Abuse Case: ಯುವತಿ ಮುಂದೆ ಅಸಭ್ಯವಾಗಿ ವರ್ತನೆ ಮಾಡಿದ ವ್ಯಕ್ತಿ ಅರೆಸ್ಟ್‌!!!

Share the Article

Abuse Case: ಕಾರನ್ನು ಪಾರ್ಕ್‌ ಮಾಡಿ ಒಳಗೆ ಕುಳಿತುಕೊಂಡಿದ್ದ ಯುವತಿಯ ಎದುರಿಗೆ ಕಾಮುಕನೋರ್ವ ಅಸಭ್ಯವಾಗಿ ವರ್ತಿಸಿದ್ದ ಘಟನೆಯೊಂದು ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದಿತ್ತು. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಯುವತಿ ಬರೆದುಕೊಂಡಿದ್ದು, ಯುವತಿಯರಿಗೆ ರಕ್ಷಣೆಯೇ ಇಲ್ವ ಎಂದು ಬರೆದಿದ್ದಳು. ಈ ಸುದ್ದಿ ಅನಂತರ ವೈರಲ್‌ ಆಗಿತ್ತು.

ಇದೀಗ ಈ ಪ್ರಕರಣದ ಆರೋಪಿ ಸುನೀಲ್‌ ಕುಮಾರ್‌ ಶರ್ಮಾ ಎಂಬಾತನನ್ನು ಇದೀಗ ಪೊಲೀಸರು ಬಂಧನ ಮಾಡಿದ್ದಾರೆ.

ಈ ವಿಕೃತ ಕಾಮಿ ನಡು ರಸ್ತೆಯಲ್ಲೇ ಯುವತಿಯೋರ್ವಳ ಮುಂದೆ ಹಸ್ತಮೈಥುನ ಮಾಡಿಕೊಂಡಿದ್ದು, ಈ ಅಸಭ್ಯ ವರ್ತನೆ ಮಾಡುವ ಸಂದರ್ಭ ಬೆದರಿಕೆ ಹಾಕಿದ ರೀತಿಯಲ್ಲಿ ಸನ್ನೆ ಕೂಡಾ ಮಾಡಿದ್ದ. ಈ ಘಟನೆ ಮಹಾದೇವಪುರದ ಪಾರ್ಕ್‌ ಎದುರಿನ ಸರ್ವಿಸ್‌ ರಸ್ತೆಯಲ್ಲಿ ನಡೆದಿತ್ತು.

ಜನವರಿ 5 ರಂದು ತನ್ನ  ಸ್ನೇಹಿತರ ಜೊತೆ ಊಟಕ್ಕೆಂದು ಬಂದಿದ್ದ ಯುವತಿಯು ಮಹದೇವಪುರದ ಬಾಗ್ಮನೆ ಕಾನ್‌ಸ್ಟೆಲೇಷನ್‌ ಬ್ಯುಸಿನೆಸ್‌ ಪಾರ್ಕ್‌ ಎದುರು ಪಾರ್ಕಿಂಗ್‌ ಸ್ಥಳದಲ್ಲಿ ನಿಂತುಕೊಂಡಿದ್ದರು. ಈ ಸಂದರ್ಭದಲ್ಲಿ ಅಲ್ಲಿಗೆ ಬಂದ ಆರೋಪಿ ಸುನೀಲ್‌ ಕುಮಾರ್‌ ಶರ್ಮಾ ಅನುಚಿತವಾಗಿ ವರ್ತಿಸಿದ್ದಾನೆ.

ಈತ ಯುವತಿ ಎದುರೇ ಹಸ್ತಮೈಥುನ ಮಾಡಿಕೊಂಡಿದ್ದ. ಈತನ ಈ ದುರ್ವತನೆಗೆ ಬೆದರಿ ಈಕೆ ಕಾರಿನ ಡೋರ್‌ ಲಾಕ್‌ ಮಾಡಿ ಅಲ್ಲಿಂದ ಹೊರಡಲು ಮುಂದಾಗಿದ್ದಳು. ಆದರೆ ಹಿಂದೆ ಇನ್ನೊಂದು ಕಾರು ಇದ್ದ ಕಾರಣ ಅಲ್ಲಿಂದ ಹೋಗಲು ಆಗಲಿಲ್ಲ. ಕಾರಿನ ಸುತ್ತಮುತ್ತ ಓಡಾಡಿಕೊಂಡೇ ಈತ ಅಸಭ್ಯ ರೀತಿಯಲ್ಲಿ ವರ್ತನೆ ಮಾಡಿದ್ದು, ಬೆದರಿಕೆ ಹಾಕುವ ದೃಷ್ಟಿಯಲ್ಲೇ ನೋಡಿ ಸನ್ನೆ ಮಾಡಿದ್ದ. ಯುವತಿ ಸ್ಟೇರಿಂಗ್‌ ಕೆಳಗೆ ಅವಿತುಕೊಂಡಿದ್ದು, ನಂತರ ತನ್ನ ಫೋನ್‌ ಮೂಲಕ ಸ್ನೇಹಿತರಿಗೆ ಕಾಲ್‌ ಮಾಡಿ ಕರೆಸಿಕೊಂಡಿದ್ದಳು. ಅವರು ಬರುತ್ತಿದ್ದಂತೆ ಕಾಮುಕ ಪರಾರಿಯಾಗಿದ್ದ. ನಂತರ ಅವರೆಲ್ಲ ಆತನಿಗಾಗಿ ಹುಡುಕಾಟ ಮಾಡಿದ್ದರು. ಆದರೆ ಆತ ನಾಪತ್ತೆಯಾಗಿದ್ದ.

ಸಂತ್ರಸ್ತ ಯುವತಿ ನಂತರ ಪೋಷಕರಿಗೆ ಟ್ವೀಟ್‌ ಮಾಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಮಹಾದೇವಪುರ ಪೊಲೀಸರು ಪ್ರಕರಣ ದಾಖಲಿಸಿ ಇದೀಗ ಆರೋಪಿ ಸುನೀಲ್‌ ಕುಮಾರ್‌ ಶರ್ಮಾರನ್ನು ಬಂಧನ ಮಾಡಿದ್ದಾರೆ.

Leave A Reply