Jayadeva hospital director: ಜಯದೇವ ಆಸ್ಪತ್ರೆಯ ನಿರ್ದೇಶಕರಾಗಿ ಡಾ.ರವೀಂದ್ರನಾಥ್ ನೇಮಕ !!

Share the Article

Jayadev hospital director: ರಾಜ್ಯ ಸರ್ಕಾರ, ರಾಜ್ಯದ ಪ್ರತಿಷ್ಠಿತ ಹೃದ್ರೋಗ ಆಸ್ಪತ್ರೆ ಜಯದೇವ ಆಸ್ಪತ್ರೆಯ ಪ್ರಭಾರ ನಿರ್ದೇಶಕರಾಗಿ ಡಾ. ಕೆಎಸ್ ರವೀಂದ್ರನಾಥ್ ಅವರನ್ನು ನೇಮಕ ಮಾಡಲಾಗಿದೆ.

ಹೌದು, ಜಯದೇವ ಆಸ್ಪತ್ರೆ (Jayadeva Hospital) ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ (Dr C.N Manjunath) ಅವಧಿ ಮುಕ್ತಾಯ ಹಿನ್ನೆಲೆ ಅವರ ಸ್ಥಾನಕ್ಕೆ ಡಾ.ರವೀಂದ್ರನಾಥ್ (Dr Ravindranath) ಅವರನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ. ರವೀಂದ್ರನಾಥ್ ಅವರು ಜಯದೇವ ಆಸ್ಪತ್ರೆ ಪ್ರಭಾರಿ ಆಗಿ ಮುಂದುವರೆಯಲಿದ್ದು, ಶಾಶ್ವತ ನಿರ್ದೇಶಕರ ಆಯ್ಕೆಗೆ ಸರ್ಕಾರ ಹಿಂದೇಟು ಹಾಕಿದೆ.

ಯಾರು ಈ ರವೀಂದ್ರನಾಥ್?

69 ವಯಸ್ಸಿನ ರವೀಂದ್ರನಾಥ್ ಅವರು ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಇದರ ಹಿಂದೆ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಕುಲಪತಿಯಾಗಿ ಕಾರ್ಯನಿರ್ವಹಿಸಿದ್ದಾರೆ.

Leave A Reply

Your email address will not be published.