Actress Ashwarya: ಯುವ ಸಚಿವರನ್ನು ನೋಡುತ್ತಿದ್ದಂತೆ ‘ಮಕ್ಕಳು ಮಾಡಿಕೊಳ್ಳಬೇಕು ಎಂದು ಆಸೆ ಆಗ್ತಿದೆ’ ಎಂದ ಖ್ಯಾತ ನಟಿ ಐಶ್ವರ್ಯ !!

Actress Aishwarya : ಕೆಲವು ನಟ-ನಟಿಯರೇ ಹಾಗೆ. ಯಾವ ಸಂದರ್ಭದಲ್ಲಿ ಯಾವ ಹೇಳಿಕೆ ನೀಡಬೇಕು ಎಂದು ಗೊಂದಲಕ್ಕೊಳಗಾಗಿ ಏನೇನೋ ಮಾತನಾಡಿ ಸಖತ್ ಟ್ರೋಲ್ ಆಗುತ್ತಾರೆ. ಅಂತೆಯೇ ಇದೀಗ ಕಾರ್ಯಕ್ರಮವೊಂದರಲ್ಲಿ ಖ್ಯಾತ ನಿರೂಪಕಿ ಹಾಗೂ ನಟಿಯಾಗಿರುವ ಐಶ್ವರ್ಯ ಅವರು ಸಚಿವರಿದ್ದ ವೇದಿಕೆಯಲ್ಲಿ ಮಕ್ಕಳು ಮಾಡಿಕೊಳ್ಳುವ ಬಯಕೆಯನ್ನು ಹೊರಹಾಕಿದ್ದಾರೆ.

ಹೌದು, ಟಿವಿ ನಿರೂಪಕಿಯಾಗಿ ಚಿತ್ರಲೋಕಕ್ಕೆ ಕಾಲಿಟ್ಟ ಐಶ್ವರ್ಯಾ(Actress aishwarya)ತಮಿಳು ಮತ್ತು ತೆಲುಗಿನಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ, ತಮ್ಮ ನಟನೆಗೆ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಈ ನಟಿ ಇತ್ತೀಚೆಗೆ ತಮಿಳುನಾಡಿನ ಶ್ರೀಲಂಕಾದ ನುವಾರಾ ಎಲಿಯಾ ಜಿಲ್ಲೆಯಲ್ಲಿ ಆಯೋಜಿಸಿದ್ದ ಪೊಂಗಲ್ ಹಬ್ಬಕ್ಕೆ ವಿಶೇಷ ಅತಿಥಿಯಾಗಿ ಆಗಮಿಸಿದ್ದರು. ಇದೇ ಕಾರ್ಯಕ್ರಮಕ್ಕೆ ಲಂಕಾ ಸಚಿವ ಜೀವನ್(Jeevan) ಎಂಬುವರು ಕೂಡ ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ನಟಿ ಐಶ್ವರ್ಯ ತಮ್ಮ ಮನದ ಬಯಕೆಗಳನ್ನು ಹೊರ ಹಾಕಿದ್ದಾರೆ.

‘ಕಾರ್ಯಕ್ರಮಕ್ಕೆ ಬರುವ ಮುಂಚೆ ಸಚಿವರಿಗೆ ವಯಸ್ಸಾಗಿರುತ್ತದೆ ಅಂತಾ ನಾನು ಅಂದುಕೊಂಡಿದ್ದೆ. ಆದರೆ, ಸಚಿವರು ಯುವಕರಾಗಿದ್ದು, ಹ್ಯಾಂಡ್‌ಸಮ್’ ಎನ್ನುತ್ತಾ ವೇದಿಕೆ ಮೇಲೆಯೇ ನಾಚಿ ನೀರಾದರು. ಬಳಿಕ ಸಚಿವರನ್ನು ಹಾಡಿ ಹೊಗಳಿದ ಐಶ್ವರ್ಯ ನನಗೂ ಮದುವೆಯಾಗಿ, ಮಕ್ಕಳು ಮಾಡಿಕೊಳ್ಳುವ ಬಯಕೆ ಇದೆ ಎಂದು ಓಪನ್ ಆಗಿ ಹೇಳಿಬಿಟ್ಟರು. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನು ಕಂಡ ನೆಟ್ಟಿಗರು ಸಚಿವರಿಗೆ ಐಶ್ವರ್ಯ ಗಾಳ ಹಾಕುತ್ತಿದ್ದಾರೆ ಎಂದು ಕಾಲೆಳೆದಿದ್ದಾರೆ.

Leave A Reply

Your email address will not be published.