NCMEC: ಯಾರಿಗೂ ತಿಳಿಯಲ್ಲ ಎಂದು ಫೋನಲ್ಲಿ ಮಕ್ಕಳ ಅಶ್ಲೀಲ ವಿಡಿಯೋ ನೋಡ್ತೀರಾ?! ಹಾಗಿದ್ರೆ ಇಲ್ಲಿದೆ ನೋಡಿ ಶಾಕಿಂಗ್ ನ್ಯೂಸ್!!

 

NCMEC: ಯಾರಿಗೂ ತಿಳಿಯಲ್ಲವೆಂದು ಮಕ್ಕಳಿಗೆ ಸಂಬಂಧಿಸಿದ ಅಶ್ಲೀಲ ಚಿತ್ರಗಳು, ವಿಡಿಯೋಗಳ ವೀಕ್ಷಣೆ, ಡೌನ್‌ಲೋಡ್‌ ಮಾಡುತ್ತಿದ್ದರೆ ಇಲ್ಲಿದೆ ನೋಡಿ ಶಾಕಿಂಗ್ ನ್ಯೂಸ್ ಎದುರಾಗಿದ್ದು, ಇಂತವರ ಮೇಲೆ ಕೇಂದ್ರವು ನಿಗಾವಹಿಸಿದೆ.

ಹೌದು, ಮೊಬೈಲ್ ನಲ್ಲಿ ಮಕ್ಕಳ ಅಶ್ಲೀ ದೃಶ್ಯ ವೀಕ್ಷಣೆ, ಡೌನ್ಲೋಡ್ ಹಂಚಿಕೆ ಮಾಡುವವರಿಗೆ ಮುಖ್ಯ ಎಚ್ಚರಿಕೆಯ ಹಾಗೂ ಶಾಕಿಂಗ್  ಇಲ್ಲಿದೆ. ಮೊಬೈಲ್ ದೃಶ್ಯ ವೀಕ್ಷಣೆ ಮೇಲೆ ಕೇಂದ್ರ ಸರ್ಕಾರ ನಿಗಾ ವಹಿಸಿದೆ. ಎನ್‌ಸಿಎಂಇಸಿ ವಿಭಾಗ ನಿಮ್ಮ ಮೊಬೈಲ್ ಮೇಲೆ ಮತ್ತು ಇತರ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣು ಇಟ್ಟಿದೆ. ಅಲ್ಲದೆ ಗೂಗಲ್‌ನಲ್ಲಿ(Googel) ಸೇರಿದಂತೆ ಯಾವುದೇ ಅಂತರ್ಜಾಲ ವೇದಿಕೆಯಲ್ಲಿ ಸರ್ಚ್‌ ಮಾಡಿದರೂ ಬಂಧನ ಸೇರಿದಂತೆ ಕಠಿಣ ಕ್ರಮಕ್ಕೆ ಗುರಿಪಡಿಸುವ ಕಾರ್ಯತಂತ್ರವನ್ನು ರೂಪಿಸಿದೆ. ಈ ಹಿನ್ನೆಲೆಯಲ್ಲಿ ಇದೀಗ ರಾಮನಗರ ಜಿಲ್ಲಾ ಪೊಲೀಸ್ ಠಾಣೆಯಲ್ಲಿ ಮಕ್ಕಳ ದೃಶ್ಯಗಳ ವೀಕ್ಷಣೆ ಮತ್ತು ಡೌನ್ಲೋಡ್ ಮಾಡಿಕೊಂಡ ಇಬ್ಬರ ವಿರುದ್ಧ ಪ್ರತ್ಯೇಕ ಪ್ರಕರಣ ದಾಖಲಾಗಿದೆ.

ಹೇಗೆ ಕಂಡು ಹಿಡಿಯುತ್ತಾರೆ?
ದೇಶದ ಯಾವುದೇ ಭಾಗದಲ್ಲಿ ಮೊಬೈಲ್‌, ಡೆಸ್ಕ್‌ಟಾಪ್‌ಗಳಲ್ಲಿ ಮಕ್ಕಳ ಅಶ್ಲೀಲ ಚಿತ್ರ, ವಿಡಿಯೋಗೆ ಸರ್ಚ್‌ ಮಾಡಿದರೂ ಕೂಡಲೇ ಅದರ ಮಾಹಿತಿ ದಿಲ್ಲಿಯಲ್ಲಿರುವ ನ್ಯಾಷನಲ್‌ ಸೆಂಟರ್‌ ಫಾರ್‌ ಮಿಸ್ಸಿಂಗ್‌ ಆ್ಯಂಡ್‌ ಎಕ್ಸ್‌ಫ್ಲಾಯ್ಟೆಡ್‌ ಚಿಲ್ಡ್ರನ್‌ (NCMEC) ಸೆಂಟರ್‌ಗೆ ರವಾನೆಯಾಗುತ್ತದೆ

ಮೊಬೈಲ್ ನಲ್ಲಿ ಆನ್ಲೈನ್ ಪೋರ್ನ್ ಸೈಟ್ ಗಳ ಮೂಲಕ ಮಕ್ಕಳ ಅಶ್ಲೀಲ ಚಿತ್ರ ವೀಕ್ಷಣೆ, ಡೌನ್ಲೋಡ್ ಮಾಡಿದ ಮತ್ತು ಅಪ್ಲೋಡ್ ಮಾಡಿದ ವ್ಯಕ್ತಿಗಳ ವಿವರ, ಐಪಿ ವಿಳಾಸ, ಮೊಬೈಲ್ ಸಂಖ್ಯೆಯೊಂದಿಗೆ ಮಾಹಿತಿ ಸಂಗ್ರಹಿಸಿ ಅದನ್ನು ಸಿಐಡಿ ವಿಭಾಗಕ್ಕೆ ಕಳುಹಿಸಲಾಗುತ್ತದೆ. ಸಿಐಡಿ ಐಟಿ ಸೆಲ್ ವಿಭಾಗದ ಅಧಿಕಾರಿಗಳು ಅದನ್ನು ಪರಿಶೀಲಿಸಿ ಜಿಲ್ಲಾ ಸೈಬರ್ ಘಟಕಕ್ಕೆ ಕಳುಹಿಸಿಕೊಡುತ್ತಾರೆ. ಸಳಿಕ ಸ್ಥಳೀಯ ಪೊಲೀಸರು ವ್ಯಕ್ತಿಯ ಮನೆಗೇ ದಾಳಿ ಮಾಡುವಷ್ಟು ಸುಸಜ್ಜಿತ ವ್ಯವಸ್ಥೆ ಇದೆ. ಇದರ ಮೂಲಕ ದೇಶದಲ್ಲಿ ಹಲವರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ. ಇಂತಹ ಕೃತ್ಯವೆಸಗಿದವರಿಗೆ 5 ವರ್ಷದವರೆಗೆ ಜೈಲು ಶಿಕ್ಷೆ 10 ಲಕ್ಷ ರೂ.ವರೆಗೆ ದಂಡ ವಿಧಿಸುವ ಅವಕಾಶವಿದೆ.

Leave A Reply

Your email address will not be published.