Ayodhya: 6 ದಿನ ಪಾದಯಾತ್ರೆ ಮಾಡಿ ಅಯೋಧ್ಯೆಯ ರಾಮನ ದರ್ಶನ ಪಡೆದ ‘350 ಮುಸ್ಲಿಮರು’ !!
Ayodhya: ರಾಮ ಮಂದಿರದಲ್ಲಿ ಶ್ರೀರಾಮನ(Ayodhya rama) ಪ್ರಾಣ ಪ್ರತಿಷ್ಠೆ ನೆರವೇರಿದ ಹಿನ್ನೆಲೆಯಲ್ಲಿ ದೇಶಾದ್ಯಂತ ಕೋಟ್ಯಾಂತರ ಜನರು ಜಾತಿ, ಮತ, ಧರ್ಮ, ಭೇದಗಳನ್ನು ಮರೆತು ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. ಅದರಲ್ಲೂ ಹಿಂದೂ-ಮುಸ್ಲಿಂಮರು ಸಹೋದರರಂತೆ ಸಂಭ್ರಮಿಸಿದ್ದಾರೆ. ಈಗಂತೂ ಪ್ರತಿಯೊಂದು ಧರ್ಮದವರೂ ರಾಮನ ದರ್ಶನ ಪಡೆಯಲು ಹಾತೊರೆಯುತ್ತಿದ್ದಾರೆ. ಅಂತೆಯೇ ಇದೀಗ ಭಾವೈಕ್ಯತೆಯ ಪ್ರತೀಕವಾಗಿ 350ಮಂದಿ ಮುಸ್ಲಿಮರು 6 ದಿನ ಪಾದಯಾತ್ರೆ ಮಾಡಿ ಅಯೋಧ್ಯೆಯ ರಾಮನ ದರ್ಶನ ಪಡೆದಿದ್ದಾರೆ.
https://twitter.com/TimesAlgebraIND/status/1752559578318045482?t=H2h-CpBRuVC3FCo1SXavyg&s=19
ಇದನ್ನೂ ಓದಿ: Weight Loss Tips: ತೂಕ ಇಳಿಸಿಕೊಳ್ಳಲು ಏನೇನೋ ಪ್ರಯತ್ನ ಪಡ್ತಾ ಇದ್ದೀರಾ? ಈ ಟಿಪ್ಸ್ ಫಾಲೋ ಮಾಡಿ ಸಾಕು ಎನ್ನುವ
ಹೌದು, ಲಕ್ನೋದಿಂದ 6 ದಿನ ಪಾದಯಾತ್ರೆಮೂಲಕ ಅಯೋಧ್ಯೆ(Ayodhya) ಬಂದ 350 ಮುಸ್ಲಿಮರು ರಾಮಮಂದಿರದಲ್ಲಿ(Rama mandir) ಪ್ರಾರ್ಥನೆ ಸಲ್ಲಿಸಿದರು. ಮುಸ್ಲಿಂ ರಾಷ್ಟ್ರೀಯ ಮಂಚ್‍ನ ಸಂಚಾಲಕ ರಾಜಾ ರಯೀಸ್ ಮತ್ತು ಪ್ರಾಂತೀಯ ಸಂಚಾಲಕ ಶೇರ್ ಅಲಿ ಖಾನ್ ನೇತೃತ್ವದಲ್ಲಿ 350 ಭಕ್ತರು ಪಾದಯಾತ್ರ ಮೂಲಕ ಬಂದು ಶ್ರೀರಾಮ ಮಂದಿರದಲ್ಲಿ ರಾಮ್ ಲಾಲ್ಲಾನನ್ನು ನೋಡಿದ ಎಲ್ಲರೂ ಬಾವಪರವಶರಾಗಿದ್ದು. ಇದೊಂದು ಅವಿಸ್ಮರಣೀಯ ದಿನ ಎಂದಿದ್ದಾರೆ.
ಅಂದಹಾಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS) ಬೆಂಬಲಿತ ಮುಸ್ಲಿಂ ಸಂಘಟನೆಯಾದ ಮುಸ್ಲಿಂ ರಾಷ್ಟ್ರೀಯ ಮಂಚ್ (MRM) ನೇತೃತ್ವದ ಗುಂಪು ಜನವರಿ 25 ರಂದು ಲಕ್ನೋದಿಂದ ತಮ್ಮ ಪ್ರಯಾಣವನ್ನು ಪ್ರಾರಂಭಿಸಿತು. ಬಳಿಕ ‘ಜೈ ಶ್ರೀ ರಾಮ್’ ಎಂದು ಘೋಷಣೆ ಕೂಗಿದ 350 ಮುಸ್ಲಿಂ ಭಕ್ತರ ಗುಂಪು ಕೊರೆಯುವ ಚಳಿಯ ನಡುವೆ ಸುಮಾರು 150 ಕಿ.ಮೀ ಕಾಲ್ನಡಿಗೆಯಲ್ಲಿ ಕ್ರಮಿಸಿದ ನಂತರ ಮಂಗಳವಾರ ಅಯೋಧ್ಯೆಯನ್ನ ತಲುಪಿದೆ ಎಂದು MRM ನ ಮಾಧ್ಯಮ ಉಸ್ತುವಾರಿ ಶಾಹಿದ್ ಸಯೀದ್ ಅವರ ಹೇಳಿದ್ದಾರೆ.
ಪ್ರಯಾಣದ ಅನುಭವ ಹೇಳಿದ ಅವರು ಈ 6 ದಿನಗಳಲ್ಲಿ ಪ್ರತಿ 25 ಕಿ.ಮೀ ಬಳಿಕ ರಾತ್ರಿ ವೇಳೆ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರು. ಮರುದಿನ ಬೆಳಗ್ಗೆ ತಮ್ಮ ಪ್ರಯಾಣವನ್ನು ಮುಂದುವರಿಸುತ್ತಿದ್ದರು ಎಂದು ಅವರು ವಿವರಿಸಿದ್ದಾರೆ.
ಒಟ್ಟಿನಲ್ಲಿ ಸವೆದ ಬೂಟುಗಳು ಮತ್ತು ದಣಿದ ಪಾದಗಳೊಂದಿಗೆ 6 ದಿನಗಳ ಬಳಿಕ ಭಕ್ತರು ಅಯೋಧ್ಯೆಯನ್ನು ತಲುಪಿ ರಾಮನನ್ನು ಕಂಡು ಧನ್ಯರಾದ ಭಕ್ತರು ಶ್ರೀರಾಮ ಮಂದಿರದ ಸಂಕೀರ್ಣದಿಂದ ಮುಸ್ಲಿಂ ಭಕ್ತರು ಏಕತೆ, ಸಮಗ್ರತೆ, ಸಾರ್ವಭೌಮತೆ ಮತ್ತು ಸಾಮರಸ್ಯದ ಸಂದೇಶವನ್ನು ಸಾರಿದರು.