Physical Abuse: ಬೆಟ್ಟಿಂಗ್‌ ಕಟ್ಟಿ ಯುವತಿಯ ಹಿಂಭಾಗ ಟಚ್‌ ಮಾಡಿದವನ ಬಂಧನ ಮಾಡಿದ ಪೊಲೀಸರು!

Share the Article

Physical Abuse: ಇತ್ತೀಚೆಗೆ ನಮ್ಮೂರ ಹೋಟೆಲ್‌ನಲ್ಲಿ ನಿಂತಿದ್ದ ಯುವತಿಗೆ ಅಲ್ಲೇ ಇದ್ದ ಯುವಕನೋರ್ವ ಯುವತಿಯ ಹಿಂದಿನ ಭಾಗಕ್ಕೆ ಬೇಕಂತಲೇ ಟಚ್‌ ಮಾಡಿ ಕೀಟಲೆ ಮಾಡಿ ಅಲ್ಲಿಂದ ಎಸ್ಕೇಪ್‌ ಆಗಿದ್ದ. ಈ ಕುರಿತು ಯುವತಿಯ ಪೋಷಕರು ನೀಡಿದ ದೂರಿಯನನ್ವಯ ವಿಜಯನಗರ ಪೊಲೀಸರು ಕೇಸು ದಾಖಲಿಸಿದ್ದು, ಇದೀಗ ಆರೋಪಿ ಚಂದನ್‌ ಎಂಬಾತನನ್ನು ಬಂಧಿಸಿದ್ದಾರೆ.

ಡಿ.30 ರಂದು ಸಂಜೆ 7.30ರ ಸುಮಾರಿಗೆ ಸ್ನೇಹಿತೆಯೊಂದಿಗೆ ನಮ್ಮೂರ ಹೋಟೆಲ್‌ಗೆ ತಿಂಡಿ ತಿನ್ನಲೆಂದು ಯುವತಿ ಬಂದಿದ್ದು, ಆಕೆಯನ್ನು ಕಂಡ ಯುವಕ ಬೇಕೆಂತಲೇ ಆಕೆಯ ಸೊಂಟದ ಹಿಂಭಾಗ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದ. ಕೂಡಲೇ ಯುವತಿ ತರಾಟೆ ತೆಗೆದುಕೊಂಡಾಗ ಅಲ್ಲಿಂದ ಓಡಿ ಹೋಗಿದ್ದ. ಈ ಘಟನೆ ಸಂಬಂಧ ವೀಡಿಯೋ ಜ.18 ರಂದು ವೈರಲ್‌ ಆಗಿತ್ತು. ಯುವತಿ ಪೋಷಕರು ಪೊಲೀಸರಿಗೆ ಈ ಕುರಿತು ದೂರು ನೀಡಿದ್ದು, ತನಿಖೆ ಕೈಗೊಂಡ ಪೊಲೀಸರು ಸಿಸಿಟಿವಿ ದೃಶ್ಯಾವಳಿ ಆಧಾರದ ಮೇಲೆ ಕಾಮುಕ ಚಂದನ್‌ನನ್ನು ಬಂಧಿಸಿದ್ದಾರೆ.

ಗ್ಯಾಸ್‌ ಸಿಲಿಂಡರ್‌ ಡೆಲಿವರಿ ಕೆಲಸ ಮಾಡುವ ವೃತ್ತಿ ಮಾಡಿಕೊಂಡಿದ್ದ ಆರೋಪಿ ಚಂದನ್‌, ಹಂಪಿನಗರ ನಿವಾಸಿ. ಘಟನೆ ನಡೆದ ದಿನ ಸ್ನೇಹಿತರೊಂದಿಗೆ ಸಿನಿಮಾ ನೋಡಿಕೊಂಡು ಬಂದ ಚಂದನ್‌ ಭರ್ಜರಿ ಪಾರ್ಟಿ, ಕಂಠ ಪೂರ್ತಿ ಕುಡಿದು ಊಟಕ್ಕೆ ಎಂದು ವಿಜಯನಗರ ಹೋಟೆಲ್‌ಗೆ ಬಂದಿದ್ದ. ಊಟ ಮುಗಿಸಿ ಹೋಟೆಲ್‌ ಹೊರಗೆ ಚಂದನ್‌ ಗ್ಯಾಂಗ್‌ ಮಾತಾಡಿಕೊಂಡು ನಿಂತಿದ್ದರು.

ಈ ಸಂದರ್ಭದಲ್ಲಿ ಯುವತಿ ಅಲ್ಲಿಗೆ ಬಂದಿದ್ದಾಳೆ. ಇದನ್ನು ಕಂಡ ಸ್ನೇಹಿತನೋರ್ವ ಆಕೆಯನ್ನು ಮುಟ್ಟಿದರೆ ಐದು ಸಾವಿರ ಕೊಡುತ್ತೀನಿ ಎಂದು ಚಂದನ್‌ಗೆ ಹೇಳಿದ್ದಾನೆ. ಅಷ್ಟಕ್ಕೇ ಚಂದನ್‌ ಕುಡಿದ ಅಮಲಿನಲ್ಲಿ ಹಿಂಬದಿಯಿಂದ ಹೋಗಿ ಯುವತಿಗೆ ಮುಟ್ಟಿ ಅನುಚಿತವಾಗಿ ವರ್ತನೆ ಮಾಡಿ ಕಾಲ್ಕಿತ್ತಿದ್ದ. ನಂತರ ಯುವತಿ ತನ್ನ ಪೋಷಕರಿಗೆ ವಿಷಯ ತಿಳಿಸಿದ್ದು, ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಳು. ಇದೀಗ ಪೊಲೀಸರು ಆರೋಪಿ ಚಂದನ್‌ನನ್ನು ಬಂಧಿಸಿ ಜೈಲಿಗೆ ಕಳಿಸಿದ್ದಾರೆ.

Leave A Reply