Google Map ಬಳಸಿ ಕಾರು ಚಲಾಯಿಸಿದ ಚಾಲಕ; ಕೊನೆಗೆ ಬಂದು ನಿಂತದ್ದು ಗುಡ್ಡದಲ್ಲಿ!!!

Google Map: ಗೂಗಲ್‌ ಮ್ಯಾಪ್‌ ಬಳಸಿ ಸಂಚರಿಸುವುದು ಇತ್ತೀಚೆಗೆ ಸಾಮಾನ್ಯ. ವಾಹನಗಳಲ್ಲಿ ಗೂಗಲ್‌ ಮ್ಯಾಪ್‌ ತಂತ್ರಜ್ಞಾನವನ್ನು ಅಳವಿಸುತ್ತಾರೆ ಎಲ್ಲರೂ. ಯಾವುದಾದರೂ ಗೊತ್ತಿಲ್ಲದ ಊರಿಗೆ ಹೋಗುವುದಾದರೂ ಗೂಗಲ್‌ ಮ್ಯಾಪ್‌ ತೋರಿಸಿದ ಮಾರ್ಗದ ಮೂಲಕ ಸುಲಭ ರೀತಿಯಲ್ಲಿ ತಲುಪಲು ಬಳಸಿಕೊಳ್ಳುತ್ತಾರೆ.

 

ಕರ್ನಾಟಕದ ತಂಡವೊಂದು ವೀಕೆಂಡ್‌ಗೆ ತಿರುಗಾಡಲು ತಮ್ಮ ಕಾರಿನಲ್ಲಿ ತಮಿಳುನಾಡಿನ ಊಟಿಗೆ ಹೋಗಿದ್ದಾರೆ. ಅಲ್ಲಿ ಇಲ್ಲಿ ಸುತ್ತಾಡಿ ವಾಪಸು ಊರಿಗೆ ಹೊರಟಿದೆ. ಈ ವೇಳೆ ಕಾರು ಚಾಲಕ ಗೂಗಲ್‌ ಮ್ಯಾಪ್‌ ಬಳಸಿದ್ದಾರೆ. ಗೂಗಲ್‌ ಮ್ಯಾಪ್‌ ತೋರಿಸಿ ಶಾರ್ಟ್‌ ಕಟ್‌ ಮಾರ್ಗದಲ್ಲೇ ಬಂದು ಸೀದಾ ತಮಿಳುನಾಡಿನ ಗುಡಲೂರು ಗುಡ್ಡದ ಮೇಲೆ ಹೋಗಿ ನಿಂತಿದೆ. ಮುಂದೆ ನೋಡಿದ ರಸ್ತೆಗಳಿಲ್ಲ, ಇರುವುದು ಬರೀ ಮೆಟ್ಟಿಲು. ಇದೀಗ ಕಾರು ಅರ್ಧದಾರಿಯಲ್ಲಿ ನಿಂತಿದೆ.

ಹಿಂದೆ-ಮುಂದೆ ಹೋಗದೆ ಸಿಕ್ಕಾಕ್ಕೊಂಡಿದೆ. ನಂತರ ಮೆಟ್ಟಿಲುಗಳಲ್ಲಿ ಇದ್ದ ಕಾರನ್ನು ಸಾರ್ವಜನಿಕರು ಹಾಗೂ ಪೊಲೀಸರು ಸೇರಿ ಕಾರನ್ನು ರಸ್ತೆಗೆ ತರಲು ಸಹಾಯ ಮಾಡಿದ್ದಾರೆ.

Leave A Reply

Your email address will not be published.