಶಾಲಾ ಕಾಲೇಜುಗಳಿಗೆ ರಜೆ ಇರುತ್ತದೆ. ಗಮನಿಸಬೇಕಾದ ಅಂಶವೆಂದರೆ ಈ ರಜೆ ದಿನಗಳು ದೇಶಾದ್ಯಂತ ಎಲ್ಲ ಶಾಲಾ ಕಾಲೇಜುಗಳಿಗೂ ಅನ್ವಯವಾಗುವುದಿಲ್ಲ. ಈ ಹಬ್ಬಗಳ ಆಚರಣೆಯನ್ನು ಮಾಡುವ ಪ್ರದೇಶಗಳಲ್ಲಿ ಮಾತ್ರ ಅನ್ವಯವಾಗುತ್ತವೆ.
ವಸಂತ ಪಂಚಮಿ: ಈ ಹಬ್ಬವು ಸಾಮಾನ್ಯವಾಗಿ ಫೆಬ್ರವರಿಯಲ್ಲಿ ಬರುವ ಹಬ್ಬವಾಗಿದೆ. ಈ ಹಬ್ಬವನ್ನು ಸರಸ್ಪತಿ ಹಬ್ಬ ಎಂತಲೂ ಕರೆಯುತ್ತಾರೆ. ಹಿಂದೂಗಳ ಮಹೋನ್ನತ ಹಬ್ಬಗಳಲ್ಲಿ ಇದು ಒಂದಾಗಿದೆ. ಶಿಕ್ಷಣ, ಜ್ಞಾನ, ಸಂಗೀತದ ಪ್ರತಿ ರುಪವಾಗಿರುವ ಶಾರದೆಯ ಆಶೀರ್ವಾದವನ್ನು ಪಡೆಯಲು ಈ ಹಬ್ಬವನ್ನು ಆಚರಿಸುತ್ತೇವೆ .
ಶಿವಾಜಿ ಜಯಂತಿ:
ಮರಾಠರು ಎಂದಾಗ ತಕ್ಷಣ ನೆನಪಾಗುವುದು ಶಿವಾಜಿ. ಮರಾಠರಿಗೆ ಶಿವಾಜಿಯ ದೈವ. ಶಿವಾಜಿಯು 17 ವರ್ಷದವನಾಗಿದ್ದಾಗಲೆ ಕತ್ತಿ ಹಿಡಿದು ಹೊರಡಿದವನು ಶಿವಾಜಿ. ಬಿಜಾಪುರ ಸಾಮ್ರಾಜ್ಯದ ಟೋರ್ನಾ ಕೋಟೆಯನ್ನು ವಶಪಡಿಸಿಕೊಂಡಿದ್ದರು. ಬಳಿಕ ಕೊಂಡಾಣ ಮತ್ತು ರಾಯಘಡ ಕೋಟೆಗಳನ್ನು ಸ್ವಾಧೀನಪಡಿಸಿಕೊಂಡರು. ನಂತರ ಪುಣೆಯ ಸಂಪೂರ್ಣ ಪ್ರದೇಶವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದರು.
ತಮ್ಮದೇ ವಿಶೇಷವಾದ ಯುದ್ಧ ತಂತ್ರಗಳನ್ನು ಅಳವಡಿಸಿಕೊಂಡು ಶತ್ರುಗಳಿಗೆ ಸಿಂಹ ಸ್ವಪ್ನವಾಗಿತ್ತಿದ್ದರು. ಗೆರಿಲ್ಲಾ ಯುದ್ಧವನ್ನು ಜಗತ್ತಿಗೆ ಮೊದಲು ಪರಿಚಯಿಸಿದ್ದು ಶಿವಾಜಿ. ಈ ಕಾರಣಕ್ಕೆ ಫೆಬ್ರವರಿ 19 ರಂದು ಮಹಾರಾಷ್ಟ್ರ ಮತ್ತು ಇತರ ಹಲವು ಸ್ಥಳಗಳಲ್ಲಿ ಶಿವಾಜಿ ಮಹಾರಾಜರ ಜಯಂತಿ ಆಚರಣೆಗಳು ನಡೆಯುತ್ತವೆ. ಈ ಕಾರಣಕ್ಕಾಗಿ ರಜೆಯನ್ನು ಘೋಷಿಸಲಾಗುತ್ತದೆ.
ಗುರು ಗೋವಿಂದ ಜಯಂತಿ;:
ಫೆ.24 ರ ಮಾಘ ಪೂರ್ಣಿಮ ದಂದು ಗುರು ಗೋವಿಂದ ಜಯಂತಿಯನ್ನು ಆಚರಿಸಲಾಗುತ್ತದೆ. ಪಂಜಾಬ್, ಹಿಮಾಚಲ ಪ್ರದೇಶ, ಹರಿಯಾಣ, ಉತ್ತರ ಪ್ರದೇಶ ಗಳಲ್ಲಿ ಬಹು ಅದ್ಧೂರಿಯಿಂದ ಆಚರಿಸಲಾಗುತ್ತದೆ. ಗುರು ಗೋವಿಂದರು ಜಾತಿ ವ್ಯವಸ್ಥೆಯ ವಿರುದ್ದ ಹೋರಾಡಿದವರು. ಇವರು ಮಾನವ ಕುಲಕ್ಕೆ ನೀಡಿದ ಬೋಧನೆ ಹಾಗೂ ತತ್ವಗಳನ್ನು ಜನ್ಮದಿದಂದು ನೆನಪಿಸಿ ಕೊಳ್ಳಲಾಗುತ್ತದೆ .
ಇವುಗಳು ಪ್ರಮುಖವಾದ ರಜೆ ದಿನಗಳು ಇವುಗಳನ್ನು ಬಿಟ್ಟು ಫೆಬ್ರವರಿಯಲ್ಲಿ ಸಿಬಿಎಸ್ಸಿಯ 10 ಮತ್ತು 12 ನೇ ತರಗತಿಗಳಿಗೆ ಪರೀಕ್ಷೆಗಳು ಇರುವುದರಿಂದ ವಿದ್ಯಾರ್ಥಿಗಳು ತಮ್ಮ ಅಧ್ಯಯನವನ್ನು ಉತ್ತಮ ಪಡಿಸಿಕೊಳ್ಳಬೇಕು. ಈ ರಜೆ ದಿನಗಳು ರೆಸ್ಟ್ ಮಾಡಲು ಅನುಕೂಲವಾಗುತ್ತವೆ. ಇವುಗಳನ್ನು ಬಿಟ್ಟು ಎರಡನೇ ಮತ್ತು ನಾಲ್ಕನೇ ಶನಿವಾರದ ಜೊತೆಗೆ ಭಾನುವಾರ ರಜೆಗಳಿವೆ.