Raipur: ನಾನು ರಾಮ, ಕೃಷ್ಣ ಹಾಗೂ ಯಾವ ಹಿಂದೂ ದೇವರನ್ನು ನಂಬಲ್ಲ – ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಶಪಥ ಮಾಡಿಸಿದ ಶಿಕ್ಷಕ !!
Raipur: ಬೇಲಿಯೇ ಎದ್ದು ಹೊಲ ಮೆಯ್ದರೆ ಏನು ಗತಿ. ಇಂಥದ್ದೇ ಒಂದು ಪ್ರಕರಣ ಇದೀಗ ರಾಯ್ಪುರದ ಶಾಲೆಯೊಂದರಲ್ಲಿ ನಡೆದಿದ್ದು, ಭಾರೀ ಆಕ್ರೋಶ ವ್ಯಕ್ತವಾಗಿದೆ.
ಇದನ್ನೂ ಓದಿ: Andrapradesh: ಸುಟ್ಟು ಕರಕಲಾದ ಹೆಣ – ಪೋಸ್ಟ್ ಮಾರ್ಟಂ ಆಗುತ್ತಿದ್ದಂತೆ ಸತ್ತ ವ್ಯಕ್ತಿಂದಲೇ ಬಂತು ಫೋನ್ ಕಾಲ್..!!
ಹೌದು, ಜಾತಿ, ಭೇಧ ಮರೆತು ಒಂದಾಗಿ ಬಾಳಿ ಎಂದು ಹೇಳಿಕೊಡುವ ಶಾಲಾ ಶಿಕ್ಷಕಿಯೇ ವಿದ್ಯಾರ್ಥಿಗಳಿಗೆ ಕೋಮುವಾದ ಸೃಷ್ಟಿಯ ಪಾಠ ಹೇಳಿಕೊಟ್ಟಿದ್ದಾಳೆ. ರಾಯ್ಪರದ(Raypur) ಬಿಲಾಸ್ಪುರ ಜಿಲ್ಲೆಯಲ್ಲಿ ಅತ್ಯಂತ ಗಂಭೀರ ಪ್ರಕರಣವೊಂದು ಬೆಳಕಿಗೆ ಬಂದಿದ್ದು ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯರು ಮಕ್ಕಳಿಗೆ ಮತ್ತು ಕೆಲವು ಯುವಕರಿಗೆ ರಾಮ, ಕೃಷ್ಣ ಸೇರಿ ಯಾವುದೇ ಹಿಂದೂ ದೇವರು ಮತ್ತು ದೇವತೆಗಳನ್ನು ನಂಬುವುದಿಲ್ಲ ಎಂದು ಪ್ರಮಾಣ ವಚನ ಬೋಧಿಸಿರುವ ಘಟನೆ ನಡೆದಿದೆ.
ಅಂದಹಾಗೆ ಈ ಶಿಕ್ಷಕ ವಿದ್ಯಾರ್ಥಿಗಳಿಗೆ ಹಿಂದೂ ಧರ್ಮದಲ್ಲಿ ಅಪನಂಬಿಕೆ ಹುಟ್ಟಿಸಿ ಬೌದ್ಧ ಧರ್ಮವನ್ನು ಸ್ವೀಕರಿಸಲು ವಿದ್ಯಾರ್ಥಿಗಳಿಗೆ ಹೇಳಿಕೊಟ್ಟಿದ್ದಾಳೆ. ಈ ಹಿನ್ನೆಲೆಯಲ್ಲಿ ಮುಖ್ಯೋಪಾಧ್ಯಾಯನನ್ನು ರತನ್ ಲಾಲ್ ಸರೋವರ್ ಅವರು ಭಾನುವಾರ ಬಂಧಿಸಲಾಗಿದೆ.
ರತನ್ ಅಯೋಧ್ಯೆಯಲ್ಲಿ ರಾಮ ಮಂದಿರ ಪ್ರತಿಷ್ಠಾಪನಾ ದಿನವಾದ ಜನವರಿ 22ರಂದು ತನ್ನ ವಿದ್ಯಾರ್ಥಿಗಳಿಗೆ ಹಾಗೂ ಕೆಲ ಯುವಕರನ್ನು ಕರೆದು “ನಾನು ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರನ್ನು ದೇವರೆಂದು ಪರಿಗಣಿಸುವುದಿಲ್ಲ ಮತ್ತು ಅವರನ್ನು ಪೂಜಿಸುವುದಿಲ್ಲ. ನಾನು ರಾಮ ಮತ್ತು ಕೃಷ್ಣರನ್ನು ದೇವರುಗಳೆಂದು ಪರಿಗಣಿಸುವುದಿಲ್ಲ ಮತ್ತು ಅವರನ್ನು ಪೂಜಿಸುವುದಿಲ್ಲ. ನಾನು ಗೌರಿ, ಗಣಪತಿ ಇತ್ಯಾದಿಗಳನ್ನು ದೇವರೆಂದು ಪರಿಗಣಿಸುವುದಿಲ್ಲ ಅಥವಾ ಹಿಂದೂ ಧರ್ಮದ ಯಾವುದೇ ದೇವರನ್ನು ಪೂಜಿಸುವುದಿಲ್ಲ. ಎಂದು ಅವರು ಮಕ್ಕಳಿಗೆ ಪ್ರತಿಜ್ಞೆ ಮಾಡಿದರು. ನಾನು ಶ್ರದ್ಧಾ ಮಾಡುವುದಿಲ್ಲ ಅಥವಾ ಪಿಂಡ ದಾನ ಮಾಡುವುದಿಲ್ಲ. ನಾನು ಬ್ರಾಹ್ಮಣರನ್ನು ಯಾವುದೇ ಪೂಜೆ ಮಾಡುವಂತೆ ಮಾಡುವುದಿಲ್ಲ. ಸದ್ಯ ಈ ವಿಡಿಯೋ ವೈರಲ್ ಆಗಿದ್ದು ಭಾರೀ ಆಕ್ರೋಶ ಕೇಳಿಬರುತ್ತಿದೆ.